Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದಿನಿಂದ ಭಾರತ-ಇಂಗ್ಲೆಂಡ್‌ ಟೆಸ್ಟ್‌ – ಗಿಲ್‌ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಇಂದಿನಿಂದ ಭಾರತ-ಇಂಗ್ಲೆಂಡ್‌ ಟೆಸ್ಟ್‌ – ಗಿಲ್‌ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ

Cricket

ಇಂದಿನಿಂದ ಭಾರತ-ಇಂಗ್ಲೆಂಡ್‌ ಟೆಸ್ಟ್‌ – ಗಿಲ್‌ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ

Public TV
Last updated: June 20, 2025 8:08 am
Public TV
Share
3 Min Read
Ind vs Eng test
SHARE

– 18 ವರ್ಷಗಳ ಬಳಿಕ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲುವ ಕನಸು
– ರೋಹಿತ್‌, ಕೊಹ್ಲಿ ಅನುಪಸ್ಥಿತಿಯಲ್ಲಿ ಸತ್ವಪರೀಕ್ಷೆಗೆ ಸಜ್ಜಾದ ಭಾರತ

ಲಂಡನ್‌: ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್‌ (Ind vs Eng) ನಡುವಿನ ‘ಪಟೌಡಿ’ (ತೆಂಡೂಲ್ಕರ್‌-ಆ್ಯಂಡರ್ಸನ್‌ ಟ್ರೋಫಿ) ಟ್ರೋಫಿಯ ಐದು ಪಂದ್ಯಗಳ ಟೆಸ್ಟ್‌ ಸರಣಿ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದೆ. ಯುವ ಆಟಗಾರ ಶುಭಮನ್ ಗಿಲ್‌ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ (Team India) ಹೊಸ ಅಧ್ಯಾಯಕ್ಕೆ ಬರೆಯಲು ಸಜ್ಜಾಗಿದೆ.

ಸ್ಥಳ: ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣ
ಸಮಯ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ಚಾನಲ್ ಮತ್ತು ಜಿಯೋ ಸ್ಟಾರ್ ಆ್ಯಪ್

Ind vs Eng 2

ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿ (Test Series) ಶುರುವಾಗಲಿದೆ. ಮೊದಲ ಟೆಸ್ಟ್‌ ಪಂದ್ಯ ಹೆಡಿಂಗ್ಲೆ ಲೀಡ್ಸ್‌ ಮೈದಾನದಲ್ಲಿ ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಜೊಯೋ ಹಾಟ್‌ಸ್ಟಾರ್‌ ಒಟಿಟಿ, ಸೋನಿ ಸ್ಫೋರ್ಟ್ಸ್‌ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ.

ಇಂಗ್ಲೆಂಡ್‌ನಲ್ಲಿ ಭಾರತ ಗೆದ್ದಿರೋದು ಮೂರೇ ಸರಣಿ
1971ರಲ್ಲಿ ಅಜಿತ್‌ ವಾಡೇಕರ್‌, 1986ರಲ್ಲಿ ಕಪಿಲ್‌ ದೇವ್‌ ಮತ್ತು 2007ರಲ್ಲಿ ರಾಹುಲ್‌ ದ್ರಾವಿಡ್‌ ನೇತೃತ್ವದ ಭಾರತ ತಂಡ, ಮಾತ್ರ ಕಳೆದ 9 ದಶಕಗಳಲ್ಲಿ ಆಂಗ್ಲರ ನಾಡಿನಲ್ಲಿ ಟೆಸ್ಟ್‌ ಸರಣಿ ಗೆದ್ದಿದೆ. ಕೊಹ್ಲಿ ಮತ್ತು ರೋಹಿತ್‌ (Rohit Sharma And Virat Kohli) ಉತ್ತಮ ಪ್ರದರ್ಶನ ನೀಡಿದರೂ ಆಂಗ್ಲರ ನಾಡಿನಲ್ಲಿ ಟೆಸ್ಟ್‌ ಸರಣಿ ಜಯಿಸಲು ಸಾಧ್ಯವಾಗಿಲ್ಲ. 2025-27ರ ಋುತುವಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಈ ಸರಣಿಯೊಂದಿಗೆ ಟೀಂ ಇಂಡಿಯಾ ಹೊಸ ಅಧ್ಯಾಯ ಆರಂಭಿಸುತ್ತಿದೆ.

India vs England

ಇಬ್ಬರು ಸ್ಟಾರ್‌ಗಳ ಅನುಪಸ್ಥಿತಿ
ಕಳೆದೊಂದು ದಶಕದಲ್ಲಿ ‘ಟೆಸ್ಟ್‌ ಕ್ರಿಕೆಟ್‌’ ಅನ್ನು ಹೊಸ ಎತ್ತರಕ್ಕೇರಿಸಿದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಮತ್ತು ಇಂಗ್ಲೆಂಡ್‌ ವಿರುದ್ಧ ಅತ್ಯಧಿಕ ವಿಕೆಟ್‌ ಪಡೆದಿರುವ ಆರ್‌.ಅಶ್ವಿನ್‌ ಅವರ ಅನುಪಸ್ಥಿತಿ ಭಾರತದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವನ್ನು ಸಪ್ಪೆ ಮಾಡಿದಂತೆ ಕಾಣುತ್ತಿದೆ.

ಟೀಂ ಇಂಡಿಯಾಕ್ಕೆ 37ನೇ ಟೆಸ್ಟ್‌ ಕ್ಯಾಪ್ಟನ್‌ ಆಗಿರುವ ಯುವ ಆಟಗಾರ ಶುಭಮನ್‌ ಗಿಲ್‌ ಅವರ ನಾಯಕತ್ವಕ್ಕೂ ಇದು ಅಗ್ನಿಪರೀಕ್ಷೆಯಾಗಿದೆ. ಬ್ಯಾಟಿಂಗ್‌ ಸಂಪ್ರದಾಯ ಬದಲಾಯಿಸಿರುವ ಬ್ರೆಂಡನ್‌ ಮೆಕಲ್ಲಂ ಅವರ ಗರಡಿಯಲ್ಲಿ ಪಳಗಿರುವ ಬೆನ್‌ ಸ್ಟೋಕ್ಸ್‌ ಸಾರಥ್ಯದ ಇಂಗ್ಲೆಂಡ್‌, ಸರಣಿಯಲ್ಲಿ ಫೇವರಿಟ್‌ ತಂಡವಾಗಿ ಕಣಕ್ಕಿಳಿಯುತ್ತಿದೆ.

India vs England 1st Test

ಇಂಗ್ಲೆಂಡ್ ಪಡೆ ಬಲಿಷ್ಠ
36 ಶತಕಗಳು ಒಳಗೊಂಡಂತೆ 13 ಸಾವಿರಕ್ಕೂ ಅಧಿಕ ರನ್‌ ಕಲೆಹಾಕಿರುವ ಜೋ ರೂಟ್‌ ಅವರನ್ನು ಹೊಂದಿರುವ ಇಂಗ್ಲೆಂಡ್‌ನ ಬ್ಯಾಟಿಂಗ್‌ ಘಟಕ ಭಾರತಕ್ಕೆ ಹೋಲಿಸಿದರೆ, ಉತ್ತಮ ಎಂದು ಕಾಣುತ್ತದೆ. ಏಕೆಂದರೆ ಪ್ರವಾಸಿ ತಂಡದ ಅನುಭವಿ ಎನಿಸಿರುವ ಬ್ಯಾಟರ್‌ ಕೆ.ಎಲ್‌ ರಾಹುಲ್‌, 58 ಟೆಸ್ಟ್‌ಗಳಲ್ಲಿ 3,257 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದಾರೆ. ಆದರೆ ಭಾರತೀಯ ಬೌಲಿಂಗ್‌ ಘಟಕವು ವೇಗಿ ಜಸ್‌ಪ್ರಿತ್‌ ಬುಮ್ರಾ ಅವರ ಲಭ್ಯತೆಯಿಂದ ಬಲಿಷ್ಠವಾಗಿದೆ.

India vs England

ಕೇವಲ 3 ಪಂದ್ಯಗಳಿಗೆ ಬುಮ್ರಾ ಲಭ್ಯವಿದ್ದರೂ ಆತಿಥೇಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಅವಕಾಶ ಭಾರತಕ್ಕಿದೆ. ಕೊಹ್ಲಿ ಮತ್ತು ರೋಹಿತ್‌ ಅನುಪಸ್ಥಿತಿಯಲ್ಲಿ ಯುವ ಬ್ಯಾಟಿಂಗ್‌ ತಾರೆಗಳನ್ನು ಒಳಗೊಂಡಿರುವ ಟೀಂ ಇಂಡಿಯಾ, ದಿಗ್ಗಜ ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಅವರು ಎರಡು ದಶಕಗಳಿಂದ ಕಾಯ್ದಿರಿಸಿದ್ದ ಗುಣಮಟ್ಟವನ್ನು ಹೊಂದಿರದ ಇಂಗ್ಲೆಂಡ್‌ ಬೌಲಿಂಗ್‌ ಮೇಲೆ ಪ್ರಭಾವ ಬೀರುವ ಅತ್ಯುತ್ತಮ ಅವಕಾಶವಿದೆ. ಕ್ರಿಸ್‌ ವೋಕ್ಸ್‌, ಬ್ರೈಡನ್‌ ಕಾರ್ಸ್‌ ಅವರ ದಾಳಿ ಪರಿಣಾಮಕಾರಿಯಾಗಿರದ ಕಾರಣ ಭಾರತೀಯರು ಮೇಲುಗೈ ಸಾಧಿಸಬಹುದು. ಆದ್ರೆ ಶೋಯೆಬ್‌ ಬಷೀರ್‌ ಅವರ ಸ್ಪಿನ್‌ ದಾಳಿ ಎದುರಿಸುವುದು ಕೊಂಚ ಸವಾಲಿನ ಕೆಲಸವಾಗಿಯೂ ಕಾಣಬಹುದು.

Ind vs Eng

ಇತ್ತ ಭಾರತ ತಂಡದಲ್ಲಿ ಯುವ ಬ್ಯಾಟರ್‌ಗಳೊಂದಿಗೆ ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಮತ್ತು ಅನುಭವಿ ರವೀಂದ್ರ ಜಡೇಜಾ ಸಹ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಪೈಪೋಟಿಯಲ್ಲಿದ್ದಾರೆ.

TAGGED:Ben StokesenglandIND vs ENGShubman GillTeam indiatest cricketಇಂಗ್ಲೆಂಡ್ಟೆಸ್ಟ್ ಕ್ರಿಕೆಟ್ಭಾರತರೋಹಿತ್ ಶರ್ಮಾವಿರಾಟ್ ಕೊಹ್ಲಿಶುಭಮನ್ ಗಿಲ್
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

Match Rain RR vs RCB
Cricket

IPL 2026 | RR Vs RCB ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್‌ ವಿಳಂಬ

Public TV
By Public TV
9 minutes ago
Bengaluru Rain 2
Bengaluru City

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭ – ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ

Public TV
By Public TV
17 minutes ago
pune murder
Crime

ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ 6 ವರ್ಷದ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

Public TV
By Public TV
19 minutes ago
Lamborghini Car 2
Bengaluru City

ಲ್ಯಾಂಬೋರ್ಗಿನಿ ಕಾರಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಅದೇ ಕಾರಲ್ಲಿ ವಾಪಸ್‌ ಬನ್ನಿ – ಸಂಚಾರ ನಿಯಮ ಉಲ್ಲಂಘಿಸಿದವನಿಗೆ ಹೈಕೋರ್ಟ್ ಶಿಕ್ಷೆ!

Public TV
By Public TV
36 minutes ago
ruk samhita yaga udupi
Latest

ಪ್ರಪಂಚದಲ್ಲಿ ಯುದ್ಧೋನ್ಮಾದ ನಿಲ್ಲಲಿ: ವೆಂಕಟರಮಣ ದೇವಸ್ಥಾನದಲ್ಲಿ ಋಕ್ ಸಂಹಿತಾ ಯಾಗ

Public TV
By Public TV
41 minutes ago
Parameshwar
Bengaluru City

ಝಾಂಬಿ ಡ್ರಗ್‌ ಅನ್ನೋದೇ ಇಲ್ಲ, ಆತಂಕ ಬೇಡ – ಪರಮೇಶ್ವರ್‌ ಸ್ಪಷ್ಟನೆ

Public TV
By Public TV
48 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?