– ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ
ಬ್ರಿಡ್ಜ್‌ಟೌನ್(ಬಾರ್ಬಡೋಸ್): ಭಾರತ ಟಿ20 ಚಾಂಪಿಯನ್ (T20 Champion) ಆಗುವುದರ ಜೊತೆ ಟಿ20 ವಿಶ್ವಕಪ್‌ನಲ್ಲಿ ವಿಶ್ವದಾಖಲೆ (World Record) ನಿರ್ಮಿಸಿದೆ. ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕಪ್ ಜಯಿಸಿದ ಏಕಮಾತ್ರ ತಂಡ ಎಂಬ ಹೆಗ್ಗಳಿಕೆಗೆ ಭಾರತ (Team India) ಪಾತ್ರವಾಗಿದೆ.
ಹೌದು. ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ (South Africa) ತಂಡಗಳು ಅಜೇಯವಾಗಿ ಫೈನಲ್ (Final) ಪ್ರವೇಶಿಸಿದ್ದವು. ಇದುವರೆಗಿನ ಟಿ20 ಇತಿಹಾಸದಲ್ಲಿ ಎರಡು ತಂಡಗಳು ಅಜೇಯವಾಗಿ ಫೈನಲ್ ತಲುಪಿರುವುದು ಇದೇ ಮೊದಲು. ಎರಡು ತಂಡಗಳು ಗುಂಪು, ಸೂಪರ್ 8 ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿತ್ತು. ಇದನ್ನೂ ಓದಿ: 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ
ದಕ್ಷಿಣ ಆಫ್ರಿಕಾ 8 ಜಯದೊಂದಿಗೆ ಫೈನಲ್ ಪ್ರವೇಶಿಸಿದ್ದರೆ ಗುಂಪು ಹಂತದಲ್ಲಿ ಕೆನಡಾದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 7 ಜಯದೊಂದಿಗೆ ಭಾರತ ಫೈನಲ್ ಪ್ರವೇಸಿಸಿತ್ತು. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಅಜೇಯವಾಗಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ತಂಡ ಎಂಬ ವಿಶಿಷ್ಟ ಸಾಧನೆ ನಿರ್ಮಾಣವಾಗುತಿತ್ತು. ಇದನ್ನೂ ಓದಿ: ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್
ಹಾಗೆ ನೋಡಿದರೆ ಭಾರತ ಕಠಿಣ ಎದುರಾಳಿ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಲೀಗ್‌ನಲ್ಲಿ ಪಾಕಿಸ್ತಾನ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸೆಮಿಯಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ, ಶ್ರೀಲಂಕಾ, ಸೂಪರ್ 8 ರಲ್ಲಿ ಇಂಗ್ಲೆಂಡ್, ವಿಂಡೀಸ್ ತಂಡವನ್ನು ಮಣಿಸಿತ್ತು. ಸೆಮಿಯಲ್ಲಿ ಅಫ್ಘಾನಿಸ್ತಾನ ದಕ್ಷಿಣ ಅಫ್ರಿಕಾಗೆ ಪ್ರಬಲ ಸ್ಪರ್ಧೆ ನೀಡಿರಲಿಲ್ಲ.