ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ತಿಳಿಸಿದ ಸಚಿನ್ ತೆಂಡೂಲ್ಕರ್

Public TV
1 Min Read
sachin tendulkar 1

ಮುಂಬೈ: ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ಸಂಚಾರಿ ಪೊಲೀಸರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದವನ್ನು ತಿಳಿಸಿದ್ದಾರೆ.

Sachin Tendulkar Main

ಟ್ವೀಟ್‌ನಲ್ಲಿ ಏನಿದೆ?: ಕೆಲವು ದಿನಗಳ ಹಿಂದೆ ಆಪ್ತ ಸ್ನೇಹಿತೆಯೊಬ್ಬರು ಗಂಭೀರ ಅಪಘಾತಕ್ಕೆ ಒಳಗಾಗಿದ್ದರು. ದೇವರ ದಯೆ ಹಾಗೂ ಟ್ರಾಫಿಕ್ ಪೋಲೀಸರ ಸಮಯೋಚಿತ ಪ್ರಜ್ಞೆಯಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತಕ್ಕೀಡಾದ ಸ್ನೇಹಿತೆಯನ್ನು ತಕ್ಷಣ ಪೋಲಿಸರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದು ಸರಿಯಾದ ಚಿಕಿತ್ಸೆ ನೀಡಿದ್ದಾರೆ.

ನಂತರ ದಿನದಲ್ಲಿ ಟ್ರಾಫಿಕ್ ಪೋಲಿಸರನ್ನು ಖುದ್ದಾಗಿ ನಾನೇ ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದೇನೆ. ನಮ್ಮ ಸುತ್ತಲೂ ಇಂತಹ ವ್ಯಕ್ತಿಗಳು ಹಲವಾರು ಜನರು ಇರುತ್ತಾರೆ. ಅವರು ತಮ್ಮ ಕರ್ತವ್ಯವನ್ನು ಮೀರಿ ಕೆಲಸ ಮಾಡುತ್ತಾರೆ. ಇಂತವರಿಗೆ ಧನ್ಯವಾದ ತಿಳಿಸಲು ಪ್ರತಿಯೊಬ್ಬರು ಸಮಯ ನೀಡಿ. ಅವರು ತಮ್ಮದೇ ಆದ ರೀತಿಯಲ್ಲಿ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ದನ್ನೂ ಓದಿ: ಬಾಯಿ ಚಪ್ಪರಿಸುತ್ತಾ ಮಿಸಲ್ ಪಾವ್ ಸವಿದ ಸಚಿನ್ – ವೀಡಿಯೋ ವೈರಲ್

sachin tendulkar bats 9

ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟುವಿನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೊದಲ ಹಾಗೂ ದ್ವಿತೀಯ ಸ್ಥಾನವನ್ನು ಕ್ರಮವಾಗಿ ಫುಟ್ಬಾಲ್ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *