ನವದೆಹಲಿ/ಟೆಹರಾನ್: ಹೆಲಿಕಾಪ್ಟರ್ ದುರಂತದಲ್ಲಿ (Helicopter Tragedy) ಮೃತಪಟ್ಟ ಇರಾನ್ (Iran) ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಗೌರವಾರ್ಥ ದೇಶಾದ್ಯಂತ ಮಂಗಳವಾರ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಡಾ. ಸೆಯ್ಯದ್ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಮೃತರ ಆತ್ಮಗಳಿಗೆ ಗೌರವ ಸೂಚಕವಾಗಿ ಮಂಗಳವಾರ ಪ್ರತಿನಿತ್ಯ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು (National Flag) ಅರ್ಧ ಎತ್ತರದಲ್ಲಿ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Advertisement
Government of India declares One Day State Mourning on May 21, 2024 (Tuesday) as a mark of respect. (2/2)
— Spokesperson, Ministry of Home Affairs (@PIBHomeAffairs) May 20, 2024
Advertisement
ಮೃತಪಟ್ಟಿದ್ದು ಹೇಗೆ?
ಭಾನುವಾರ ರೈಸಿ ಪಯಣಿಸ್ತಿದ್ದ ಹೆಲಿಕಾಪ್ಟರ್ ಪ್ರಕೃತಿ ವೈಪರಿತ್ಯದ ಪರಿಣಾಮ ಜೋಲ್ಫಾ ನಗರ ಬಳಿಯ ದಟ್ಟ ಕಾನನದಲ್ಲಿ ಪತನವಾಗಿದೆ. ದುರಂತದಲ್ಲಿ ಅಧ್ಯಕ್ಷ ರೈಸಿ, ವಿದೇಶಾಂಗ ಮಂತ್ರಿ ಹುಸೈನ್ ಅಮಿರ್ ಅಬ್ದುಲ್ಲಲಹಿಯನ್, ಅಜರ್‌ಬೈಜಾನ್ ಪ್ರಾಂತ್ಯದ ಗವರ್ನರ್ ಮಲಿಕ್ ಸೇರಿ ಹಲವರು ಮೃತಪಟ್ಟಿದ್ದಾರೆ.
Advertisement
ನಿನ್ನೆಯಿಂದಲೂ ಹೆಲಿಕಾಪ್ಟರ್ ಪತನವಾದ ಸ್ಥಳದ ಹುಡುಕಾಟ ನಡೆದಿತ್ತು. ಇಂದು ಬೆಳಗ್ಗೆ ದುರಂತ ಸ್ಥಳ ಪತ್ತೆಯಾಗಿದೆ. ಪ್ರಧಾನಿ ಮೋದಿ (PM Narendra Modi) ಸೇರಿ ಜಗತ್ತಿನ ಗಣ್ಯರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.
Advertisement
2021ರಲ್ಲಿ ಇರಾನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರೈಸಿ ಅವರನ್ನು, ಇರಾನ್‌ನ ಸುಪ್ರೀಂ ನೇತಾರ ಅಯತೊಲ್ಲಾ ಖೊಮೆನಿ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು. ಕಟ್ಟರ್ ಇಸ್ಲಾಮಿಕ್‌ವಾದಿಯಾಗಿದ್ದ ರೈಸಿ, ಬುರ್ಖಾ ಕಡ್ಡಾಯ ಮಾಡಿದ್ದರು. ಇಂಟರ್ನೆಟ್ ಬಳಕೆಗೆ ಸೆನ್ಸಾರ್ ಜಾರಿ ಮಾಡಿದ್ದರು. ಇದನ್ನೂ ಓದಿ: 2014 ರಿಂದ 2022ರವರೆಗೂ ಆಪ್‌ಗೆ ವಿದೇಶದಿಂದ ಫಂಡಿಂಗ್ – ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ
ಕೆಲವು ದಿನಗಳ ಇಸ್ರೇಲ್ (Israel) ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನದ (Pakistan) ಮೇಲೆ ಏರ್ ಸ್ಟ್ರೈಕ್ ಮಾಡಿಸಿದ್ದರು. ಭಾರತದ (India) ಪರ ಒಲವು ಹೊಂದಿದ್ದ ಇವರು ಮೋದಿ ಬಳಿ ತಮ್ಮ ಸಾಮರ್ಥ್ಯವನ್ನು ಬಳಸಿ ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದರು.