ಕುಲದೀಪ್ ಬೌಲಿಂಗ್ ಮಿಂಚು, ಸುಲಭ ಸರಣಿ ಗೆಲುವು – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

Public TV
3 Min Read
ind vs sa 3 1

ನವದೆಹಲಿ: ಕುಲದೀಪ್ ಯಾದವ್ (Kuldeep Yadav) ಮಿಂಚಿನ ಬೌಲಿಂಗ್ ದಾಳಿ ಹಾಗೂ ಶುಭಮನ್ ಗಿಲ್ (Shubman Gill) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ 2-1 ಅಂತರದಲ್ಲಿ ಸರಣಿ ಜಯ ಸಾಧಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ (South Africa) ತಂಡವು ಟೀಂ ಇಂಡಿಯಾ (Team India) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 27.1 ಓವರ್‌ಗಳಲ್ಲಿ 99 ರನ್‌ಗಳಿಗೆ ಸರ್ವಪತನ ಕಂಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಿಗದಿತ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 ರನ್ ಸಿಡಿಸಿ ಭರ್ಜರಿ ಗೆಲುವಿನೊಂದಿಗೆ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

ind vs sa 4 1

ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಶುಭಮನ್ ಗಿಲ್ ಹಾಗೂ ಶಿಖರ್ ಧವನ್ ಭರ್ಜರಿ ಉತ್ತಮ ಶುಭಾರಂಭ ನೀಡಿದರು. ಆದರೆ ಸ್ಫೋಟಕ ಬ್ಯಾಟಿಂಗ್ ನಡೆಸಲು ಮುಂದಾದ ನಾಯಕ ಶಿಖರ್ ಧವನ್ ಅಲ್ಪ ಮೊತ್ತಕ್ಕೆ ಔಟಾದರು. 14 ಎಸೆತಗಳನ್ನು ಎದುರಿಸಿದ ನಾಯಕ ಶಿಖರ್ ಧವನ್ 1 ಬೌಂಡರಿಯೊಂದಿಗೆ 8 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಬ್ಯಾಟ್ ಹೊತ್ತ ಇಶಾನ್ ಕಿಶನ್ 16 ಬಾಲ್‌ಗೆ 2 ಬೌಂಡರಿಯೊಂದಿಗೆ 10 ರನ್ ಗಳಿಸಿದರು.

ಆರಂಭದಲ್ಲಿ ಕಣಕ್ಕಿಳಿದು ಸೆಣಸಾಡಿದ ಶುಭಮನ್ ಗಿಲ್ 57 ಬಾಲ್‌ಗಳಿಗೆ 8 ಬೌಂಡರಿ ಹೊಡೆದು ಒಟ್ಟು 49 ರನ್‌ಗಳನ್ನು ಗಳಿಸಿದರು. ಆದರೆ ಕೊನೆಯ ಕೆಲವು ರನ್‌ಗಳನ್ನು ಗಳಿಸಲು ಬಾಕಿಯಿರುವಾಗ ಔಟ್ ಆದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ 23 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸ್ ಹೊಡೆದು ಒಟ್ಟು 28 ರನ್ ಗಳಿಸಿದರು. ಕೊನೆಯಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 4 ಎಸೆತಕ್ಕೆ 2 ರನ್ ಗಳಿಸಿದರು.

ind vs sa 9

ಟಾಸ್ ಸೋತು ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ನಾಯಕತ್ವದಲ್ಲಿ ಕಣಕ್ಕಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ತೀವ್ರ ಆಘಾತ ಎದುರಿಸಿತು. 3ನೇ ಓವರ್‌ನಲ್ಲೇ ಕ್ವಿಂಟನ್ ಡಿಕಾಕ್ 6 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಡಿಕಾಕ್ ವಿಕೆಟ್ ಪಡೆಯುವ ಮೂಲಕ ವಾಷಿಂಗ್ಟನ್ ಸುಂದರ್ ಯಶಸ್ಸಿನ ಖಾತೆ ತೆರೆದರು.

ಇದರ ಬೆನ್ನಲ್ಲೇ 27 ಎಸೆತಗಳನ್ನು ಎದುರಿಸಿದ ಜಾನ್ನೆಮನ್ ಮಲನ್ 15 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಎದುರು ಮಂಡಿಯೂರಬೇಕಾಯಿತು. ಕೇವಲ 3 ರನ್ ಗಳಿಸಿದ್ದ ರೀಝಾ ಹೆಂಡ್ರಿಕ್ಸ್ಗೂ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಐಡನ್ ಮಾರ್ಕ್ರಾಮ್ 9 ರನ್ ಗಳಿಸಿ ನಿರ್ಗಮಿಸಿದರು. ಇದನ್ನೂ ಓದಿ: ನೀನು SSLC ಪಾಸ್ ಆಗಲ್ಲ ಅಂತ ಅಪ್ಪ ಹೇಳಿದ್ರು- ಧೋನಿ ಸ್ಕೂಲ್ ಲೈಫ್ ರಿವೀಲ್

ind vs sa 1 1

ದಕ್ಷಿಣ ಆಫ್ರಿಕಾ ತಂಡ 15.3 ಓವರ್‌ನಲ್ಲೇ ಅಂದ್ರೆ ಪವರ್‌ಪ್ಲೇಗೂ ಮುನ್ನವೇ 43 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಹೆನ್ರಿಕ್ ಕ್ಲಾಸೆನ್ 42 ಎಸೆತಗಳಲ್ಲಿ 34 ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. 4 ಬೌಂಡರಿ ಸಿಡಿಸಿದ ಕ್ಲಾಸೆನ್ 34 ರನ್ ಗಳಿಸಿದರು. ಈ ವೇಳೆ ಶೆಹಬಾಜ್ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ನಂತರದಲ್ಲಿ ಬಂದ ಯಾವೊಬ್ಬ ಆಟಗಾರರೂ ಸ್ಥಿರವಾಗಿ ನಿಲ್ಲದ ಕಾರಣ ಅತ್ಯಲ್ಪ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ಸೋಲನ್ನು ಅನುಭವಿಸಿತು. ನಾಯಕ ಡೇವಿಡ್ ಮಿಲ್ಲರ್ 7 ರನ್, ಆಂಡಿಲ್ ಫೆಹ್ಲುಕ್ವಾಯೊ 5 ರನ್, ಮಾರ್ಕೊ ಯಾನ್ಸೆನ್ 14 ರನ್ ಹಾಗೂ ಜಾರ್ನ್ ಫಾರ್ಚುಯಿನ್ 1 ರನ್‌ಗಳಿಸಿದರು. ಇದನ್ನೂ ಓದಿ: T20 ವಿಶ್ವಕಪ್‍ನಲ್ಲೂ ಆರಂಭವಾಯಿತು ಸೂರ್ಯನ ಅಬ್ಬರ – ಪಂತ್ ಓಪನರ್

ind vs sa 2 1

ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್, ಸಿರಾಜ್, ಶಹಬಾಜ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 4 ಓವರ್ ಗಳಲ್ಲಿ 18 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *