ನವದೆಹಲಿ: ಗಡಿಯಲ್ಲಿ ದಿನೇ ದಿನೇ ಉದ್ವಿಗ್ನ ಹೆಚ್ಚಾಗ್ತಿರೋ ಕಾರಣ ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ದೀರ್ಘ ರಜೆ ರದ್ದುಗೊಳಿಸಲಾಗಿದೆ. ದೇಶದಲ್ಲಿರುವ 12 ಶಸ್ತ್ರಾಸ್ತ್ರ ಕಾರ್ಖಾನೆಗಳ (Arms Factory) ಸಮೂಹ ಎಂಐಎಲ್ ಸಿಬ್ಬಂದಿಗೆ ಸುದೀರ್ಘ ರಜೆಗೆ ಬ್ರೇಕ್ ಹಾಕಲಾಗಿದೆ.
ಕಾರ್ಖಾನೆಯ ಸಿಬ್ಬಂದಿ ಮುಂದಿನ 2 ತಿಂಗಳವರೆಗೆ 2 ದಿನಗಳಿಗಿಂತ ಹೆಚ್ಚು ರಜೆ ತೆಗೆದುಕೊಳ್ಳುವಂತಿಲ್ಲ. ಯುದ್ಧದ ಸನ್ನಿವೇಶ ಇರೋ ಹಿನ್ನೆಲೆ ಹೆಚ್ಚು ಶಸ್ತ್ರಾಸ್ತ್ರ ತಯಾರಿಕೆ & ದೇಶದ ಭದ್ರತೆ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ
ಇನ್ನು ಭಾರತ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಡಿಆರ್‌ಡಿಓದಿಂದ ಏರ್‌ಶಿಪ್ (Airship) ಯಶಸ್ವಿ ಪ್ರಯೋಗ ನಡೆಸಿದೆ. ಇದನ್ನೂ ಓದಿ: ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್
ಇದು 17 ಕಿಲೋ ಮೀಟರ್ ಎತ್ತರಕ್ಕೆ ವಾಯುನೌಕೆ ಮೊದಲ ಹಾರಾಟ ನಡೆಸಿದೆ. ಭೂಮಿಯ ವೀಕ್ಷಣೆ, ಗುಪ್ತಚರ, ಕಣ್ಗಾವಲು, ಶತ್ರುಗಳ ಹುಡುಕಿ ಹೊಡೆಯಲು ಏರ್‌ಶಿಪ್ ಸಹಕಾರಿಯಾಗಲಿದೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ
ಅತ್ತ ಭಾರತದ ದಾಳಿ ಆತಂಕದಲ್ಲಿರುವ ಪಾಕಿಸ್ತಾನ ಕೂಡ ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ.