– ಯಾವ ರಾಜ್ಯದಲ್ಲಿ ಎಷ್ಟು ಜನರಿಗೆ ಸೋಂಕು?
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 1,429 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಇವತ್ತು 57 ಮಂದಿ ಕೊರೊನಾಗೆ ಬಲಿ ಆಗಿದ್ದು, ಮೃತರ ಸಂಖ್ಯೆ 779 ಆಗಿದೆ.
ಇದುವರೆಗೂ ಮಹಾರಾಷ್ಟ್ರದಲ್ಲಿ 301 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ 127, ಮಧ್ಯಪ್ರದೇಶದಲ್ಲಿ 92, ದೆಹಲಿಯಲ್ಲಿ 53, ಆಂಧ್ರ ಪ್ರದೇಶದಲ್ಲಿ 29, ರಾಜಸ್ಥಾನದಲ್ಲಿ 27, ತೆಲಂಗಾಣದಲ್ಲಿ 26 ಮಂದಿ ಬಲಿ ಆಗಿದ್ದಾರೆ. ಉತ್ತರ ಪ್ರದೇಶದ ಸಂತ್ ಕಬೀರ್ ನಗರದಲ್ಲಿ ಒಂದೇ ಕುಟುಂಬದ 18 ಮಂದಿಗೆ ಸೋಂಕು ತಗುಲಿದೆ.
Advertisement
Advertisement
ಈವರೆಗೂ ಒಟ್ಟು 5,209 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಮಹಾರಾಷ್ಟ್ರ, ಗುಜರಾತ್, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ 6,817 ಮಂದಿಗೆ ಸೋಂಕು ತಗುಲಿದ್ದರೆ, ಗುಜರಾತ್ 2,815 ಮಂದಿ, ದೆಹಲಿ 2,514 ಜನರು ಮತ್ತು ರಾಜಸ್ಥಾನದಲ್ಲಿ 2,034 ಜನರಿಗೆ ಸೋಂಕು ದೃಢಪಟ್ಟಿದೆ.
Advertisement
ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 27, ಆಂಧ್ರಪ್ರದೇಶ- 1,061, ಅರುಣಾಚಲ ಪ್ರದೇಶ- 1, ಅಸ್ಸಾಂ- 36, ಬಿಹಾರ- 228, ಚಂಡೀಗಢ- 28, ಛತ್ತೀಸ್‍ಗಢ- 36, ದೆಹಲಿ- 2,514, ಗೋವಾ- 7, ಗುಜರಾತ್- 2,815, ಹರಿಯಾಣ- 272, ಹಿಮಾಚಲ ಪ್ರದೇಶ- 40, ಜಮ್ಮು ಮತ್ತು ಕಾಶ್ಮೀರ- 454, ಜಾರ್ಖಂಡ್- 59, ಕರ್ನಾಟಕ- 500, ಕೇರಳ- 451, ಲಡಾಖ್- 20, ಮಧ್ಯಪ್ರದೇಶ- 1,952, ಮಹಾರಾಷ್ಟ್ರ- 6,817, ಮಣಿಪುರ- 2, ಮೇಘಾಲಯ – 12, ಮಿಜೋರಾಂ- 1, ಒಡಿಶಾ- 94, ಪುದುಚೇರಿ- 7, ಪಂಜಾಬ್- 298, ರಾಜಸ್ಥಾನ- 2,034, ತಮಿಳುನಾಡು- 1,755, ತೆಲಂಗಾಣ- 984, ತ್ರಿಪುರ- 2, ಉತ್ತರಾಖಂಡ- 48, ಉತ್ತರ ಪ್ರದೇಶ- 1,778 ಮತ್ತು ಪಶ್ಚಿಮ ಬಂಗಾಳದಲ್ಲಿ- 571 ಮಂದಿಗೆ ಕೊರೊನಾ ದೃಢಪಟ್ಟಿದೆ.
Advertisement
ಜಗತ್ತಿನಲ್ಲಿ ಡೆಡ್ಲಿ ಕೊರೊನಾ ರಣಕೇಕೆ ಕಳೆದ 5 ತಿಂಗಳಿಂದ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ. ಜಗತ್ತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28.63 ಲಕ್ಷ ದಾಟಿದೆ. ಬಲಿಯಾದವರ ಸಂಖ್ಯೆ 2 ಲಕ್ಷ ತಲುಪಿದೆ. ಕೇವಲ ಅಮೆರಿಕದಲ್ಲಿ 9.25 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಮೃತರ ಸಂಖ್ಯೆ 52 ಸಾವಿರ ದಾಟಿದೆ. ಅಂದ್ರೆ ಒಟ್ಟು ಸಾವುಗಳ ನಾಲ್ಕನೇ ಒಂದು ಭಾಗ ಅಮೆರಿಕದಲ್ಲಿಯೇ ಸಂಭವಿಸಿವೆ. ಆದರೆ ಸೋಂಕಿಗೆ ಹೋಲಿಸಿದಲ್ಲಿ ಮರಣಗಳ ಪ್ರಮಾಣ ಅಮೆರಿಕದಲ್ಲಿ ಕಡಿಮೆಯೇ ಇದೆ.
ಇಟಲಿಯಲ್ಲಿ 25 ಸಾವಿರ, ಸ್ಪೇನ್‍ನಲ್ಲಿ 22 ಸಾವಿರ, ಫ್ರಾನ್ಸ್ ನಲ್ಲಿ 22 ಸಾವಿರ, ಇಂಗ್ಲೆಂಡ್ 19 ಸಾವಿನ ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‍ನಲ್ಲಿ ಪರಿಸ್ಥಿತಿ ದಾರುಣವಾಗಿದೆ. ಎಲ್ಲಾ ಆಸ್ಪತ್ರೆಗಳು ಕೊರೊನಾ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೊಸ ಸೋಂಕಿತರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಏರ್ಪಟ್ಟಿದೆ. ಶವಾಗಾರಗಳು, ಸ್ಮಶಾನಗಳು ತುಂಬಿ ಹೋಗಿವೆ. ಬ್ರೆಜಿಲ್‍ನಲ್ಲಿ ಇದುವರೆಗೂ 53 ಸಾವಿರ ಮಂದಿ ಸೋಂಕಿತರಾಗಿದ್ದೂ, 3600 ಮಂದಿ ಬಲಿ ಆಗಿದ್ದಾರೆ. ಬೆಲ್ಜಿಯಂನಲ್ಲಿ ಮೇ 11ಕ್ಕೆ ಲಾಕ್‍ಡೌನ್ ತೆಗೆಯಲು ನಿರ್ಧರಿಸಲಾಗಿದೆ.