Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಹ್ಯಾಂಡ್‌ಶೇಕ್; ಫಲ ನೀಡುತ್ತಾ ಒಪ್ಪಂದ?

Public TV
Last updated: October 28, 2024 8:18 am
Public TV
Share
6 Min Read
India China LAC Agreement What this means why experts are advising caution
SHARE

– ಏನಿದು ಭಾರತ-ಚೀನಾ ಗಡಿ ವಿವಾದ?

ಭಾರತ ಮತ್ತು ಚೀನಾ ತಮ್ಮ ವಿವಾದಿತ ಗಡಿಯಲ್ಲಿ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಉಭಯ ದೇಶಗಳ ದಶಕಗಳ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಘರ್ಷಣೆಗಳಿಗೆ ಇತಿಶ್ರಿ ಹಾಡಲು ಮುಂದಡಿ ಇಟ್ಟಿವೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪರಸ್ಪರ ಹ್ಯಾಂಡ್ ಶೇಕ್ ಮಾಡಿ ಶಾಂತಿ ಮಾತುಕತೆಗೆ ಮುನ್ನುಡಿ ಬರೆದರು. ವಿಶ್ವದ ದೊಡ್ಡ ಆರ್ಥಿಕತೆಗಳು ಸ್ನೇಹ-ಸೌಹಾರ್ದದ ಉದ್ದೇಶ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶಾಂತಿ ಒಪ್ಪಂದ ಮಾಡಿಕೊಂಡವು. ಒಪ್ಪಂದದ ಬೆನ್ನಲ್ಲೇ ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿರುವ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಶುರು ಮಾಡಿವೆ.

india china 1

ಏಷ್ಯಾದ ದೈತರ ನಡುವಿನ ಒಪ್ಪಂದದಿಂದ ದೊಡ್ಡ ಗಡಿ ವಿವಾದವೇನು ಬಗೆಹರಿದಿಲ್ಲ. ಆದರೆ ಒಪ್ಪಂದವು ಲಡಾಖ್ ಪ್ರದೇಶದ ಗಡಿಯುದ್ದಕ್ಕೂ ಎರಡೂ ದೇಶಗಳ ಗಸ್ತು ಪುನಾರಂಭಕ್ಕೆ ಅವಕಾಶ ಕಲ್ಪಿಸಿದೆ. ಜೊತೆಗೆ ತಮ್ಮ ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸಲು ಅನುವು ಮಾಡಿಕೊಟ್ಟಿದೆ. ಅಷ್ಟಕ್ಕೂ ಏನಿದು ಭಾರತ-ಚೀನಾ ಗಡಿ ಒಪ್ಪಂದ? ಗಡಿ ವಿವಾದ ಏನು? ಗಡಿ ಸಂಘರ್ಷ ತಲೆದೋರಿದ್ಹೇಗೆ? ಈಗ ಎರಡೂ ದೇಶಗಳು ಮಾಡಿಕೊಂಡ ಒಪ್ಪಂದ ಏನು ಮತ್ತು ಉದ್ದೇಶವೇನು? ಒಪ್ಪಂದದಿಂದ ಇಬ್ಬರಿಗೂ ಆಗುವ ಪ್ರಯೋಜನಗಳೇನು? ಬನ್ನಿ ತಿಳಿಯೋಣ.

ಏನು ಒಪ್ಪಂದ?
ರಷ್ಯಾದ ಕಜಾನ್‌ನಲ್ಲಿ ಈಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪಾಲ್ಗೊಂಡಿದ್ದರು. ಇಬ್ಬರೂ ನಾಯಕರ ಜೊತೆಗೆ ದ್ವಿಪಕ್ಷೀಯ ಮಾತುಕತೆಯಾಯಿತು. ಈ ವೇಳೆ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಸೇನೆಯ ಮತ್ತು ಗಸ್ತು ತಿರುಗುವಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡರು. ಎಲ್‌ಎಸಿ ಪಶ್ಚಿಮದಲ್ಲಿ ಲಡಾಖ್‌ನಿಂದ ಭಾರತದ ಪೂರ್ವ ರಾಜ್ಯವಾದ ಅರುಣಾಚಲ ಪ್ರದೇಶದ ವರೆಗೆ (3,488 ಕಿಮೀ) ವ್ಯಾಪಿಸಿದೆ.

