ಪ್ಯಾರಿಸ್: ಭಾರತದ ಕಂಪನಿ ನಿರ್ಮಿಸಿದ ವಿಶ್ವದಾಖಲೆಯನ್ನು ಭಾರತದ (India) ಕಂಪನಿ ಮುರಿಯವುದು ಬಹಳ ಅಪರೂಪ. ಈಗ ಇಂಡಿಗೋ ಕಂಪನಿ ಏರ್ ಇಂಡಿಯಾ (Air India) ನಿರ್ಮಿಸಿದ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಹೌದು. ಬಜೆಟ್ ಕ್ಯಾರಿಯರ್ ವಿಮಾನ ಕಂಪನಿ ಇಂಡಿಗೋ ಫ್ರಾನ್ಸಿನ ಏರ್‌ಬಸ್ (Airbus) ಕಂಪನಿಯ ಜೊತೆ 500 A320 ಮಾದರಿಯ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಅತಿ ಹೆಚ್ಚು ವಿಮಾನ ಖರೀದಿ ಒಪ್ಪಂದ ಮತ್ತು ಒಂದೇ ಕಂಪನಿಯ ಜೊತೆ ಅತಿ ಹೆಚ್ಚು ವಿಮಾನ ಖರೀದಿ ನಡೆಸುತ್ತಿರುವ ವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಇಂಡಿಗೋ ಪಾತ್ರವಾಗಿದೆ.
Advertisement
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಏರ್‌ಶೋದ (Paris Air Show) ಮೊದಲ ದಿನವೇ ಏರ್‌ಬಸ್ ಕಂಪನಿ ಇಂಡಿಗೋ ಜೊತೆಗಿನ ವ್ಯವಹಾರದ ಡೀಲ್ ಘೋಷಣೆ ಮಾಡಿದೆ. ಇದನ್ನೂ ಓದಿ: ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ
Advertisement
Advertisement
ಹಲವು ಸುತ್ತಿನ ಮಾತುಕತೆಯ ಬಳಿಕ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಖರೀದಿ ಒಪ್ಪಂದದ ಮೊತ್ತ ಎಷ್ಟು ಎನ್ನುವುದು ಅಧಿಕೃತವಾಗಿ ತಿಳಿಸದೇ ಇದ್ದರೂ 55 ಶತಕೋಟಿ ಡಾಲರ್ ಡೀಲ್ ಎಂದು ವರದಿಯಾಗಿದೆ.
Advertisement
ಈ ಐತಿಹಾಸಿಕ ಒಪ್ಪಂದಕ್ಕೆ ಇಂಡಿಗೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟೀಯಾ ಮತ್ತು ಏರ್‌ಬಸ್ ಸಿಇಒ ಗುಯಿಲೌಮ್ ಫೌರಿ ಸಹಿ ಹಾಕಿದರು. ಇದನ್ನೂ ಓದಿ: ಏರ್‌ಬಸ್-ಬೋಯಿಂಗ್ ಜೊತೆ ಮೆಗಾ ಡೀಲ್: ವಿಶ್ವದಾಖಲೆ ನಿರ್ಮಿಸಿದ ಏರ್ ಇಂಡಿಯಾ
2030 ಮತ್ತು 2035ರ ಸಮಯದಲ್ಲಿ ವಿಮಾನವನ್ನು ಏರ್‌ಬಸ್ ಕಂಪನಿ ಇಂಡಿಗೋಗೆ ವಿತರಣೆ ಮಾಡಲಿದೆ. ಇದು ಕೇವಲ ಪ್ರಾರಂಭ ಅಷ್ಟೇ. ಭಾರತ ಬೆಳವಣಿಗೆ ಮತ್ತು ಭಾರತೀಯ ವಾಯುಯಾನ ಮಾರುಕಟ್ಟೆಯ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ನಮಗೆ ನೀಡಲು ಇದು ಸರಿಯಾದ ಸಮಯ ಎಂದು ಏರ್‌ಬಸ್ ತಿಳಿಸಿದೆ.
2006 ರಿಂದ ಇಲ್ಲಿಯವರೆಗೆ ಏರ್‌ಬಸ್ ಕಂಪನಿ ಜೊತೆ ಒಟ್ಟು 1,330 ವಿಮಾನ ಖರೀದಿಗೆ ಇಂಡಿಗೋ ಆರ್ಡರ್ ನೀಡಿದೆ. ಈ ದಶಕದ ಅಂತ್ಯಕ್ಕೆ ವಿಮಾನಗಳು ವಿತರಣೆಯಾಗುವ ಸಾಧ್ಯತೆಯಿದೆ.
ಈ ಫೆಬ್ರವರಿಯಲ್ಲಿ ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 470 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿತ್ತು. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದು ಎಂದು ಬಣ್ಣಿಸಲಾಗಿತ್ತು.
ಫ್ರಾನ್ಸಿನ ಏರ್‌ಬಸ್‌ನಿಂದ 250 ಮತ್ತು ಅಮೆರಿಕದ ಬೋಯಿಂಗ್‌ನಿಂದ (Boeing) 220 ವಿಮಾನಗಳನ್ನು ಏರ್ ಇಂಡಿಯಾದಿಂದ ಖರೀದಿಸಲಿದೆ. ಒಟ್ಟು 420 ಸಣ್ಣ, ಮಧ್ಯಮ ಗಾತ್ರ ಮತ್ತು 40 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ (Air India) ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್ ಇಂಡಿಯಾವನ್ನು ಸೇರಲಿದೆ.