ನವದೆಹಲಿ: ಭಾರತ ಕ್ರಿಕೆಟ್ ಟೀಮ್‌ನ ಆಲ್‌ರೌಂಡರ್ ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬುಧವಾರ ತಮ್ಮ ಗೆಳತಿಯೊಂದಿಗೆ ವಿವಾಹವಾದ ಚಹರ್, ಗುರುವಾರ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಪತ್ನಿ ಬಗ್ಗೆ ತಮ್ಮ ಮನದಾಳದ ಮಾತನ್ನು ವಿವರಿಸಿದ್ದಾರೆ.
ನಾನು ನಿನ್ನನ್ನು ಮೊದಲ ಬಾರಿ ಭೇಟಿಯಾದಾಗ ನನ್ನ ಜೀವನಕ್ಕೆ ನೀನೇ ಸರಿಯಾದ ವ್ಯಕ್ತಿ ಎಂದು ತಿಳಿದಿದ್ದೆ. ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಜೊತೆಯಲ್ಲಿ ಆನಂದಿಸಿದ್ದೇವೆ ಹಾಗೂ ನಿನ್ನನ್ನು ಯಾವಾಗಲೂ ಹೀಗೇ ಸಂತೋಷವಾಗಿಡಲು ಬಯಸುತ್ತೇನೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಮಗೆ ಎಲ್ಲರ ಆಶೀರ್ವಾದ ಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ
View this post on Instagram
ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ ದೀಪಕ್ ಜಯಾಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ್ದರು. ದೀಪಕ್ ತಮ್ಮ ಗೆಳತಿಗೆ ಪ್ರೇಮನಿವೇದನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಿಎಸ್‌ಕೆ ತಂಡದಲ್ಲಿದ್ದ ದೀಪಕ್ ಪಂಜಾಬ್ ತಂಡದ ವಿರುದ್ಧ ಪಂದ್ಯವನ್ನು ಗೆದ್ದ ಬಳಿಕ ಎಲ್ಲರೆದುರು ಗೆಳತಿಗೆ ಉಂಗುರ ತೊಡಿಸಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ
ಜಯಾ ಬಾರದ್ವಾಜ್ ನಟ ಹಾಗೂ ಬಿಗ್‌ಬಾಸ್ 13ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿದ್ದು, ದೆಹಲಿಯ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.