Latest

ಭಾರತದಲ್ಲಿ 1,300 ದಾಟಿದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ

Advertisements

ನವದೆಹಲಿ: ಓಮಿಕ್ರಾನ್ ವೇಗವಾಗಿ ವ್ಯಾಪಿಸಿದರೂ, ಡೆಲ್ಟಾದಷ್ಟು ಅಪಾಯಕಾರಿ ಅಲ್ಲ ಅಂತಾ ಇದುವರೆಗೂ ಹೇಳಲಾಗ್ತಿತ್ತು. ಆದರೆ ಇದು ಮುಂದಿನ ದಿನಗಳಲ್ಲಿ ಡೆಲ್ಟಾವನ್ನು ಮೀರಿಸಿ ಪ್ರಮುಖ ವೈರಸ್ ಆಗಿ ವಿಜೃಂಭಿಸಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಓಮಿಕ್ರಾನ್ ಭಾರೀ ವೇಗದಲ್ಲಿ ಹಬ್ಬುತ್ತಿದೆ.

ಅಮೆರಿಕಾ, ಬ್ರಿಟನ್ ಸೇರಿ ಯುರೋಪ್ ದೇಶಗಳಲ್ಲಿ ವಿಜಂಭಿಸ್ತಿದೆ. ಭಾರತದಲ್ಲಿಯೂ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1,300 ದಾಟಿದೆ. ಕೇವಲ ಒಂದೇ ದಿನದಲ್ಲಿ ಒಮಿಕ್ರಾನ್ ಪ್ರಕರಣಗಳ ಪ್ರಮಾಣ ಶೇ.30ರಷ್ಟು ಹೆಚ್ಚಿದೆ. ದೇಶದಲ್ಲಿ ಈವರೆಗೆ 23 ರಾಜ್ಯಗಳಲ್ಲಿ ಓಮಿಕ್ರಾನ್ ಹಬ್ಬಿದೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 23 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ 2 ವರ್ಷದ ಮಗು, 10,12 ವರ್ಷದ ಬಾಲಕಿಯರು ಸೇರಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್‌ ಸ್ಫೋಟ – ಇಂದು 23 ಮಂದಿಯಲ್ಲಿ ದೃಢ

ಆಫ್ರಿಕಾ, ಮಧ್ಯಪ್ರಾಚ್ಯ, ಅಮೆರಿಕಾ, ಯುರೋಪ್ ರಾಷ್ಟ್ರಗಳಿಂದ ಬಂದವರಲ್ಲಿ ಓಮಿಕ್ರಾನ್ ದೃಢಪಟ್ಟಿದೆ. ಅದೃಷ್ಟವಶಾತ್ ಯಾರಲ್ಲಿಯೂ ತೀವ್ರ ಸ್ವರೂಪದ ಸೋಂಕು ಲಕ್ಷಣ ಕಂಡು ಬಂದಿಲ್ಲ. ಈಗಾಗಲೇ ಇಬ್ಬರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಕೇಸ್‍ಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದ್ರೆ 450 ಕೇಸ್ ಇವೆ. ದೆಹಲಿಯಲ್ಲಿ 302ಕ್ಕೆ ಓಮಿಕ್ರಾನ್ ಕೇಸ್ ಹೆಚ್ಚಿದೆ.

ಮಹಾರಾಷ್ಟ್ರದ ಓಮಿಕ್ರಾನ್ ಸೋಂಕಿತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಇದನ್ನು ಓಮಿಕ್ರಾನ್‍ಗೆ ಮೊದಲ ಬಲಿ ಎಂದು ಪರಿಗಣಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಕೇಂದ್ರ ಇರುವಂತಿದೆ. ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಮತ್ತು ಇತರೆ ಕಠಿಣ ನಿಯಮಗಳನ್ನು ಜನವರಿ 15ರವರೆಗೂ ವಿಸ್ತರಿಸಲಾಗಿದೆ. ಅತ್ತ ದಕ್ಷಿಣಾ ಆಫ್ರಿಕಾದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2ವರ್ಷದ ಬಳಿಕ ನೈಟ್ ಕರ್ಫ್ಯೂ ತೆಗೆದುಹಾಕಲಾಗಿದೆ.

Leave a Reply

Your email address will not be published.

Back to top button