ಕೊಲಂಬೊ: ಈಸ್ಟರ್ ಭಾನುವಾರದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಸಮಯದಲ್ಲಿ ಅನಧಿಕೃತವಾಗಿ ಶಾಲೆಯೊಂದಕ್ಕೆ ಪ್ರವೇಶಿಸಲು ಯತ್ನಿಸಿದ ಭಾರತ ಮೂಲದ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.
Advertisement
ಬಂಧಿತ ಪತ್ರಕರ್ತನನ್ನು ಭಾರತದ ದೆಹಲಿ ಮೂಲದ ಸಿದ್ದಿಕ್ ಅಹ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರು ನ್ಯೂಸ್ ಏಜೆನ್ಸಿಯೊಂದರಲ್ಲಿ ಛಾಯಾಚಿತ್ರ ಗ್ರಾಹಕರಾಗಿದ್ದಾರೆ. ಇದನ್ನು ಓದಿ ಸರಣಿ ಸ್ಫೋಟದ ಬಳಿಕ ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ
Advertisement
ಸಿದ್ದಿಕ್ ಅಹ್ಮದ್ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಆದ ಪರಿಣಾಮದ ಬಗ್ಗೆ ವರದಿ ಮಾಡಲು ಹೋಗಿದ್ದರು. ಸೇಂಟ್ ಸೆಬಾಸ್ಟಿಯಾನ್ ಚರ್ಚ್‍ನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಅಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲು ಶಾಲೆಗೆ ಹೋಗಿದ್ದಾರೆ. ಆ ಶಾಲೆಗೆ ಹೋಗಲು ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಶಾಲೆಗೆ ಪ್ರವೇಶ ಬಯಸಿದ ಕಾರಣ ಶ್ರೀಲಂಕಾ ಪೊಲೀಸರು ಸಿದ್ದಿಕ್ ನನ್ನು ಬಂಧಿಸಿದ್ದಾರೆ. ಇದನ್ನು ಓದಿ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ -ಸಿಲಿಕಾನ್ ಸಿಟಿಯಲ್ಲಿ ತೀವ್ರ ಕಟ್ಟೆಚ್ಚರ!
Advertisement
Advertisement
ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.