ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ (BCCI) ಅಂದುಕೊಂಡಂತೆ ಯಶಸ್ವಿಯಾಗಿ ಏಕದಿನ ವಿಶ್ವಕಪ್ ಟೂರ್ನಿಯನ್ನ ನಡೆಸಿಕೊಟ್ಟಿದೆ. ಟೀಂ ಇಂಡಿಯಾ ಮೊದಲ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ರೂ ಫೈನಲ್ ಪಂದ್ಯದ ಸೋಲಿನಿಂದ ವಿಶ್ವಕಪ್ ಕಳೆದುಕೊಂಡು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿಶ್ವಕಪ್ ಮುಗಿಯುತ್ತಿದ್ದಂತೆ ಸಾಲು ಸಾಲು ಟಿ20 ಕ್ರಿಕೆಟ್ ಸರಣಿಯನ್ನ ಟೀಂ ಇಂಡಿಯಾ ಸಾಲು ಸಾಲು ಸರಣಿಗಳನ್ನ (T20I Series) ಹಮ್ಮಿಕೊಂಡಿದೆ.
Advertisement
ಇದೇ ನವೆಂಬರ್ 23ರಂದು ಆಸ್ಟ್ರೇಲಿಯಾ (Austsralia) ವಿರುದ್ಧ ನಡೆಯಲಿರುವ ಸರಣಿ ಮೂಲಕ ಟೀಂ ಇಂಡಿಯಾ (Team India) ಟಿ20 ಕ್ರಿಕೆಟ್ ಹಬ್ಬ ಶುರುವಾಗಲಿದೆ. ನವೆಂಬರ್ 23 ರಿಂದ ಡಿಸೆಂಬರ್ 3ರ ವರೆಗೆ ಭಾರತ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಡಿಸೆಂಬರ್ 10 ರಿಂದ 14ರ ವರೆಗೆ ದಕ್ಷಿಣ ಆಫ್ರಿಕಾ (South Africa) ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ನಂತರ 2024ರ ಜನವರಿ 11 ರಿಂದ 17ರ ವರೆಗೆ ಅಫ್ಘಾನಿಸ್ತಾನದ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.
Advertisement
Advertisement
2024ಕ್ಕೆ ಅಮೆರಿಕ (T20 World Cup 2024) ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸಿದ್ಧತೆಗಾಗಿ ಭಾರತ ಈ ಅಭಿಯಾನ ಹಮ್ಮಿಕೊಂಡಿದೆ ಎಂದು ಬಿಸಿಸಿಐ ತಿಳಿಸಿವೆ.
Advertisement
ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಬಲಿಷ್ಠ ಯುವ ಆಟಗಾರರ ತಂಡವನ್ನು ಪ್ರಕಟಿಸಿದ್ದು, ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ನಾಯಕರಾಗಿದ್ದಾರೆ. ಈ ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಇನ್ನುಳಿದ ಸರಣಿಗಳಿಗೆ ಆಟಗಾರರ ಸಾಮರ್ಥ್ಯ ನೋಡಿಕೊಂಡು ತಂಡವನ್ನ ಪ್ರಕಟಿಸಲಿದೆ.
ಭಾರತ – ಆಸ್ಟ್ರೇಲಿಯಾ ಯಾವ ದಿನ ಎಲ್ಲಿ ಪಂದ್ಯ?
ನ.23 – ವಿಶಾಖಪಟ್ಟಣ
ನ.26 – ತಿರುವನಂತಪುರಂ
ನ.28 – ಗುವಾಹಟಿ
ಡಿ.1 – ರಾಯ್‌ಪುರ
ಡಿ.3 – ಬೆಂಗಳೂರು
ಭಾರತ ಮತ್ತು ದಕ್ಷಿಣ ಆಫ್ರಿಕಾ – ಯಾವ ದಿನ ಎಲ್ಲಿ ಪಂದ್ಯ?
ಡಿ.10 – ಕಿಂಗ್ಸ್‌ಮೀಡ್, ಡರ್ಬನ್ (ದಕ್ಷಿಣ ಆಫ್ರಿಕಾ)
ಡಿ.12 – ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾ
ಡಿ.14 – ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್
ಭಾರತ ಮತ್ತು ಅಫ್ಘಾನಿಸ್ತಾನ – ಯಾವ ದಿನ ಎಲ್ಲಿ ಪಂದ್ಯ?
ಜ.11(2024) – ಮೊಹಾಲಿ
ಜ.14 – ಇಂದೋರ್
ಜ.17 – ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