ವೆಲಿಂಗ್ಟನ್: ಹ್ಯಾಮಿಲ್ಟನ್ ಏಕದಿನ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ 35 ರನ್ ಗೆಲುವು ಪಡೆದು 4-1 ಅಂತರದಲ್ಲಿ ಸರಣಿ ಗೆಲುವು ಪಡೆದಿದೆ.
ಆಸೀಸ್ ವಿರುದ್ಧ ಸರಣಿ ಗೆಲುವಿನ ಬಳಿಕ ಕಿವೀಸ್ ವಿರುದ್ಧದವೂ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ. ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 253 ರನ್ ಗುರಿ ನೀಡಿತ್ತು. ಟೀಂ ಇಂಡಿಯಾ ಗುರಿ ಬೆನ್ನತ್ತಿದ್ದ ಕಿವೀಸ್ 44.1 ಓವರ್ ಗಳಲ್ಲಿ 217 ರನ್ ಗಳಿಗೆ ಅಲೌಟ್ ಆಗುವ ಮೂಲಕ ಸೋಲುಂಡಿತು. ಟೀಂ ಇಂಡಿಯಾ ಮೊದಲ ಬಾರಿಗೆ ನ್ಯೂಜಿಲೆಂಡ್ ನೆಲದಲ್ಲಿ 4-1 ಅಂತರದಲ್ಲಿ ಸರಣಿ ಜಯ ಪಡೆದಿದ್ದು, ಈ ಹಿಂದೆ 2009 ರಲ್ಲಿ 3-1 ಅಂತರದಲ್ಲಿ ಗೆದ್ದಿತ್ತು.
Advertisement
Advertisement
ಟೀಂ ಇಂಡಿಯಾ ಗುರಿ ಬೆನ್ನತ್ತಿದ ಕಿವೀಸ್ ಬ್ಯಾಟ್ಸ್ ಮನ್ ಗಳಿಗೆ ಟೀಂ ಇಂಡಿಯಾ ಬೌಲರ್ ಗಳು ತಿರುಗೇಟು ನೀಡಿದರು. ಕಿವೀಸ್ ತಂಡಕ್ಕೆ ಮೊದಲ ಅಘಾತ ನೀಡಿದ ಶಮಿ, ಆರಂಭಿಕರಾದ ಹೆನ್ರಿ 8 ರನ್ ಹಾಗೂ 24 ರನ್ ಗಳಿಸಿದ್ದ ಕಾಲಿನ್ ಮನ್ರೊ ವಿಕೆಟ್ ಪಡೆದು ಆರಂಭಿಕ ಯಶಸ್ಸು ತಂದಿತ್ತರು. ಇತ್ತ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೇ ಬೌಲಿಂಗ್ ನಲ್ಲೂ ಮಿಂಚಿದ ಅಲೌಂಡರ್ ಹಾರ್ದಿಕ್ ಪಾಂಡ್ಯ, ಕಿವೀಸ್ ಮಾಜಿ ನಾಯಕ ರಾಸ್ ಟೇಲರ್ ವಿಕೆಟ್ ಪಡೆದರು. ಈ ವೇಳೆಗೆ ನ್ಯೂಜಿಲೆಂಡ್ ತಂಡ 38 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Advertisement
ಈ ಹಂತದಲ್ಲಿ ವಿಕೆಟ್ ಕೀಪರ್ ಟಾಮ್ ಲೇಥಮ್ ನಾಯಕ ವಿಲಿಯಮ್ಸನ್ ಜೊತೆಗೂಡಿ ಎಚ್ಚರಿಕೆ ಆಟವಾಡುವ ಮೂಲಕ ಚೇತರಿಕೆ ನೀಡಲು ಯತ್ನಿಸಿದರು. ಈ ಜೋಡಿ 4ನೇ ವಿಕೆಟ್‍ಗೆ 67 ರನ್ ಜೊತೆಯಾಟ ನೀಡಿತು. ಈ ವೇಳೆ ದಾಳಿ ನಡೆಸಿದ ಕೇಧರ್ ಜಾಧವ್ 39 ರನ್ ಗಳಿಸಿದ್ದ ವಿಲಿಯಮ್ಸನ್ ವಿಕೆಟ್ ಪಡೆದರು. ಬಳಿಕ ಚಹಲ್ 67 ರನ್ ಗಳಿಸಿದ್ದ ಲೇಥಮ್ ಹಾಗೂ 11 ರನ್ ಗಳಿಸಿದ್ದ ಕಾಲಿನ್ ಡಿ ಗ್ರಾಂಡ್‍ಹೋಮ್ ವಿಕೆಟ್ ಪಡೆದು ಡಬಲ್ ಶಾಕ್ ನೀಡಿದರು. ಇತ್ತ 44 ರನ್ ಗಳಿಸಿ ಭಾರತಕ್ಕೆ ಅಪಾಯವಾಗಿದ್ದ ನೀಶಮ್ ರನ್ನು ಧೋನಿ ರನೌಟ್ ಮಾಡುವ ಮೂಲಕ ಪೆವಿಲಿಯನ್‍ಗೆ ಅಟ್ಟಿದ್ದರು.
Advertisement
36.2 ಓವರ್ ಗಳಲ್ಲಿ 176 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ಕಿವೀಸ್ ಪಡೆಗೆ ಒತ್ತಡ ಹೇರಲು ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾಗಿದ್ದರು. ಅಂತಿಮ ಹಂತದಲ್ಲಿ ನ್ಯೂಜಿಲೆಂಡ್ ತಂಡ ಚೇತರಿಸಲು ಕೊಳ್ಳಲು ಅವಕಾಶ ನೀಡದ ಬೌಲರ್ ಗಳು ಸತತವಾಗಿ ವಿಕೆಟ್ ಪಡೆದರು. ಈ ಮೂಲಕ 217 ರನ್ ಗಳಿಗೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಭಾರತ ಪರ ಯಶಸ್ವಿ ಬೌಲಿಂಗ್ ದಾಳಿ ನಡೆಸಿದ ಶಮಿ ಹಾಗೂ ಪಾಂಡ್ಯ ತಲಾ 2 ವಿಕೆಟ್ ಪಡೆದರೆ. ಚಹಲ್ ಮತ್ತೊಮ್ಮೆ ಮಿಂಚಿ 3 ವಿಕೆಟ್ ಉರುಳಿಸಿದರು. ಉಳಿದಂತೆ ಜಾದವ್, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 18 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು ಆದರೆ ಮಧ್ಯಮ ಕ್ರಮಾಂಕದಲ್ಲಿನ ಆಟಗಾರರರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ 49.5 ಓವರ್ ಗಳಲ್ಲಿ ಅಲೌಟ್ ಆಗುವ ಮೂಲಕ 252 ರನ್ ಗಳಿಸಿತ್ತು.
ಟೀಂ ಇಂಡಿಯಾ ಪರ ಅಂಬಟಿ ರಾಯುಡು ಅರ್ಧಶತಕ, ವಿಜಯ್ ಶಂಕರ್, ಕೇದಾರ್ ಜಾಧವ್ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಭಾರತ ಸವಾಲಿನ ಮೊತ್ತಗಳಿಸಲು ಕಾರಣವಾಯಿತು. ಅಂಬಾಟಿ ರಾಯುಡು ಮತ್ತು ವಿಜಯ್ ಶಂಕರ್ 5ನೇ ವಿಕೆಟಿಗೆ 98 ರನ್‍ಗಳ ಜೊತೆಯಾಟವಾಡಿ ಭಾರತವನ್ನು ಕುಸಿತದಿಂದ ಮೇಲಕ್ಕೆ ಎತ್ತಿದರು. 45 ರನ್(64 ಎಸೆತ, 4 ಬೌಂಡರಿ) ಗಳಿಸಿದ್ದಾಗ ವಿಜಯ್ ಶಂಕರ್ ರನೌಟ್ ಆದರು. 5ನೇ ವಿಕೆಟ್ ಅಂಬಾಟಿ ರಾಯುಡು ಮತ್ತು ಜಾಧವ್ 74 ರನ್ ಜೊತೆಯಾಟವಾಡಿದರು.
ಮೂರನೇ ಕ್ರಮಾಂಕದಲ್ಲಿ ಬಂದು ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಪಿಚ್ ನಲ್ಲಿ ನಿಂತು ಆಡುತ್ತಿದ್ದ ರಾಯುಡು 90 ರನ್(113 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ಕ್ಯಾಚ್ ನೀಡಿ ಔಟಾದರು. ಉತ್ತಮವಾಗಿ ಆಡುತ್ತಿದ್ದ ಜಾಧವ್ 34 ರನ್ (45 ಎಸೆತ, 5 ಬೌಂಡರಿ) ಗಳಿಸಿದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಬಿರುಸಿನ ಆಟ ಪ್ರದರ್ಶಿಸಿದರು. ಅಂತಿಮವಾಗಿ ಪಾಂಡ್ಯ 45 ರನ್(22 ಎಸೆತ, 2 ಬೌಂಡರಿ, 5 ಸಿಕ್ಸರ್) ಔಟಾದರು. ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ 8ನೇ ವಿಕೆಟ್ ಗೆ 45 ರನ್ ಜೊತೆಯಾಟವಾಡಿದ್ದು, ಇದರಲ್ಲಿ 42 ರನ್ ಪಾಂಡ್ಯ ಹೊಡೆದಿದ್ದರು. ನ್ಯೂಜಿಲೆಂಡ್ ಪರ ಹೆನ್ರಿ 4 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದು ಮಿಂಚಿದರು.
90 ರನ್ ಸಿಡಿಸಿದ ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರೆ, ಮೊಹಮ್ಮದ್ ಶಮಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Game Over! #TeamIndia clinch the final ODI by 35 runs and wrap the series 4-1 #NZvIND ???????????????? pic.twitter.com/2cRTTnS8Ss
— BCCI (@BCCI) February 3, 2019
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv