ನವದೆಹಲಿ: ಸುಡಾನ್‍ನ (Sudan) ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ದೇಶದ ನಾಗರಿಕರನ್ನು ಸ್ಥಳಾಂತರಿಸಲು ಭಾರತ (India) ಸರ್ಕಾರವು ಆಪರೇಷನ್ ಕಾವೇರಿ (Operation Kaveri) ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವ ಎಸ್. ಶಂಕರ್ (S Jaishankar) ತಿಳಿಸಿದರು.
ಈಗಾಗಲೇ ಸುಮಾರು 500 ಭಾರತೀಯರು ಸುಡಾನ್ನ ಬಂದರು ಬಳಿ ತಲುಪಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಆಪರೇಷನ್ ಕಾವೇರಿ ಎಂದು ಹೆಸರಿಡಲಾಗಿದೆ ಎಂದು ಟ್ವೀಟ್‍ನಲ್ಲಿ ಮಾಹಿತಿ ನೀಡಿದ್ದಾರೆ.
Advertisement
Operation Kaveri gets underway to bring back our citizens stranded in Sudan.
About 500 Indians have reached Port Sudan. More on their way.
Our ships and aircraft are set to bring them back home.
Committed to assist all our bretheren in Sudan. pic.twitter.com/8EOoDfhlbZ
— Dr. S. Jaishankar (@DrSJaishankar) April 24, 2023
Advertisement
ಟ್ವೀಟ್‍ನಲ್ಲಿ ಏನಿದೆ?: ಸುಡಾನ್‍ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ಪ್ರಾರಂಭಗೊಂಡಿದೆ. ಸುಮಾರು 500 ಭಾರತೀಯರು ಸುಡಾನ್ನ ಬಂದರು ಬಳಿ ತಲುಪಿದ್ದಾರೆ. ಈಗಾಗಲೇ ಅವರನ್ನು ಸುರಕ್ಷಿತವಾಗಿ ಕರೆತರಲು ನಮ್ಮ ದೇಶದ ಹಡುಗುಗಳು ಹಾಗೂ ವಿಮಾನಗಳು ಸಜ್ಜಾಗಿವೆ. ಸುಡಾನ್‍ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಬದ್ಧವಾಗಿದ್ದೇವೆ ಎಂದರು.
Advertisement
Advertisement
ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಸುಡಾನ್ ರಾಜಧಾನಿ ಸೇರಿದಂತೆ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ. ಈ ಹಿನ್ನೆಲೆ ಎರಡೂ ಕಡೆಗಳಿಂದ ಹಿಂಸಾಚಾರ ಭುಗಿಲೆದ್ದಿದೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ
ಈಗಾಗಲೇ ಘರ್ಷಣೆ ನಡೆಯುತ್ತಿರುವ ಪ್ರದೇಶಗಳಿಂದ ಭಾರತದ ನಾಗರಿಕರನ್ನು ರಕ್ಷಿಸಿ ಕರೆತರಲು ಭಾರತೀಯ ರಾಯಭಾರ ಕಚೇರಿಯ (Indian Embassy) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