ನವದೆಹಲಿ: ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಅದನ್ನು ಸಾಮ್ರಾಜ್ಯ ಅಂತ ಆಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತವನ್ನು ಸಂವಿಧಾನದಲ್ಲಿ ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ. ಆದರೆ ರಾಷ್ಟ್ರವಾಗಿ ಅಲ್ಲ. ಭಾರತದಲ್ಲಿ ಒಂದು ರಾಜ್ಯದ ಜನರನ್ನು ಆಳಲು ಸಾಧ್ಯವಿಲ್ಲ. ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇದು ಪಾಲುದಾರಿಕೆ, ಆದರೆ ಸಾಮ್ರಾಜ್ಯವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೃಹ ಸಚಿವರು ಚಪ್ಪಲಿ ಧರಿಸಬಹುದು, ಅವರ ಭೇಟಿಗೆ ಹೋದವ್ರು ಧರಿಸುವಂತಿಲ್ಲ: ರಾಗಾ ಆರೋಪಕ್ಕೆ BJP ವಿರೋಧ
Advertisement
Advertisement
ಸಹಕಾರಿ ಫೆಡರಲಿಸಂ, ಸಂಭಾಷಣೆ ಮತ್ತು ಸಂಧಾನದ ಪ್ರಾಮುಖ್ಯತೆ ದಶಕಗಳಿಂದ ಭಾರತವನ್ನು ಆಳಿದ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ರನ್ನು ನಾವು ಬೆಂಬಲಿಸುತ್ತೇವೆ: ಮಮತಾ ಬ್ಯಾನರ್ಜಿ
Advertisement
Advertisement
ಬುಧವಾರ ಅವರು ಸಂಸತ್ತಿನಲ್ಲಿ ಈ ಗಂಭೀರ ಆರೋಪ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು. ಕೆಲವು ದಿನಗಳ ಹಿಂದೆ ಮಣಿಪುರದಿಂದ ಕೆಲವು ರಾಜಕೀಯ ನಾಯಕರು ನನ್ನ ಬಳಿಗೆ ಬಂದರು. ಅವರು ತುಂಬಾ ಉದ್ರೇಕಗೊಂಡಿದ್ದರು. ಮಣಿಪುರದ ರಾಜಕಾರಣಿಗಳ ನಿಯೋಗವು ಗೃಹ ಸಚಿವರನ್ನು ನೋಡಲು ಹೋಗಿತ್ತು. ಅವರ ಮನೆಯ ಹೊರಗೆ ರಾಜಕಾರಣಿಗಳ ಬೂಟುಗಳನ್ನು ತೆಗೆಯುವಂತೆ ಒತ್ತಾಯಿಸಿದ್ದರು. ಆದರೆ ಮನೆಯೊಳಗಡೆ ಗೃಹ ಸಚಿವರು ಚಪ್ಪಲಿ ಧರಿಸಿದ್ದನ್ನು ಕಂಡಿದ್ದೆವು ಎಂದು ರಾಜಕಾರಣಿಗಳು ದೂರಿದ್ದಾರೆ ಎಂದು ತಿಳಿಸಿದ್ದರು.