ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಅವರಿಗೆ ‘ಇಂಡಿಯಾ’ ಒಕ್ಕೂಟದಿಂದ (INDIA Bloc) ಪ್ರಧಾನಿ ಸ್ಥಾನದ ಆಫರ್ ಬಂದಿತ್ತು ಎಂದು ಅವರದೇ ಪಕ್ಷದ ನಾಯಕ ಕೆ.ಸಿ.ತ್ಯಾಗಿ (Tyagi) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾಖಲೆಯ ಮೂರನೇ ಅವಧಿಗೆ ಎನ್‌ಡಿಎ ಸರ್ಕಾರ ರಚಿಸುವುದನ್ನು ತಡೆಯುವ ನಿಟ್ಟಿನಲ್ಲಿ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟಕ್ಕೆ ಮರಳಿ ಪಡೆಯಲು ಇಂಡಿಯಾ ಬ್ಲಾಕ್ ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳು ಎದ್ದಿದ್ದವು. ಇದರ ನಡುವೆಯೇ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತ್ಯಾಗಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ
Advertisement
Advertisement
ಜೆಡಿಯು ಎಲ್ಲಾ ಆಫರ್‌ಗಳನ್ನು ತಿರಸ್ಕರಿಸಿದೆ. ಮುಂದಿನ ಐದು ವರ್ಷಗಳ ಕಾಲ ಎನ್‌ಡಿಎ ಜೊತೆ ಕೆಲಸ ಮಾಡಲು ಯೋಜಿಸಿದೆ ಎಂದು ತ್ಯಾಗಿ ಸ್ಪಷ್ಟಪಡಿಸಿದ್ದಾರೆ.
Advertisement
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ನಮ್ಮ ನಾಯಕನನ್ನು ನಡೆಸಿಕೊಂಡ ರೀತಿಯಿಂದ ನಮಗೆ ನೋವಾಗಿದೆ. ಹೀಗಾಗಿ ಬೇರೆ ಮಾರ್ಗವನ್ನು ಆರಿಸಿಕೊಳ್ಳಬೇಕಾಯಿತು. ಮೈತ್ರಿಕೂಟದ ಸಂಚಾಲಕರಾಗಲು ನಿತೀಶ್ ಕುಮಾರ್ ಯೋಗ್ಯರಲ್ಲ ಎಂದು ಭಾವಿಸಿದವರು ಈಗ ಅವರಿಗೆ ಪ್ರಧಾನಿ ಸ್ಥಾನವನ್ನು ನೀಡಲು ಮುಂದಾಗಿದ್ದಾರೆ. ಆದರೆ ಜೆಡಿಯು ಈಗಾಗಲೇ ಅಂತಹ ಎಲ್ಲಾ ಆಫರ್‌ಗಳನ್ನು ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಹೆಚ್‍ಡಿಕೆಗೆ ಸಚಿವ ಸ್ಥಾನ ಫಿಕ್ಸ್?
Advertisement
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಇದು ಬಿಹಾರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ರಾಜ್ಯ ವಿಭಜನೆಯಾದಾಗ ಎಲ್ಲಾ ಸಂಪನ್ಮೂಲಗಳು, ಕಲ್ಲಿದ್ದಲು ಗಣಿಗಳು ಜಾರ್ಖಂಡ್‌ಗೆ ಹೋದವು. ಬಿಹಾರವು ನಿರುದ್ಯೋಗ, ಬಡತನ ಮತ್ತು ವಲಸಿಗರಿಂದ ಕೂಡಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂದು ತ್ಯಾಗಿ ಪ್ರತಿಪಾದಿಸಿದ್ದಾರೆ.