ಭಾರತ (India) ಹಾಗೂ ಚೀನಾದ (China) ಗಡಿಪ್ರದೇಶ ಅಕ್ಸಾಯ್ ಚಿನ್ ಪ್ರದೇಶ, ಅರುಣಾಚಲ ಪ್ರದೇಶ (Arunachal Pradesh), ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಂತಹ ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ `ಸ್ಟ್ಯಾಂಡರ್ಡ್ ಮ್ಯಾಪ್’ನ 2023ರ ಆವೃತ್ತಿಯನ್ನು ಚೀನಾ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರಲ್ಲಿ ಅರುಣಾಚಲ ಪ್ರದೇಶದ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಸ್ಥಾಪಿಸುವ ಪ್ರಯತ್ನವನ್ನು ಚೀನಾ ಮಾಡಿದೆ. ಈ ಮೂಲಕ ಗಡಿ ತಂಟೆಯನ್ನು ಮತ್ತೆ ಮುಂದುವರೆಸಿದೆ.
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಸುಮಾರು 6 ದಶಕಗಳಷ್ಟು ಹಳೆಯದು. ಅದನ್ನು ಪರಿಹರಿಸಲು ಭಾರತ ಪ್ರಯತ್ನಿಸುತ್ತಲೇ ಇದೆ. ಆದರೆ ಚೀನಾ ಅದನ್ನು ಪರಿಹರಿಸಲು ಎಂದಿಗೂ ಪ್ರಯತ್ನಿಸಿಲ್ಲ. ನಿಯಮಗಳನ್ನು ಚೀನಾ ಉಲ್ಲಂಘಿಸುತ್ತಾ ಶಾಂತಿಗೆ ಧಕ್ಕೆ ತರುವ ಕಾರ್ಯದಲ್ಲಿ ತೊಡಗಿದೆ. ಕೆಲವೊಮ್ಮೆ ಲಡಾಖ್‌ನಲ್ಲಿ, ಕೆಲವೊಮ್ಮೆ ಅಕ್ಸಾಯ್ ಚಿನ್‌ನಲ್ಲಿ, ಕೆಲವೊಮ್ಮೆ ಟಿಬೆಟ್‌ನಲ್ಲಿ, ಕೆಲವೊಮ್ಮೆ ಡೋಕ್ಲಾಮ್ ಮತ್ತು ಸಿಕ್ಕಿಂನಲ್ಲಿ ತನ್ನ ದುಷ್ಟ ಬುದ್ಧಿಯನ್ನ ಪ್ರದರ್ಶಿಸುತ್ತದೆ. ಕೊವಿಡ್-19 ಸೋಂಕಿನ ತವರು ರಾಷ್ಟ್ರವಾಗಿರುವ ಚೀನಾ, ಆ ಕಾಲದಲ್ಲಿಯೂ ಗಡಿ ವಿವಾದದ ಮೇಲೆ ಗಮನ ಇಟ್ಟಿತ್ತು. ಇದನ್ನೂ ಓದಿ: ಚೀನಾ ವಿವಾದಿತ ಗಡಿಯಲ್ಲಿ 218 ಕೋಟಿ ರೂ. ವೆಚ್ಚದ ಏರ್‌ಫಿಲ್ಡ್ ನಿರ್ಮಾಣಕ್ಕೆ ಭಾರತ ಸಜ್ಜು
ಭಾರತ ಮತ್ತು ಚೀನಾ ನಡುವಿನ ಸುಮಾರು 3488 ಕಿ.ಮೀ ಗಡಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಸ್ಪಷ್ಟವಾಗಿಲ್ಲ. ಚೀನಾ ಉದ್ದೇಶಪೂರ್ವಕವಾಗಿ ಭಾರತದೊಂದಿಗಿನ ಗಡಿ ವಿವಾದವನ್ನು ಕೊನೆಗೊಳಿಸಲು ಬಯಸುತ್ತಿಲ್ಲ ಎಂಬ ಆರೋಪ ಕೂಡ ಇದೆ. ಹಾಗಾಗಿ ಚೀನಾ ಮತ್ತು ಭಾರತ ನಡುವೆ ಇಲ್ಲಿಯವರೆಗೆ ಯಾವುದೇ ಒಪ್ಪಂದ ನಡೆದಿಲ್ಲ. ಭಾರತದ ಮೇಲೆ ಒತ್ತಡ ಹೇರಲು ಚೀನಾ ಕಾಲಕಾಲಕ್ಕೆ ಗಡಿ ವಿವಾದಗಳನ್ನು ಬಳಸುತ್ತಲೇ ಇರುತ್ತದೆ. ಭಾರತದ ಗಡಿಯಲ್ಲಿ ನುಸುಳಲು ಚೀನಾದಿಂದ ಹಲವಾರು ಪ್ರಯತ್ನಗಳು ನಡೆದಿವೆ. ಉಭಯ ದೇಶಗಳ ಸೈನಿಕರ ನಡುವೆ ಗುಂಡಿನ ಚಕಮಕಿಗಳು ಆಗಾಗ ನಡೆಯುತ್ತಿರುತ್ತದೆ. ಇವೆಲ್ಲದರ ಹೊರತಾಗಿ ಚೀನಾ ಇಡೀ ಅರುಣಾಚಲ ಪ್ರದೇಶವನ್ನು ತನ್ನದೆಂದು ಪ್ರತಿಪಾದಿಸುತ್ತಲೇ ಇದೆ. ಅಲ್ಲದೇ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ತನ್ನ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಆದರೆ ಚೀನಾ ಇದನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ. ಬದಲಾಗಿ ಪಿಒಕೆ ಅನ್ನು ಪಾಕಿಸ್ತಾನದ ಭಾಗವೆಂದು ಪರಿಗಣಿಸುತ್ತದೆ. ಈ ವಿಚಾರದಲ್ಲೂ ಉಭಯ ರಾಷ್ಟ್ರಗಳ ನಡುವೆ ಅಸಮಧಾನ ಇದೆ.
ಗಡಿಯಲ್ಲಿ ತಕರಾರು ತೆಗೆಯಲೆಂದೇ ಕಾಮಗಾರಿ
ಚೀನಾದಿಂದ ಅಕ್ಸಾಯ್ ಚಿನ್‌ನಲ್ಲಿ ಹಲವಾರು ರಸ್ತೆಗಳನ್ನು ನಿರ್ಮಿಸುವ ಮೂಲಕ ಲಡಾಖ್ ಪ್ರದೇಶದಲ್ಲಿ ನಿರಂತರ ಕಾಮಗಾರಿಗಳು ನಡೆಸುತ್ತಿದೆ. ಚೀನಾ ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿ ಅಣೆಕಟ್ಟು, ರಸ್ತೆ ನಿರ್ಮಾಣಕ್ಕೆ ಕೈ ಹಾಕಿದೆ. ಈ ಪ್ರದೇಶಗಳಲ್ಲಿ ಮೂರರಿಂದ ನಾಲ್ಕು ಸಾವಿರ ಚೀನಿಯರು ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆಯ ಪರಿಸ್ಥಿತಿ ಇದೆ.
ಚೀನಾದ ತಂತ್ರವೇನು?
ಬ್ರಹ್ಮಪುತ್ರ ನದಿಗೆ ಚೀನಾ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ವಾಸ್ತವವಾಗಿ ಚೀನಾ ಬ್ರಹ್ಮಪುತ್ರ ನದಿಯ ನೀರನ್ನು ಕಾಲುವೆಗಳ ಮೂಲಕ ಉತ್ತರ ಚೀನಾದ ಪ್ರದೇಶಗಳಿಗೆ ಕೊಂಡೊಯ್ಯಲು ಯೋಜಿಸಿದೆ. ಕಳೆದ ಕೆಲವು ವರ್ಷಗಳಿಂದ ಹಿಂದೂ ಮಹಾಸಾಗರದ ವಿಚಾರದಲ್ಲೂ ಚೀನಾದ ಚಟುವಟಿಕೆಗಳು ಹೆಚ್ಚುತ್ತಿವೆ. ಚೀನಾ ಶ್ರೀಲಂಕಾ, ಪಾಕಿಸ್ತಾನ, ಮ್ಯಾನ್ಮಾರ್ ಮತ್ತು ಮಾಲ್ಡೀವ್ಸ್ ಜೊತೆ ಮೈತ್ರಿ ಮಾಡಿ ಅನೇಕ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಭಾರತವನ್ನು ಎಲ್ಲಾ ಕಡೆಯಿಂದಲೂ ಸುತ್ತುವರಿಯುವ ಕಾರ್ಯತಂತ್ರ ಹೆಣೆಯುತ್ತಿದೆ.
