ಟೆಕ್ಸಾಸ್: ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ 3 ವರ್ಷದ ಬಾಲಕಿಗೆ ಆಕೆಯ ತಂದೆ ಮನೆಯಿಂದ ಹೊರಗೆ ಒಬ್ಬಳೇ ನಿಲ್ಲುವಂತೆ ಹೇಳಿ ಶಿಕ್ಷೆ ನೀಡಿದ್ದು, ಈಗ ಬಾಲಕಿ ಕಾಣೆಯಾಗಿರುವ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ.
ಇಲ್ಲಿನ ಸಬ್ ಅರ್ಬನ್ ಡಲ್ಲಾಸ್‍ನಲ್ಲಿ ಬಾಲಕಿ ಶೆರಿನ್‍ಳ ತಂದೆ 37 ವರ್ಷದ ವೆಸ್ಲೀ ಮ್ಯಾಥ್ಯೂಸ್, ರಾತ್ರಿ ವೇಳೆ ಮಗಳನ್ನು ಮನೆಯ ಹಿಂದೆ ಇದ್ದ ಕಾಲುದಾರಿಯಲ್ಲಿ ನಿಲ್ಲುವಂತೆ ಹೇಳಿದ್ದರು. ಬಾಲಕಿ ನಾಪತ್ತೆಯಾಗಿರುವ ಕಾರಣ ಶನಿವಾರದಂದು ಮ್ಯಾಥ್ಯೂಸ್‍ರನ್ನು ವಶಕ್ಕೆ ಪಡೆದು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ರಿಚರ್ಡ್‍ಸನ್‍ನ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಕಳೆದ ಶನಿವಾರ ಶೆರಿನ್ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಮಧ್ಯರಾತ್ರಿ 3 ಗಂಟೆ ವೇಳೆಯಲ್ಲಿ ಮನೆಯ ಬಳಿಯಿದ್ದ ದೊಡ್ಡ ಮರದ ಬಳಿ ನಿಲ್ಲುವಂತೆ ಸೂಚಿಸಿದ್ದೆ. ಆದ್ರೆ 15 ನಿಮಿಷಗಳ ಬಳಿಕ ನೋಡಿದಾಗ ಆಕೆ ಅಲ್ಲಿ ಇರಲಿಲ್ಲ ಎಂದು ಮ್ಯಾಥ್ಯೂಸ್ ಪೊಲೀಸರಿಗೆ ತಿಳಿಸಿದ್ದಾರೆ.
Advertisement
ಮಗಳನ್ನ ಮನೆಯಿಂದ ಹೊರಗೆ ಕಳಿಸಿದ 5 ಗಂಟೆಗಳ ಬಳಿಕ ಮ್ಯಾಥ್ಯೂಸ್ ಪೊಲೀಸರಿಗೆ ಕರೆ ಮಾಡಿ ಮಗಳು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಮನೆಯ ಹೊರಗಡೆ ದಾರಿಯಲ್ಲಿ ಗುಳ್ಳೇನರಿಗಳನ್ನ ನೋಡಿದ್ದು, ಅಲ್ಲೇ ಮಗಳಿಗೆ ನಿಲ್ಲುವಂತೆ ಹೇಳಿದ್ದಾಗಿ ಮ್ಯಾಥ್ಯೂಸ್ ಪೊಲೀಸರಿಗೆ ಹೇಳಿದ್ದಾರೆ.
Advertisement
ಶೆರಿನ್ ಜನಿಸಿದ್ದು ಭಾರತದಲ್ಲಿ. ಮ್ಯಾಥ್ಯೂಸ್ ಕುಟುಂಬ ಆಕೆಯನ್ನು ದತ್ತು ಪಡೆದಿತ್ತು. ಆಕೆ ಅಮೆರಿಕಗೆ ಬರುವ ಮುಂಚೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಈಗ ವಿಶೇಷ ಡಯಟ್‍ನಲ್ಲಿದ್ದಳು ಎಂದು ರಿಚರ್ಡ್‍ಸನ್ ಪೊಲೀಸ್ ಇಲಾಖೆಯ ವಕ್ತಾರರಾದ ಸಜೆಂಟ್ ಕೆವಿನ್ ಪರ್ಲಿಚ್ ತಿಳಿಸಿದ್ದಾರೆ.