ರಾಂಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್)ಯನ್ನು ಸೂಕ್ತ ಸಮಯದಲ್ಲಿ ಬಳಕೆ ಮಾಡಿಕೊಳ್ಳಲು ಕಳೆದ 2 ವರ್ಷಗಳಿಂದ ವಿಫಲರಾಗಿದ್ದು, ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದ ವೇಳೆಯೂ ಡಿಆರ್ ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‍ನಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಕಳೆದ 2 ವರ್ಷಗಳಿಂದ ಇದುವರೆಗೂ ಕೊಹ್ಲಿ ಪಡೆದ ಎಲ್ಲಾ ಡಿಆರ್‌ಎಸ್ ಮನವಿಗಳಲ್ಲಿ ನಿರಾಸೆ ಎದುರಿಸಿದ್ದಾರೆ. 2017 ರಲ್ಲಿ ನಡೆದ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆರಂಭವಾದ ಈ ನಡೆ ಇಂದಿಗೂ ಮುಂದುವರಿದಿದ್ದು, ಸತತ 9 ಬಾರಿ ಕೊಹ್ಲಿ ಡಿಆರ್‌ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.
Advertisement
Big wicket for South Africa!
Virat Kohli becomes Anrich Nortje's first Test victim as the paceman traps the Indian skipper in front for 12.#INDvSA LIVE ????https://t.co/AEYe6hGC3o pic.twitter.com/E57MvnM1zD
— ICC (@ICC) October 19, 2019
Advertisement
ಇಂದಿನ ಪಂದ್ಯದಲ್ಲಿ ಮಯಾಂಕ್ ಹಾಗೂ ಪೂಜಾರ ಬಹುಬೇಗ ಔಟಾದ ಹಿನ್ನೆಲೆಯಲ್ಲಿ ತಂಡ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಕೊಹ್ಲಿ, ಬಿರುಸಿನ 2 ಬೌಂಡರಿ ಸಿಡಿಸಿ ಗಮನ ಸೆಳೆದರು. ಆದರೆ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಅನ್ರಿಕ್ ನಾಟ್ರ್ಜೆ ಎಸೆದ 16ನೇ ಓವರಿನಲ್ಲಿ ಕೊಹ್ಲಿ ಎಲ್‍ಬಿ ಬಲೆಗೆ ಬಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿದ ಕೊಹ್ಲಿ ಡಿಆರ್‌ಎಸ್ ಪಡೆದರು.
Advertisement
ರೋಹಿತ್ ಶರ್ಮಾರ ಸಲಹೆಯೊಂದಿಗೆ ಕೊಹ್ಲಿ ಡಿಆರ್‌ಎಸ್ ಪಡೆದರು ಕೂಡ ಚೆಂಡು ಲೆಗ್ ಸ್ಟಂಪ್‍ಗೆ ತಾಗಿ ಮುಂದೇ ಸಾಗುತ್ತಿರುವಂತೆ ಕಂಡು ಬಂತು ರಿವ್ಯೂನಲ್ಲಿ ಕಂಡು ಬಂತು. ಪರಿಣಾಮ ಥರ್ಡ್ ಅಂಪೈರ್, ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನೇ ಅಂತಿಮಗೊಳಿಸಿದರು. ಇದರೊಂದಿಗೆ ಕೊಹ್ಲಿ 22 ಎಸೆತಗಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು. ಆದರೆ ಕೊಹ್ಲಿ ಔಟಾಗುತ್ತಿದಂತೆ ಅಭಿಮಾನಿಗಳು ಡಿಆರ್‌ಎಸ್ ನಿಮಯಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು, ಅಂಪೈರ್ ತೀರ್ಮಾನವನ್ನು ಅಂತಿಮಗೊಳಿಸುವ ನಿಯಮಗಳನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೂಡ ಕೊಹ್ಲಿ ಡಿಆರ್‌ಎಸ್ ನಿಯಮಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇತ್ತ ತಂಡದ ನಾಯಕರಾಗಿ ಡಿಆರ್‌ಎಸ್ ಪಡೆಯುವಲ್ಲಿ ಕೊಹ್ಲಿ ಸರಿ ಎನಿಸುತ್ತಿದ್ದರು, ಬ್ಯಾಟ್ಸ್ ಮನ್ ಆಗಿ ನಿರಾಸೆ ಅನುಭವಿಸುತ್ತಿದ್ದಾರೆ.
Advertisement
https://twitter.com/IManish311/status/1185515629492617216
How it is Umpires call Mann…????
Virat Kohli and Umpires Call better Love story than Twilight ???? pic.twitter.com/lDWH7qr3WI
— Pranjal (@Pranjal_one8) October 19, 2019