ಗಡಿ ವಿವಾದ ಹುಟ್ಟಿಕೊಂಡಿದ್ಹೇಗೆ?
ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಘರ್ಷಕ್ಕೆ ಏಳು ದಶಕಗಳ ಇತಿಹಾಸವಿದೆ. ಗಡಿಯ ಗಡಿರೇಖೆಯ ವಿಚಾರವಾಗಿ 1962ರಲ್ಲಿ ಎರಡೂ ರಾಷ್ಟ್ರಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯಿತು. ಯುದ್ಧದಲ್ಲಿ ಭಾರತವು ಅವಮಾನಕರ ಸೋಲನ್ನು ಅನುಭವಿಸಿತು. ಲಡಾಖ್‌ನ ಈಶಾನ್ಯದಲ್ಲಿರುವ ಅಕ್ಸಾಯ್ ಚಿನ್‌ನಲ್ಲಿ ಒಂದು ಭಾಗವನ್ನು ಭಾರತ ಕಳೆದುಕೊಂಡಿತು. ಇದು ಇಬ್ಬರ ನಡುವಿನ ವಿವಾದದ ಕೇಂದ್ರಬಿಂದುವಾಗಿ ಉಳಿಯಿತು.

India vs China

ಎಲ್‌ಎಸಿ ರೂಪಿಸಿಕೊಂಡ ಭಾರತ-ಚೀನಾ
1962ರ ಯುದ್ಧದ ನಂತರ ಎರಡೂ ದೇಶಗಳು ಪರಸ್ಪರ ಮಾತುಕತೆಯೊಂದಿಗೆ ಎಲ್‌ಎಸಿ ರೂಪಿಸಿಕೊಂಡವು. 1990ರ ದಶಕದಲ್ಲಿ ಗಡಿ ಒಪ್ಪಂದದ ನಂತರ ರಾಜತಾಂತ್ರಿಕ ಸಂಬಂಧ ಚೇತರಿಸಿಕೊಂಡಿತು. 1993 ಮತ್ತು 1996ರ ಒಪ್ಪಂದಗಳು ಇಬ್ಬರ ನಡುವಿನ ಶಾಂತಿ-ಸೌಹಾರ್ದತೆಗೆ ಮೈಲುಗಲ್ಲಾಗಿತ್ತು. 1962ರ ನಂತರ ಅರ್ಧಶತಮಾನಕ್ಕೂ ಹೆಚ್ಚು ಕಾಲ ಗಡಿಯಲ್ಲಿ ಯಾವುದೇ ಸಂಘರ್ಷ ನಡೆಯಲಿಲ್ಲ. ಆದರೆ, ಕಾಲಾನಂತರದಲ್ಲಿ ಗಡಿಯಲ್ಲಿ ಸಮಸ್ಯೆ ತಲೆದೋರಿತು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಆದ ಘರ್ಷಣೆಯಿಂದ ಎರಡೂ ದೇಶಗಳ ಸಂಬಂಧ ಮುರಿಯುವ ಹಂತಕ್ಕೆ ಹೋಯಿತು.

2020ರಿಂದ ಭಾರತ-ಚೀನಾ ಸಂಬಂಧದಲ್ಲಾದ ಬದಲಾವಣೆ ಏನು?
2020ರ ಜೂನ್: ಈ ವರ್ಷದ ಮೇ ತಿಂಗಳಲ್ಲಿ ಚೀನಾ ಒಪ್ಪಂದ ಮುರಿದು ರೇಖೆ ಬದಲಿಸಲು ಯತ್ನಿಸಿತು. ಇದು ಉಭಯ ದೇಶಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಜೂನ್ ತಿಂಗಳಲ್ಲಿ ಗಲ್ವಾನ್‌ನಲ್ಲಿ ಎರಡೂ ದೇಶಗಳ ಸೈನಿಕರು ಮುಖಾಮುಖಿಯಾದರು. ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು. ಚೀನಾದ 4 ಸೈನಿಕರು ಮೃತಪಟ್ಟರು. ಸೈನಿಕರ ಬಲಿದಾನವು ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಎರಡು ಪರಮಾಣು ಶಸ್ತçಸಜ್ಜಿತ ದೇಶಗಳ ನಡುವಿನ ಉದ್ವಿಗ್ನತೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳ ಉಂಟು ಮಾಡಿತು. ಘರ್ಷಣೆ ಪರಿಣಾಮವಾಗಿ, ಭಾರತವು ಚೀನಾದಿಂದ ಹೂಡಿಕೆಗಳನ್ನು ನಿರ್ಬಂಧಿಸಿತು. ಟಿಕ್‌ಟಾಕ್ ಸೇರಿದಂತೆ ಡಜನ್‌ಗಟ್ಟಲೆ ಜನಪ್ರಿಯ ಚೀನೀ ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಷೇಧಿಸಿತು. ನೇರ ವಿಮಾನಯಾನ ಕಡಿತಗೊಳಿಸಿತು. ಇದುವರೆಗೆ ನಿಷೇಧಿತ ಚೀನೀ ಅಪ್ಲಿಕೇಷನ್‌ಗಳ ಸಂಖ್ಯೆ 321ಕ್ಕೆ ಏರಿದೆ.

India China 1

2021ರ ಜನವರಿ: ಭಾರತೀಯ ಮತ್ತು ಚೀನೀ ಸೈನಿಕರು ಈಶಾನ್ಯ ಭಾರತದ ಸಿಕ್ಕಿಂನಲ್ಲಿ ಮತ್ತೆ ಮುಖಾಮುಖಿಯಾದರು.

2022ರ ಡಿಸೆಂಬರ್: ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಸಣ್ಣ ಗಡಿ ಘರ್ಷಣೆಗಳು ನಡೆದವು. ಅದರ ಕೆಲವು ಭಾಗಗಳು ಚೀನಾದಿಂದಲೂ ಹಕ್ಕು ಪಡೆದಿವೆ. ಭಾರತೀಯ ಪಡೆಗಳು ದಿನನಿತ್ಯದ ಗಸ್ತು ತಿರುಗಲು ಅಡ್ಡಿಪಡಿಸುತ್ತಿವೆ ಎಂದು ಬೀಜಿಂಗ್ ಆರೋಪಿಸಿತು. ಇತ್ತ ನವದೆಹಲಿಯು, ಚೀನಾ ಸೈನಿಕರು ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿದ್ದಾರೆ. ಈಗಿರುವ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿತು. ಹೀಗೆ ಪರಸ್ಪರರಲ್ಲಿ ಆರೋಪ-ಪ್ರತ್ಯಾರೋಪದ ಮಾತು ಕೇಳಿಬಂತು.

2023: ಜೋಹಾನ್ಸ್ಬರ್ಗ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಭಾರತ ಮತ್ತು ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಮೋದಿ ಮತ್ತು ಷಿ ಜಿನ್‌ಪಿಂಗ್ ಮಾತುಕತೆ ನಡೆಸಿದರು.

india china BORDER LAC 1

ಜೂನ್: ಕಝಾಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದರು. ಅಲ್ಲಿ ಅವರು ತಮ್ಮ ಗಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ನಡೆಸಲು ಒಪ್ಪಿಕೊಂಡರು.

ಸೆಪ್ಟೆಂಬರ್: ಚೀನಾದೊಂದಿಗಿನ ಭಾರತದ ಗಡಿಯಲ್ಲಿ ಸುಮಾರು 75% ‘ನಿರ್ಬಂಧ’ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಜೈಶಂಕರ್ ಹೇಳಿದರು. ಶಾಂತಿ ಸ್ಥಾಪನೆಗಾಗಿ ಎರಡೂ ದೇಶಗಳು ಪ್ರಯತ್ನ ಮುಂದುವರಿಸಿದವು. ನಾಲ್ಕೂವರೆ ವರ್ಷದಲ್ಲಿ ಉಭಯ ದೇಶಗಳ ನಡುವೆ ಒಟ್ಟು 38 ಸುತ್ತಿನ ಮಾತುಕತೆ ನಡೆದಿವೆ.

ಭಾರತದ ವಿಚಾರದಲ್ಲಿ ಚೀನಾ ಮೆತ್ತಗಾಗಿದ್ದೇಕೆ?
ಭಾರತದ ವಿಚಾರದಲ್ಲಿ ಚೀನಾ ತಣ್ಣಗಾಗಲು ಹಲವು ಕಾರಣಗಳಿವೆ. ಎರಡು ದೇಶಗಳ ವ್ಯಾಪಾರ ಸಂಬAಧಗಳು ಪ್ರಮುಖ ಪ್ರೋತ್ಸಾಹಕವಾಗಿದ್ದವು. ಚೀನಾ ಬಹಳ ಹಿಂದಿನಿಂದಲೂ ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತದ ಅಗ್ರ ಎರಡು ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. 2023 ಮತ್ತು 2024 ರಲ್ಲಿ, ಇದು ದ್ವಿಪಕ್ಷೀಯ ವಾಣಿಜ್ಯದಲ್ಲಿ 118.4 ಬಿಲಿಯನ್ ಡಾಲರ್ ಜೊತೆಗೆ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಬೀಜಿಂಗ್ ಭಾರತದ ಅತಿದೊಡ್ಡ ಸರಕುಗಳ ಮೂಲವಾಗಿದೆ. ಜೊತೆಗೆ ದೂರಸಂಪರ್ಕ ಯಂತ್ರಾಂಶದಿಂದ ಹಿಡಿದು ಭಾರತೀಯ ಔಷಧೀಯ ಉದ್ಯಮಕ್ಕೆ ಕಚ್ಚಾ ವಸ್ತುಗಳ ವರೆಗೆ ಕೈಗಾರಿಕಾ ಉತ್ಪನ್ನಗಳ ಅತಿದೊಡ್ಡ ಪೂರೈಕೆದಾರನಾಗಿ ಉಳಿದಿದೆ.

India China

ಬ್ರಿಕ್ಸ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳ ಮೂಲಕ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು, ಭಾರತದ ಜೊತೆಗಿನ ಬಿಕ್ಕಟ್ಟು ಶಮನಗೊಳಿಸುವುದು ಚೀನಾಕ್ಕೆ ಅನುಕೂಲಕರವಾಗಿದೆ. 2020 ರ ನಂತರ ಭಾರತದಲ್ಲಿ ವ್ಯಾಪಾರ ಮಾಡಲು ಅನೇಕ ಚೀನೀ ಕಂಪನಿಗಳು ಹೆಣಗಾಡುತ್ತಿವೆ. ಭಾರತವು ಹೂಡಿಕೆಯ ನಿಯಮಗಳನ್ನು ಬಿಗಿಗೊಳಿಸಿದಾಗ ಮತ್ತು ಜನಪ್ರಿಯ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದಾಗ ಸಂಬಂಧಗಳ ಪುನರಾರಂಭಕ್ಕಾಗಿ ಚೀನಾ ಆಶಿಸುತ್ತಿದೆ.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಮತ್ತು ಅಂಡರ್‌ಸ್ಟಾಂಡಿಂಗ್ ದಿ ಇಂಡಿಯಾ-ಚೀನಾ ಬಾರ್ಡರ್‌ನ ಲೇಖಕ ಜೋಶಿ, ಎರಡು ದೇಶಗಳ ಗಡಿ ಒಪ್ಪಂದದಲ್ಲಿ ಭಾರತೀಯ ವ್ಯಾಪಾರ ಸಮುದಾಯದ ಒತ್ತಡವು ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಿದ್ದಾರೆ. 2020ರ ಘರ್ಷಣೆ ನಂತರ ಭಾರತವು ಚೀನಾದ ಹೂಡಿಕೆಗಳು ಮತ್ತು ವೀಸಾಗಳ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸಿತು. ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವ ನಿಯಮಗಳನ್ನು ಭಾರತ ಬದಲಾಯಿತು. ಆ ಮೂಲಕ ಚೀನಾದ ಗಧಪ್ರಹಾರ ಮಾಡಿತು. ಇದರಿಂದ ಚೀನಾ ಪ್ರಜೆಗಳು ಮತ್ತು ಉದ್ದಿಮೆದಾರರಿಗೆ ಸಮಸ್ಯೆ ಆಯಿತು. ಇದೆಲ್ಲವನ್ನೂ ಅರಿತ ಚೀನಾ ಈಗ ಭಾರತದ ವಿಚಾರದಲ್ಲಿ ಮೃದುವಾಗಿದೆ. ಇದಕ್ಕೆ ಕಾರಣವಾದ ಗಡಿ ಸಮಸ್ಯೆಯನ್ನು ಪರಿಹರಿಸಲು ಈಗ ಎರಡೂ ದೇಶಗಳು ಒಪ್ಪಂದಕ್ಕೆ ಮುನ್ನುಡಿ ಬರೆದಿವೆ.

ವಿವಾದಿತ ಗಡಿ ಬಿಂದುಗಳು ಯಾವುವು?
ಗಾಲ್ವಾನ್ ಜೊತೆಗೆ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಕನಿಷ್ಠ ನಾಲ್ಕು ಇತರ ಘರ್ಷಣೆ ಬಿಂದುಗಳಿವೆ. ಇವೆಲ್ಲವೂ 1962 ರ ಯುದ್ಧದಲ್ಲಿ ಭಾರತ ಮತ್ತು ಚೀನಾ ಸೈನಿಕರು ಹೋರಾಡಿದ ವಿವಾದಿತ ಪ್ರದೇಶಗಳಾಗಿವೆ.

ಡೆಮ್ಚೋಕ್: ಎಲ್‌ಎಸಿಯಿಂದ ಇದನ್ನು ವಿಭಜಿಸಲಾಗಿದೆ. ಭಾರತವು ಪಶ್ಚಿಮ ಭಾಗವನ್ನು ನಿಯಂತ್ರಿಸುತ್ತದೆ. ಪೂರ್ವ ಭಾಗವು ಚೀನಾದ ನಿಯಂತ್ರಣದಲ್ಲಿದೆ.

ಪ್ಯಾಂಗಾಂಗ್: ಪ್ಯಾಂಗಾಂಗ್ ಸರೋವರದ ಸುಮಾರು 50% ಟಿಬೆಟ್‌ನಲ್ಲಿದೆ (ಚೀನಾದ ನಿಯಂತ್ರಣದಲ್ಲಿದೆ). 40% ಭಾಗ ಲಡಾಖ್‌ನಲ್ಲಿ ಮತ್ತು 10% ಭಾಗ ವಿವಾದಿತವಾಗಿದೆ. ಐಂಅ ಗ್ರಹಿಕೆಗಳಲ್ಲಿನ ವ್ಯತ್ಯಾಸಗಳು ಮಿಲಿಟರಿ ಸ್ಟ್ಯಾಂಡ್‌ಆಫ್‌ಗಳು ಮತ್ತು ಬಫರ್ ವಲಯಗಳಿಗೆ ಕಾರಣವಾಗುತ್ತವೆ.

ಹಾಟ್ ಸ್ಪ್ರಿಂಗ್ಸ್: ಇದು ಗೋಗ್ರಾ ಪೋಸ್ಟ್ ಬಳಿ ಇದೆ. ಹಾಟ್ ಸ್ಪ್ರಿಂಗ್ಸ್ ಪ್ರದೇಶವು ಅದರ ಕಾರ್ಯತಂತ್ರದ ಸ್ಥಳದಿಂದಾಗಿ ಭಾರತಕ್ಕೆ ಮಹತ್ವದ್ದಾಗಿದೆ. ಇದು ಐಂಅ ಮೇಲೆ ಕಣ್ಗಾವಲು ಸುಗಮಗೊಳಿಸುತ್ತದೆ. ಈ ಪ್ರದೇಶದ ಮೇಲೆ ಭಾರತದ ನಿಯಂತ್ರಣವು ತನ್ನ ರಕ್ಷಣಾ ನಿಲುವುಗಳನ್ನು ಹೆಚ್ಚಿಸುತ್ತದೆ. ಅಕ್ಸಾಯ್ ಚಿನ್‌ನಲ್ಲಿನ ಚಲನವಲನಗಳ ಮೇಲ್ವಿಚಾರಣೆಗೆ ಅನುಕೂಲ ಬಿಂದುಗಳನ್ನು ಒದಗಿಸುತ್ತದೆ. ಹೀಗಾಗಿ ಗಡಿ ಭದ್ರತಾ ಡೈನಾಮಿಕ್ಸ್ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಡೆಪ್ಸಾಂಗ್: ಸೇನಾ ಕಾರ್ಯತಂತ್ರದ ದೃಷ್ಟಿಯಿಂದ ಡೆಪ್ಸಾಂಗ್ ಬಯಲು ಪ್ರದೇಶಗಳು ಭಾರತಕ್ಕೆ ನಿರ್ಣಾಯಕವಾಗಿವೆ. ಡೆಪ್ಸಾಂಗ್ ಮೇಲಿನ ನಿಯಂತ್ರಣವು ಚೀನಾದ ಪಡೆಗಳು ಈ ಪ್ರಮುಖ ಲಾಜಿಸ್ಟಿಕ್ಸ್ ಮಾರ್ಗಗಳಿಗೆ ಬೆದರಿಕೆ ಹಾಕುವುದನ್ನು ತಡೆಯುತ್ತದೆ. ಇದು ಭಾರತದ ಉತ್ತರದ ಗಡಿ ರಕ್ಷಣೆ ಮತ್ತು ಮಿಲಿಟರಿ ಚಲನಶೀಲತೆಗೆ ಅತ್ಯಗತ್ಯವಾಗಿದೆ.

TAGGED:India-ChinaLAC Agreement
Share This Article
Facebook Whatsapp Whatsapp Telegram

Cinema News

Dvitva Web Series Pawan Kumar
ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್
Cinema Latest Top Stories
Vishnuvardhan Memorial 1
ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ
Cinema Court Latest Sandalwood Top Stories
Gulshan Devaiah kantara chapter 1
ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ
Cinema Latest Top Stories
Darshan 8
ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್
Bengaluru City Cinema Karnataka Latest Top Stories
Rashmika Mandanna Thama Movie
ಹಾರರ್ ಅವತಾರದಲ್ಲಿ ಜನರನ್ನ ಬೆಚ್ಚಿಸಿದ ಶ್ರೀವಲ್ಲಿ
Bollywood Cinema Latest Top Stories

You Might Also Like

monorail train stuck in mumbai
Latest

ಭಾರೀ ಮಳೆಗೆ ವಿದ್ಯುತ್ ಸಮಸ್ಯೆ – ಮಾರ್ಗ ಮಧ್ಯದಲ್ಲೇ ನಿಂತ ಮೋನೋ ರೈಲು

Public TV
By Public TV
12 minutes ago
AI Image
Latest

ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

Public TV
By Public TV
35 minutes ago
Rajasthan Murder Case
Crime

ಲವ್ವರ್‌ ಜೊತೆ ಸೇರಿಕೊಂಡು ಪತಿ ಕೊಂದ ಮಹಿಳೆ; ಹತ್ಯೆ ಬಗ್ಗೆ ಸಾಕ್ಷಿ ನುಡಿದ 8 ವರ್ಷದ ಪುತ್ರ

Public TV
By Public TV
50 minutes ago
BBMP
Bengaluru City

ಬಿಬಿಎಂಪಿಯ ಪಂಚ ಪಾಲಿಕೆಗೆ ಆಯುಕ್ತರ ನೇಮಕ – ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕಾರ

Public TV
By Public TV
1 hour ago
Sujatha Bhat
Bengaluru City

ಫೋಟೋದಲ್ಲಿರುವವಳೇ ನನ್ನ ಮಗಳು: ಸುಜಾತ ಭಟ್ ಪ್ರತಿಕ್ರಿಯೆ

Public TV
By Public TV
2 hours ago
Jog Falls 1
Districts

ನಿರಂತರ ಮಳೆಯಿಂದ ಜೋಗ ಜಲಪಾತಕ್ಕೆ ಜೀವಕಳೆ – ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?