ನವದೆಹಲಿ: ಭಾರತದ (India) ವಿರುದ್ಧ ವಿಷಕಾರುತ್ತಿದ್ದ ಪಾಕಿಸ್ತಾನ ಕ್ರಿಕೆಟ್ (Pakistan) ಮಾಜಿ ನಾಯಕ ಶಾಹಿದ್ ಅಫ್ರಿದಿಗೆ (Shahid Afridi) ಕೇಂದ್ರ ಸರ್ಕಾರ ಬಿಸಿಮುಟ್ಟಿಸಿದೆ.
ಸುಮಾರು 12 ಲಕ್ಷ ಚಂದದಾರನ್ನು ಹೊಂದಿದ್ದ ಖಾತೆಯನ್ನು ಭಾರತ ಸರ್ಕಾರ ಸೂಚನೆಯ ಮೇರೆಗೆ ಯೂಟ್ಯೂಬ್ (You Tube) ಭಾರತದ ಬ್ಲಾಕ್ ಮಾಡಿದೆ.
ಶಾಹಿದ್ ಅಫ್ರಿದಿ ಚಾನೆಲ್‌ಗೆ ಕ್ಲಿಕ್ ಮಾಡಿದರೆ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದ ಆದೇಶದ ಕಾರಣ ಪ್ರಸ್ತುತ ಈ ಖಾತೆಯೂ ಭಾರತದಲ್ಲಿ ಲಭ್ಯವಿಲ್ಲ ಎಂಬ ಸಂದೇಶ ಬರುತ್ತಿದೆ. ಇದನ್ನೂ ಓದಿ: ಪಾಪಿ ಪಾಕಿಸ್ತಾನ – ಗಡಿಯಲ್ಲಿ ಸುರಂಗ ಕುತಂತ್ರ ತನಿಖೆಗೆ ಬಿಎಸ್‌ಎಫ್‌ಗೆ ನಿರ್ದೇಶನ
ಭಾರತದ ವಿರುದ್ಧ ಮಾತನಾಡಿದ್ದ ಅಫ್ರಿದಿ ಖಾತೆಯನ್ನು ಬ್ಲಾಕ್ ಮಾಡಬೇಕೆಂದು ನೆಟ್ಟಿಗರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಪಾಕಿಸ್ತಾನ ಬಹುತೇಕ ಯೂಟ್ಯೂಬ್ ಖಾತೆಗಳಿಗೆ ಆದಾಯ ಭಾರತದ ವೀಕ್ಷಕರಿಂದ ಬರುತ್ತಿದೆ. ಇವರಿಗೆ ಬರುವ ಆದಾಯವನ್ನು ನಿಲ್ಲಿಸಬೇಕಾದರೆ ಈ ಖಾತೆಗಳನ್ನು ಭಾರತದಲ್ಲಿ ಬಂದ್ ಮಾಡಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್ ರದ್ದು!
ಈ ಮೊದಲು ಪಾಕಿಸ್ತಾನ ಮಾಜಿ ಆಟಗಾರ, ವೇಗದ ಬೌಲರ್ ಶೋಯೆಬ್ ಅಕ್ತರ್ ಅವರ ಖಾತೆ ಸೇರಿದಂತೆ ಪಾಕಿಸ್ತಾನದ ಜನಪ್ರಿಯ ಸುದ್ದಿ ಮಾಧ್ಯಮಗಳ ಖಾತೆಯನ್ನು ಬ್ಲಾಕ್ ಮಾಡಿಸಿತ್ತು.
ಅಫ್ರಿದಿ ಹೇಳಿದ್ದೇನು?
ಭಾರತೀಯ ಸೇನೆ ನಿಷ್ಪ್ರಯೋಜಕ ಸೇನೆಯಾಗಿದೆ. ಪ್ರತಿಯೊಂದು ಅಪಘಾತಕ್ಕೂ ಭಾರತ ಪಾಕಿಸ್ತಾನವನ್ನು ಅನ್ಯಾಯವಾಗಿ ಹೊಣೆಗಾರರನ್ನಾಗಿ ಮಾಡುತ್ತದೆ. ಭಾರತದಲ್ಲಿ ಪಟಾಕಿ ಸಿಡಿದರೂ ಪಾಕಿಸ್ತಾನವನ್ನು ದೂಷಿಸಲಾಗುತ್ತದೆ. ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದರೂ ದಾಳಿ ತಡೆಯಲು ವಿಫಲವಾದ ಅಸಮರ್ಥ ಸೇನೆ ಎಂದು ಟೀಕಿಸಿದ್ದರು.