ನವದೆಹಲಿ: ಉತ್ತರಪ್ರದೇಶದ (UttarPradesh) ಮೊರದಾಬಾದ್ ಅತ್ಯಾಚಾರ ಪ್ರಕರಣ ಹಾಗೂ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಯುವತಿ ಹತ್ಯೆ ಪ್ರಕರಣಗಳ ಬಗ್ಗೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷಿತವಾಗಿ ಇದ್ದರೆ ಮಾತ್ರವೇ ಭಾರತ ಪ್ರಗತಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
मुरादाबाद और उत्तराखंड में युवतियों के साथ जो घटनाएं हुई हैं उसने सबका दिल दहला दिया है।
भारत जोड़ो यात्रा में, मैं कई प्रतिभाशाली बच्चियों और युवतियों से मिल रहा हूं, उन्हें सुन रहा हूं।
एक बात साफ़ है, हमारा भारत तब ही आगे बढ़ेगा, जब देश की महिलाएं सुरक्षित होंगी।
— Rahul Gandhi (@RahulGandhi) September 24, 2022
Advertisement
ಘಟನೆಗೆ ಟ್ವೀಟ್ (Twitter) ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, `ಮೊರಾದಾಬಾದ್ ಮತ್ತು ಉತ್ತರಾಖಂಡದಲ್ಲಿ ನಡೆದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಭಾರತ್ ಜೋಡೋ (Bharath Jodo Yatra) ಯಾತ್ರೆಯಲ್ಲಿ ಅನೇಕ ಪ್ರತಿಭಾವಂತ ಮಹಿಳೆಯರು ಹಾಗೂ ಯುವತಿಯರನ್ನು ಭೇಟಿಯಾಗುತ್ತಿದ್ದೇನೆ. ಅವರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇದ್ದಾಗ ಮಾತ್ರವೇ ನಮ್ಮ ಭಾರತ ಪ್ರಗತಿಯಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
यूपी मुरादाबाद में एक नाबालिग के साथ 5 युवकों ने गैंगरेप किया,अपराधियों के हौसले इतने बुलंद हैं कि मुरादाबाद में हैवानों ने रेप कर युवती को सड़क पर निर्वस्त्र दौड़ाया !! pic.twitter.com/B1gndx6Gs3
— Yogita Bhayana योगिता भयाना (@yogitabhayana) September 21, 2022
Advertisement
ಏನಿದು ಘಟನೆ?
ಇದೇ ಸೆಪ್ಟೆಂಬರ್ 1 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 15ರ ಹುಡುಗಿಯನ್ನು ಕಾಡಿಗೆ ಎಳೆದೊಯ್ದು ಗ್ಯಾಂಗ್ ರೇಪ್ (Gang Rape) ನಡೆಸಲಾಗಿತ್ತು. ಹುಡುಗಿ ಕಾಡಿನಿಂದ ತಪ್ಪಿಸಿಕೊಂಡು ಬೆತ್ತಲಾಗಿಯೇ ಓಡಿಬಂದಿದ್ದರು. ಸಿಸಿಟಿವಿಯಲ್ಲಿ (CCTV) ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಕೆ ಪೋಷಕರೊಡನೆ ಘಟನೆ ಹೇಳಿಕೊಂಡ ಬಳಿಕ ಪೊಲೀಸ್ ಠಾಣೆಗೆ (Police Station) ಕರೆದೊಯ್ದು ದೂರು ದಾಖಲಿಸಲಾಯಿತು. ಇದಾದ 13 ದಿನಗಳ ನಂತರ ಪೊಲೀಸರು ಮೊದಲ ಆರೋಪಿಯನ್ನಷ್ಟೇ ಬಂಧಿಸಿದ್ದಾರೆ. ಈ ಘಟನೆ ನಿನ್ನೆಯಷ್ಟೇ ಬೆಳಕಿಗೆ ಬಂದಿದೆ.
Advertisement
ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಅಂಕಿತಾ ಭಂಡಾರಿ ಎಂಬ ಯುವತಿ ತಾನು ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಜುಲಾ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ, ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇದರಲ್ಲಿ ಬಿಜೆಪಿ ಮುಖಂಡನೊಬ್ಬ ಇದ್ದಾನೆ.