ನವದೆಹಲಿ: ಯುದ್ಧ ವಿಮಾನ ಖರೀದಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, 114 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಡೀಲ್‍ಗೆ ಭಾರತ ಮುಂದಾಗಿದೆ.
114 ವಿಮಾನಗಳನ್ನು ಖರೀದಿಸುವ ಕುರಿತು ಈಗಾಗಲೇ ಬಿಡ್ಡಿಂಗ್ ಆಹ್ವಾನಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದು ವಿಶ್ವದಲ್ಲೇ ಬೃಹತ್ ಡೀಲ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಯುದ್ಧ ವಿಮಾನಗಳನ್ನು ಬದಲಿಸುವುದು ಹಾಗೂ ಹೊಸದಾಗಿ ಹೆಚ್ಚು ವಿಮಾನಗಳನ್ನು ಖರೀದಿಸುವ ಮೂಲಕ ದೇಶದ ಸಶಸ್ತ್ರ ಪಡೆಗಳ ಸಾಮಥ್ರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬೃಹತ್ ಡೀಲ್‍ನ ಬೆಲೆ ಸುಮಾರು 15 ಬಿಲಿಯನ್ ಯುಎಸ್ ಡಾಲರ್‍ಗಿಂತ ಹೆಚ್ಚಾಗಿದೆ. ಇದಕ್ಕಾಗಿ ಅಧಿಕಾರಿಗಳು ವಿವಿಧ ತಯಾರಿಸಿ ನಡೆಸಿದ್ದಾರೆ. ಬೋಯಿಂಗ್ ಕಂ., ಲಾಕ್‍ಹೀಡ್ ಮಾರ್ಟೀನ್ ಕಾರ್ಪೋರೇಷನ್ ಹಾಗೂ ಸ್ವೀಡನ್‍ನ ಸಾಬ್ ಎಬಿ ಸೇರಿದಂತೆ ವಿವಿಧ ಪ್ರಮುಖ ಯುದ್ಧ ನೌಕೆಗಳ ಉತ್ಪಾದಕರನ್ನು ರಕ್ಷಣಾ ಅಧಿಕಾರಿಗಳು ಸೆಳೆಯುತ್ತಿದ್ದಾರೆ. ಇವುಗಳಲ್ಲಿ ಶೇ.85ರಷ್ಟು ಉತ್ಪಾದನೆ ಭಾರತದಲ್ಲೇ ಆಗಬೇಕು ಎಂದು ಕಳೆದ ವರ್ಷವೇ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ದೇಶದ ರಕ್ಷಣಾ ಪಡೆಗಳನ್ನು ಅಧುನಿಕರಣಗೊಳಿಸುವುದು ಪ್ರಧಾನಿ ಮೋದಿ ಅವರಿಗೆ ಸವಾಲಾಗಿ ಪರಿಣಮಿಸಿದ್ದು, ನೆರೆಯ ಚೀನಾ ಹಾಗೂ ಪಾಕಿಸ್ತಾನಗಳಿಂದ ಬೆದರಿಕೆ ಎದುರಾದರೂ ಮೊದಲ ಅವಧಿಯಲ್ಲಿ ಯಾವುದೇ ಹೊಸ ಪ್ರಮುಖ ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಸಹಿ ಹಾಕಲಿಲ್ಲ. ಇತ್ತೀಚೆಗೆ ಸೋವಿಯತ್ ನಿರ್ಮಿತ ಭಾರತ ಹಳೆಯ ಮಿಗ್-21 ಯುದ್ಧ ವಿಮಾನ ಪಾಕಿಸ್ತಾನದ ಅಧುನಿಕ ಎಫ್-16 ಯುದ್ಧ ವಿಮಾನವನ್ನೇ ಹೊಡೆದುರುಳಿಸಿತ್ತು.