ಚೀನಾ ದಕ್ಷಿಣ ಸಮುದ್ರದ ಮೇಲೆ ತನ್ನ ಅಧಿಕಾರವನ್ನು ಪ್ರತಿಪಾದಿಸಿದೆ. ಈ ರೀತಿ ಅಲ್ಲಿ ಸಿಗುವ ತೈಲಕ್ಕಾಗಿ ಕಣ್ಣು ಹಾಕಿದೆ. ಈ ವಿಚಾರವಾಗಿ ವಿಯೆಟ್ನಾಂ, ಜಪಾನ್ ಮತ್ತು ಫಿಲಿಪೈನ್ಸ್ ಯಾವಾಗಲೂ ಚೀನಾವನ್ನು ವಿರೋಧಿಸುತ್ತಿವೆ. ವಿಯೆಟ್ನಾಂನ ಎರಡು ತೈಲ ಬ್ಲಾಕ್ ಯೋಜನೆಗಳಲ್ಲಿ ಭಾಗಿಯಾಗಿರುವ ಭಾರತೀಯ ಕಂಪನಿಗಳಿಗೆ ಕೆಲವು ವರ್ಷಗಳ ಹಿಂದೆ, ಚೀನಾ ದಕ್ಷಿಣ ಚೀನಾ ಸಮುದ್ರದಿಂದ ದೂರವಿರಲು ಎಚ್ಚರಿಕೆ ನೀಡಿತ್ತು. ಚೀನಾ ಈ ಪ್ರದೇಶದಲ್ಲಿ ಯಾವಾಗಲೂ ಮಿಲಿಟರಿ ಕಸರತ್ತುಗಳನ್ನು ನಡೆಸುತ್ತಿರುತ್ತದೆ. ಇದು ಸಹ ಉಭಯ ದೇಶಗಳ ಸಂಬಂಧಕ್ಕೆ ತೊಡಕಾಗಿದೆ.
ಲಡಾಖ್ ಗಡಿಯಲ್ಲಿನ ಪ್ರದೇಶಗಳ ಮೇಲೆ ತಾನು ಹಕ್ಕು ಹೊಂದಿರುವುದಾಗಿ ಚೀನಾ ಮೊಂಡುತನ ಪ್ರದರ್ಶಿಸುತ್ತಿರುವುದಕ್ಕೆ ಕಾರಣವಿದೆ. ಪ್ರಸಿದ್ಧ ಪರ್ವತ ಶ್ರೇಣಿಗಳಿಂದ ಭಾರತವನ್ನು ಸಾಧ್ಯವಾದಷ್ಟು ದೂರವಿಡುವುದಕ್ಕೆ ಚೀನಾ ಯೋಜಿಸಿದೆ. ಈ ಹಿನ್ನೆಲೆಯಲ್ಲೇ ಕ್ಲಿನ್ ಜಿಯಾಂಗ್ ಮತ್ತು ಟಿಬೆಟ್ ನಡುವೆ ಜಿ-219 ಹೆದ್ದಾರಿ ಕಾಮಗಾರಿಗೆ ಚೀನಾ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಪರ್ವತ ಶ್ರೇಣಿಗಳನ್ನು ದಾಟಬೇಕಿದ್ದಲ್ಲಿ ಭಾರತವು ಚೀನಾದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿತ್ತು. ಎತ್ತರದ ಶಿಖರಗಳ ಮೇಲೆ ಭಾರತವು ಪ್ರಾಬಲ್ಯ ಸಾಧಿಸದಂತೆ ನೋಡಿಕೊಳ್ಳುವುದು ಚೀನಾದ ಪ್ರಮುಖ ಉದ್ದೇಶವೂ ಆಗಿದೆ.
2012ರಲ್ಲಿ ಚೀನಾದೊಂದಿಗಿನ ಭಾರತದ ಗಡಿಗೆ 60 ಸಾವಿರ ಸೈನಿಕರನ್ನು ಭಾರತ ನಿಯೋಜಿಸಿತ್ತು.. ಗಲ್ವಾನ್ ಘರ್ಷಣೆಯ ಬಳಿಕ ಭಾರತ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಇದೇ ವೇಳೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಂದರುಗಳು ಮತ್ತು ನೆಲೆಗಳನ್ನು ನಿರ್ಮಿಸುವ ಮೂಲಕ ಚೀನಾ ಭಾರತಕ್ಕೆ ಅಡ್ಡಿಯಾಗುತ್ತಿದೆ ಎಂದು ಸಹ ವರದಿಯಾಗಿತ್ತು. ಕ್ಲಿನ್ ಜಿಯಾಂಗ್ ಮತ್ತು ಟಿಬೆನ್ ನಡುವಿನ ಗಡಿಯಲ್ಲಿ ಜಿ-219 ಹೆದ್ದಾರಿಯನ್ನು ಚೀನಾದ ಅನುಮತಿ ಪಡೆದುಕೊಳ್ಳದೇ ತನಗೆ ಸೇರಿದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದೆ ಎಂದು ಸಹ ಚೀನಾ ಆರೋಪಿಸಿತ್ತು.
ಈ ಹಿಂದೆಯೂ ಮ್ಯಾಪ್‌ನಲ್ಲಿ ಗಡಿಯನ್ನು ನುಂಗಿದ್ದ ಚೀನಾ
ಈ ಹಿಂದೆ 1959ರಲ್ಲಿನ ಗಡಿ ವಿಸ್ತೀರ್ಣಕ್ಕಿಂತ ಹೆಚ್ಚು ಭೂಪ್ರದೇಶವು ತಮಗೆ ಸೇರಿದೆ ಎಂದು ಚೀನಾ ವಾದಿಸಿತ್ತು. ಭಾರತ-ಚೀನಾ ಯುದ್ಧದ ಸಂದರ್ಭದಲ್ಲೂ ಅದು ಇದೇ ರೀತಿ ವಿವಾದ ಹುಟ್ಟುಹಾಕಿತ್ತು. 1962ರ ಯುದ್ಧಕ್ಕೂ ಒಂದು ತಿಂಗಳು ಮೊದಲೇ ಲಡಾಖ್ ಪೂರ್ವದಲ್ಲಿನ ಪ್ರದೇಶವು ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಂಡಿತ್ತು. ಚೀನಾದ ಗಡಿಪ್ರದೇಶದ ಅಳತೆಯು 1959ರಲ್ಲಿ ತೋರಿಸಿದ ವಿಸ್ತೀರ್ಣಕ್ಕಿಂತ ಹೆಚ್ಚಾಗಿತ್ತು. 1962ರ ನವೆಂಬರ್ ನಲ್ಲಿ ಭಾರತ-ಚೀನಾ ನಡುವಿನ ಯುದ್ಧ ಅಂತ್ಯವಾಗಿದ್ದು, ಆಗ ಚೀನಾ ಮತ್ತೊಂದು ರೀತಿ ಅಳತೆಯ ಗಡಿಚಿತ್ರಣವನ್ನು ಬಿಡುಗಡೆ ಮಾಡಿತ್ತು.
ಈ ವಿವಾದದ ನಡುವೆ ಗಡಿ ಭಾಗದ ಪೂರ್ವ ಲಡಾಖ್‍ನ ನ್ಯೋಮಾ ಬೆಲ್ಟ್‌ನಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಏರ್‌ಫಿಲ್ಡ್ ನಿರ್ಮಿಸಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಸಜ್ಜಾಗಿದೆ. ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೆ.12 ರಂದು ಶಂಕುಸ್ಥಾಪನೆ ಮಾಡಲಿದ್ದಾರೆ. ಇದನ್ನೂ ಓದಿ: ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]