ನವದೆಹಲಿ: ಅಮೆರಿಕದೊಂದಿಗೆ (USA) ಮೆಗಾ ವ್ಯಾಪಾರ ಒಪ್ಪಂದದ ಭಾಗವಾಗಿ ಭಾರತ (India) ಬೌರ್ಬನ್ ವಿಸ್ಕಿಯ (Bourbon Whiskey) ಮೇಲಿನ ಆಮದು ಸುಂಕವನ್ನು 50% ಕ್ಕೆ ಇಳಿಸಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ಮಾತುಕತೆ ನಡೆಸುವ ಮುನ್ನವೇ ಫೆ.13 ರಂದು ಬೌರ್ಬನ್ ವಿಸ್ಕಿಯ ಮೇಲಿನ ಕಸ್ಟಮ್ಸ್ ಸುಂಕ ಕಡಿತ ಮಾಡಲಾಗಿದೆ.
ಇತರ ಮದ್ಯಗಳ ಆಮದಿನ ಮೇಲಿನ ಮೂಲ ಕಸ್ಟಮ್ಸ್ ಸುಂಕದಲ್ಲಿ ಯಾವುದೇ ಕಡಿತವಾಗಿಲ್ಲ. ಈ ಮದ್ಯಗಳ ಮೇಲಿನ ಸುಂಕ 100% ಇದೆ.
ಬೌರ್ಬನ್ ವಿಸ್ಕಿಯ ಮೇಲೆ ಈ ಮೊದಲು 150% ಆಮದು ಸುಂಕವನ್ನು ವಿಧಿಸಲಾಗುತ್ತಿತ್ತು. ಇನ್ನು ಮುಂದೆ 100% ಸುಂಕ ಇರಲಿದೆ. ಭಾರತವು 2023-24 ರಲ್ಲಿ 2.5 ಮಿಲಿಯನ್ ಡಾಲರ್ ಮೌಲ್ಯದ ಬೌರ್ಬನ್ ವಿಸ್ಕಿಯನ್ನು ಆಮದು ಮಾಡಿಕೊಂಡಿದೆ.
ಅಮೆರಿಕ ವಸ್ತುಗಳಿಗೆ ಭಾರತದಲ್ಲಿ ಭಾರೀ ಪ್ರಮಾಣದ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಅಷ್ಟೊಂದು ತೆರಿಗೆ ವಿಧಿಸುವುದಿಲ್ಲ. ಇನ್ನು ಮುಂದೆ ಈ ರೀತಿ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಭಾರತ ಎಷ್ಟು ಪ್ರಮಾಣದ ತೆರಿಗೆ ವಿಧಿಸುತ್ತದೋ ಅಷ್ಟೇ ಪ್ರಮಾಣದ ತೆರಿಗೆಯನ್ನು ನಾವು ವಿಧಿಸುತ್ತೇವೆ ಎಂದು ಟ್ರಂಪ್ ಘೋಷಣೆ ಮಾಡಿದ್ದರು.
ಬೌರ್ಬನ್ ವಿಸ್ಕಿ ವಿಶೇಷತೆ ಏನು?
ಬೌರ್ಬನ್ ವಿಸ್ಕಿ ಅಮೆರಿಕದ ಏಕೈಕ ಸ್ಥಳೀಯ ಮದ್ಯವಾಗಿದ್ದು, ಇದನ್ನು ಕಾರ್ನ್, ರೈ ಅಥವಾ ಗೋಧಿ ಮತ್ತು ಮಾಲ್ಟ್‌ನಿಂದ ತಯಾರಿಸಲಾಗುತ್ತದೆ. ಇದು ಕನಿಷ್ಠ 51 ಪ್ರತಿಶತ ಕಾರ್ನ್ ಅನ್ನು ಹೊಂದಿರುತ್ತದೆ. 1964 ರಲ್ಲಿ ಅಮೆರಿಕದ ಸಂಸತ್ತು ಬೌರ್ಬನ್ ವಿಸ್ಕಿಯನ್ನು ಅಮೆರಿಕದ ವಿಶಿಷ್ಟ ಉತ್ಪನ್ನ ಎಂದು ಘೋಷಿಸಿತು.
ಹೊಸ ಬಿಳಿ ಓಕ್ ಬ್ಯಾರೆಲ್‌ನಲ್ಲಿ ಇಡಲಾಗುತ್ತದೆ. ಬೌರ್ಬನ್ ಅನ್ನು ಬೌರ್ಬನ್ ವಿಸ್ಕಿ ಎಂದು ಕರೆಯಲು, ಅದಕ್ಕೆ ಯಾವುದೇ ಹೆಚ್ಚುವರಿ ಬಣ್ಣ ಅಥವಾ ಸುವಾಸನೆ ಇರಬಾರದು. ಅಂತಿಮವಾಗಿ ಇದು 80 ರಿಂದ 160 ಪ್ರೂಫ್ (ಆಲ್ಕೋಹಾಲ್‌ನ ಶೇಕಡಾವಾರು) ನಡುವೆ ಇರಬೇಕು. ಇದನ್ನೂ ಓದಿ: ಈಗ 5 ತಿಂಗಳ ಮಗುವಿನ ತಂದೆ – ಒಟ್ಟು 13 ಮಕ್ಕಳ ಅಪ್ಪನಾದ ಎಲಾನ್ ಮಸ್ಕ್!
ಬೌರ್ಬನ್ ಅನ್ನು ಮೊದಲು 1800ರ ದಶಕದಲ್ಲಿ ಅಮೆರಿಕದ ರಾಜ್ಯವಾದ ಕೆಂಟುಕಿಯಲ್ಲಿ ತಯಾರಿಸಲಾಯಿತು. ಬೌರ್ಬನ್ ವಿಸ್ಕಿಗೆ ಬಳಸಿದ ಸುಟ್ಟ ಬ್ಯಾರೆಲ್‌ಗಳನ್ನು ಸಿಂಗಲ್ ಮಾಲ್ಟ್ ಸ್ಕಾಚ್ ಮುಂತಾದ ಇತರ ಮದ್ಯಗಳಿಗೆ ಕಳುಹಿಸಲಾಗುತ್ತದೆ.