ಖರೀಸುವ ಪ್ರಕ್ರಿಯೆ ಪ್ರಾರಂಭ
ವಿವಿಧ ಯುದ್ಧ ವಿಮಾನಗಳ ಉತ್ಪಾದಕರಿಂದ ಬಿಡ್ಡಿಂಗ್ ಆಹ್ವಾನಿಸಲು ಈಗಾಗಲೇ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಿರಿಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ಅವರು ಸಂಸತ್‍ನಲ್ಲಿ ಪ್ರಸ್ತಾಪಿಸಿದ್ದು, ಟ್ಯಾಂಕ್‍ಗಳು, ಶಸ್ತ್ರಸಜ್ಜಿತ ವಾಹನಗಳನ್ನು ಖರೀದಿಸಲು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದು, ವಿದೇಶಿ ಹಡಗು ನಿರ್ಮಾಣ ಮಾಡುವವರಿಂದ ಭಾರತದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಗಡಿಯ ಭದ್ರತೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಭಾರತ ನೌಕಾಪಡೆ ಹಾಗೂ ಕರಾವಳಿ ಕಾವಲುಗಾರರಿಗೆ ಯುದ್ಧ ನೌಕೆಗಳು ಹಾಗೂ ಹಡಗುಗಳನ್ನು ಖರೀದಿಸಲು ಬಿಡ್ ಕರೆಯಲಾಗಿದೆ. 150(2.2ಬಿಲಿಯನ್ ಡಾಲರ್) ಬಿಲಿಯನ್ ಮೌಲ್ಯದ 6 ಕ್ಷಿಪಣಿ ಯುದ್ಧ ನೌಕೆಗಳು ಹಾಗೂ ಇತರ ಸಣ್ಣ ಹಡಗುಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಪ್ರಧಾನಿ ಮೋದಿ ಆಡಳಿತ ಸೋಮವಾರ 7 ಶಿಪ್‍ಯಾರ್ಡ್ ಗಳಿಗೆ ತಿಳಿಸಿದೆ ಎಂದು ನಾಯಕ್ ತಿಳಿದ್ದಾರೆ.
ಭಾರತೀಯ ವಾಯು ಸೇನೆ ಹಾಗೂ ನೌಕಾಪಡೆಗೆ ಒಟ್ಟು 400 ಸಿಂಗಲ್ ಹಾಗೂ ಡಬಲ್ ಎಂಜಿನ್ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.
ಬೋಯಿಂಗ್‍ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಡೆಸುವ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್) ಹಾಗೂ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿ., ಫೈಟರ್ ಜೆಟ್‍ಗಳ ಖರೀದಿಗೆ ಎಫ್/ಎ-18, ಲಾಕ್‍ಹೀಡ್ ತನ್ನ ಎಫ್-21 ಜೆಟ್‍ಗಳಿಗಾಗಿ ಟಾಟಾ ಗ್ರೂಪ್‍ನೊಂದಿಗೆ ಜಂಟಿಯಾಗಿ ಬಿಡ್ ಮಾಡಲಿದೆ. ಸಾಬ್ ತನ್ನ ಗ್ರಪೆನ್ ಜೆಟ್‍ಗಳನ್ನು ತಯಾರಿಸಲು ಗೌತಮ್ ಅದಾನಿಯೊಂದಿಗೆ ಕೈ ಜೋಡಿಸಲಿದೆ.
2015ರಲ್ಲಿ 11 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ 126 ರಫೇಲ್ ಯುದ್ಧ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್‍ನೊಂದಿಗಿನ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತೆ ರಫೇಲ್ ಖರೀದಿಸಲು ಒಂದು ದಶಕವೇ ಬೇಕಾಯಿತು. ಕಳೆದ ಬಾರಿಯ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ 36 ಜೆಟ್‍ಗಳನ್ನು ಪ್ರತ್ಯೇಕವಾಗಿ ಖರೀದಿಸಲಾಯಿತು. ಆದರೆ, ಈ ಬಾರಿಯ ಟೆಂಡರ್‍ನಲ್ಲಿ ಆಯ್ಕೆಯಾದವರು ಒಪ್ಪಂದ ಮಾಡಿಕೊಂಡ ಮೂರು ವರ್ಷಗಳಲ್ಲಿ ಮೊದಲ ಜೆಟ್‍ನಲ್ಲಿ ಹಸ್ತಾಂತರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.