ನವದೆಹಲಿ: ಬಿಜೆಪಿ (BJP) ಸೋಲಿಸಲು ಪ್ರತಿಪಕ್ಷಗಳ INDIA ಒಕ್ಕೂಟದ ಸಭೆ ಟೀ, ಬಿಸ್ಕೆಟ್‌ಗೆ ಮಾತ್ರ ಸೀಮಿತವಾಗಿದೆ. ಸಮೋಸಾಗೆ ಹಣವಿಲ್ಲ ಎಂದು ಜೆಡಿಯು ಸಂಸದ (JDU MP) ಸುನೀಲ್ ಕುಮಾರ್ ಪಿಂಟು ವ್ಯಂಗ್ಯವಾಡಿದ್ದಾರೆ.
ಡಿ.19 ರಂದು ದೆಹಲಿ ಅಶೋಕ ಹೋಟೆಲಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ INDIA ಒಕ್ಕೂಟದ ನಾಲ್ಕನೇಯ ಸಭೆ ಆಯೋಜಿಸಲಾಗಿತ್ತು. ಈ ಸಭೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಭೆಯಲ್ಲಿ ಹಲವು ಪಕ್ಷಗಳ ದೊಡ್ಡ ನಾಯಕರು ಆಗಮಿಸಿದ್ದರು. ಆದರೆ ಯಾವುದೇ ಗಂಭೀರ ಚರ್ಚೆ ನಡೆಯದೇ ಸಭೆ ಮುಕ್ತಾಯಗೊಂಡಿತು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಮೂರು ಕ್ರಿಮಿನಲ್ ಮಸೂದೆ ಅಂಗೀಕಾರ
Advertisement
Advertisement
ಸಭೆ ಟೀ ಬಿಸ್ಕೇಟ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಸಮೋಸಾ ತರಿಸುವಷ್ಟೂ ಕಾಂಗ್ರೆಸ್ ಬಳಿ ಹಣವಿಲ್ಲ. ಏಕೆಂದರೆ ಕಾಂಗ್ರೆಸ್‌ಗೆ ಹಣದ ಕೊರತೆಯಿದೆ. 138 ರೂ., 1380 ರೂ., 13,800 ರೂ. ದೇಣಿಗೆ ಸಂಗ್ರಹಿಸುತ್ತಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಹೊಗೆ ಬಾಂಬ್ – ಬಾಗಲಕೋಟೆಯ ಟೆಕ್ಕಿ ವಶಕ್ಕೆ
Advertisement
ದೆಹಲಿಯಲ್ಲಿ ನಡೆದ ಐಎನ್‍ಡಿಐಎ ಕೂಟದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ವಿಚಾರ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamta Banerjee) ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಅಭ್ಯರ್ಥಿಯನ್ನಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡುವುದು ಉತ್ತಮ ಎಂಬ ಪ್ರಸ್ತಾಪವನ್ನು ಇಟ್ಟಿದ್ದಾರೆ. ಇದಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಖರ್ಗೆಯವರು ಮಾತ್ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರ ನೋಡೋಣ. ಈಗ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕರೆ ನೀಡಿದ್ದಾರೆ ಎನ್ನಲಾಗಿದೆ.
Advertisement