24 ಗಂಟೆಯಲ್ಲಿ ದೇಶದಲ್ಲಿ 388 ಮಂದಿಗೆ ಕೊರೊನಾ – ದಾಟಿತು1900ರ ಗಡಿ

Public TV
1 Min Read
Tabligh e Jamaat Nizamuddin Markaz Delhi Corona 1

ನವದೆಹಲಿ: ಇಡೀ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೊನಾ ವೈಸರ್‍ಗೆ ಬಾಧಿತರಾಗುವವರ ಸಂಖ್ಯೆ ದೇಶದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 388 ಮಂದಿಗೆ ಸೋಂಕು ತಗುಲಿದ್ದು, ಆತಂಕ ಮೂಡಿಸಿದೆ.

ಇವತ್ತೊಂದೇ ದಿನ ದೇಶದ ವಿವಿಧೆಡೆ 6 ಮಂದಿ ಬಲಿ ಆಗಿದ್ದಾರೆ. ಈ ಕ್ಷಣದವರೆಗೂ 55 ಮಂದಿ ಬಲಿಯಾಗಿ, 1900ಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರದಲ್ಲಿ ಸೋಂಕು ತೀವ್ರ ವೇಗದಲ್ಲಿ ಹರಡುತ್ತಿದೆ.

ಕೇವಲ ಮಹಾರಾಷ್ಟ್ರ ಒಂದರಲ್ಲೇ 16 ಮಂದಿ ಕೊರೊನಾಗೆ ಬಲಿ ಆಗಿದ್ದಾರೆ. ಆಂಧ್ರದಲ್ಲಿ ಇವತ್ತೊಂದೇ ದಿನ 43 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ದೆಹಲಿಯ ಮರ್ಕಜ್ ಮಸೀದಿಗೆ ಭೇಟಿ ನೀಡಿ ಬಂದವರೇ ಹೆಚ್ಚಿದ್ದಾರೆ.

ಒಟ್ಟು ಸೋಂಕಿತರ ಪೈಕಿ ಇದುವರೆಗೂ 151 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ, ಇರಾನ್‍ನಲ್ಲಿ ಸಿಲುಕಿರುವ 850 ಭಾರತೀಯರನ್ನು ವಾಪಸ್ ಕರೆತರುವ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

850 ಮಂದಿ ಪೈಕಿ 250 ಮಂದಿಗೆ ಕೊರೊನಾ ಪಾಸಿಟೀವ್ ಇದೆ ಎಂದು ಕೇಂದ್ರ, ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ. ಗುರುವಾರ ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಪ್ರಧಾನಿಗಳ ಪರಿಹಾರ ನಿಧಿಗೆ ವಿಪ್ರೋ, 1125 ಕೋಟಿ ರೂ. ದೇಣಿಗೆ ನೀಡಿದೆ.

ಮಹಾರಾಷ್ಟ್ರ 325, ಕೇರಳ 265, ತಮಿಳುನಾಡು 234, ದೆಹಲಿ 123, ಉತ್ತರ ಪ್ರದೇಶ 116, ರಾಜಸ್ಥಾನ 108, ಕರ್ನಾಟಕ 110 ಮಂದಿಗೆ ಕೊರೊನಾ ವೈರಸ್ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *