ನವದೆಹಲಿ: ಭಾರತವು ಹಸಿರು ಜಲಜನಕದ ಜಾಗತಿಕ ಹಬ್ ಆಗಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಎನರ್ಜಿ ಫಾರ್ ಸಸ್ಟೈನಬಲ್ ಗ್ರೋತ್’ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ಶಕ್ತಿಯ ಸಾಕಷ್ಟು ಲಭ್ಯತೆಯು ಭಾರತಕ್ಕೆ ಅಂತರ್ಗತ ಪ್ರಯೋಜನವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ಬಿಸಿಯೂಟ ತಯಾರಕರಿಗೆ 1,000 ರೂ. ಗೌರವಧನ ಹೆಚ್ಚಳ
In the coming years, India’s energy demands will increase, therefore, we must transition to renewable energy. Every household should develop its own solar tree that can contribute to saving up to 15% electricity. It’ll not only be unique but will be environment-friendly: PM Modi pic.twitter.com/lE3kM2LHYD
— ANI (@ANI) March 4, 2022
ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಬಹುದು. ಸುಸ್ಥಿರ ಇಂಧನ ಮೂಲಗಳಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎಂಬುದು ಭಾರತದ ಸ್ಪಷ್ಟ ದೃಷ್ಟಿಯಾಗಿದೆ ಎಂದರು. ಇದನ್ನೂ ಓದಿ: ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು
ಗೃಹೋಪಯೋಗಿ ಉಪಕರಣಗಳನ್ನು ಒಳಗೊಂಡಂತೆ ಹೆಚ್ಚು ಶಕ್ತಿ-ಸಮರ್ಥ ಉತ್ಪನ್ನಗಳನ್ನು ತಯಾರಿಸಲು ಬಹಳಷ್ಟು ಮಾಡಬೇಕಾಗಿದೆ. ಮಿಷನ್ ಮೋಡ್‍ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಆದ್ಯತೆ ನೀಡಲಾಗಿದೆ. ನಾವು ನಮ್ಮ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳನ್ನು ಇನ್ನಷ್ಟು ಆಧುನೀಕರಿಸಬೇಕಾಗಿದೆ ಎಂದರು.