ತಿರುವನಂತಪುರಂ: ದೇಶದ 2ನೇ ಮಂಕಿಪಾಕ್ಸ್ ಪ್ರಕರಣ ಕೇರಳದ ಕಣ್ಣೂರಿನಲ್ಲಿ ದೃಢವಾಗಿದೆ. 31 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡುಬಂದಿದ್ದು, ಇದೀಗ ಸೋಂಕು ದೃಢವಾಗಿದೆ.
ಕೇರಳದ ಕಣ್ಣೂರು ಜಿಲ್ಲೆಯ ವ್ಯಕ್ತಿ ಜುಲೈ 13 ರಂದು ದುಬೈನಿಂದ ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಬಳಿಕ ರೋಗದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಕಳುಹಿಸಲಾಗಿತ್ತು. ಇದೀಗ ಅವರಿಗೆ ಮಂಕಿಪಾಕ್ಸ್ ಸೋಕು ಇರುವುದು ದೃಢವಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ
ಸದ್ಯ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಆದರೂ ನೆರೆಯ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದೃಢವಾಗುತ್ತಿರುವುದು ಕಾರ್ನಾಟಕದಲ್ಲೂ ಭೀತಿ ಹುಟ್ಟಿಸಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಸಾಲ ಮರುಪಾವತಿ ಮಾಡಲ್ಲ ಎಂದ ರೈತರು
ಪಶ್ಚಿಮ ಹಾಗೂ ಮಧ್ಯ ಆಫ್ರಿಕಾ ದೇಶಗಳಲ್ಲಿ ಮಂಕಿಪಾಕ್ಸ್ ದೀರ್ಘಕಾಲದಿಂದ ಕಂಡುಬಂದಿದ್ದು, ಈ ವರ್ಷದ ಮೇ ತಿಂಗಳಿನಿಂದ ಇತರ ದೇಶಗಳಲ್ಲೂ ಕಂಡುಬರಲು ಪ್ರಾರಂಭವಾಯಿತು. ಅತಿಯಾದ ಜ್ವರ ಹಾಗೂ ಚಿಕನ್‌ಪಾಕ್ಸ್ನಂತಹ ಗುಳ್ಳೆಗಳು ದೇಹದಲ್ಲಿ ಕಾಣಿಸಿಕೊಳ್ಳುವುದು ಮಂಕಿಪಾಕ್ಸ್‌ನ ಸಾಮಾನ್ಯ ಆರಂಭಿಕ ಲಕ್ಷಣಗಳು.