ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ (Pahalgam Terror Attack) ಬೆನ್ನಲ್ಲೇ ಪಾಕಿಸ್ತಾನದ (Pakistan) ವಿರುದ್ಧ ಭಾರತ ಹಲವು ರಾಜತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಈಗ ಪಾಕಿಸ್ತಾನದ ಎಲ್ಲಾ ರೀತಿಯ ವಸ್ತುಗಳ ಆಮದಿಗೆ ನಿರ್ಬಂಧ ವಿಧಿಸಿದೆ. ಭಾರತದ ಈ ನಿರ್ಧಾರದಿಂದ ಪಾಕ್ ಮತ್ತಷ್ಟು ಆರ್ಥಿಕ ಸಮಸ್ಯೆಗೆ ಒಳಗಾದರೆ, ಭಾರತದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳಿದೆ.
ವಿದೇಶಿ ವ್ಯಾಪಾರ ನೀತಿ (Foreign Trade Policy) 2023ರ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿರಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧ ಹೇರಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕ ತಿಳಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ
ಪಾಕಿಸ್ತಾನದಿಂದ ಭಾರತ ಕೃಷಿ ಉತ್ಪನ್ನಗಳಾದ ಡ್ರೈಫ್ರೂಟ್ಸ್ (ಅಂಜೂರ, ದ್ರಾಕ್ಷಿ, ಬಾದಾಮಿ), ತಾಜಾ ಹಣ್ಣುಗಳು (ಡೇಟ್ಸ್), ಮತ್ತು ಕೆಲವು ಧಾನ್ಯಗಳನ್ನು ಮತ್ತು ಕಲ್ಲು ಉಪ್ಪು, ಸುಣ್ಣದ ಕಲ್ಲು, ಸಿಮೆಂಟ್ ಕಲ್ಲಿನಂತಹ ಖನಿಜ ಉತ್ಪನ್ನಗಳನ್ನು ಹಾಗೂ ಚರ್ಮದ ವಸ್ತುಗಳು, ಹತ್ತಿ, ಉಕ್ಕಿನ ಉತ್ಪನ್ನಗಳಂತಹ ಕೈಗಾರಿಕಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದರ ಜೊತೆಗೆ ಪಾಕ್‌ನಿಂದ ಆಪ್ಟಿಕಲ್ ಲೆನ್ಸ್‌ಗಳು, ಕೆಲವು ಮಸಾಲೆ ಪದಾರ್ಥಗಳು ಭಾರತಕ್ಕೆ ಬರುತ್ತಿತ್ತು. ಇದನ್ನೂ ಓದಿ: ಒಂದೇ ದಿನ 30,000ಕ್ಕೂ ಹೆಚ್ಚು ಜನರಿಂದ ಕೇದಾರನಾಥನ ದರ್ಶನ
2018-19ಕ್ಕಿಂತ ಮೊದಲು ಭಾರತವು ಪಾಕಿಸ್ತಾನದಿಂದ ಸುಮಾರು 494 ಮಿಲಿಯನ್ ಡಾಲರ್ (ಸುಮಾರು 3,600 ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ 2019ರ ನಂತರ ಈ ಪ್ರಮಾಣವು ಕೇವಲ 10-20 ಮಿಲಿಯನ್ ಡಾಲರ್‌ಗೆ ಇಳಿದಿದೆ. ಇದರಲ್ಲಿ ಹೆಚ್ಚಿನ ಭಾಗವು ತೃತೀಯ ದೇಶಗಳ ಮೂಲಕ ಆಮದಾಗುತ್ತದೆ. ಇದನ್ನೂ ಓದಿ: ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ
ಆಮದು ನಿಷೇಧ ಮಾಡಿದ ಹಿನ್ನೆಲೆ ಭಾರತದ ಮೇಲೆ ಹಲವು ರೀತಿಯ ಪರಿಣಾಮ ಬೀರಲಿದೆ. ಒಣ ಹಣ್ಣುಗಳು ಮತ್ತು ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಕಾಶ್ಮೀರ ಮತ್ತು ಇತರ ಪ್ರದೇಶಗಳಿಂದ ಒಣ ಹಣ್ಣುಗಳ ಆಮದು ಕಡಿಮೆಯಾದರೆ ಈ ಉತ್ಪನ್ನಗಳ ಬೆಲೆ ಗಗನಕ್ಕೇರಬಹುದು. ಭಾರತವು ಈ ವಸ್ತುಗಳನ್ನು ಇತರ ದೇಶಗಳಿಂದ (ಉದಾ: ಆಫ್ಘಾನಿಸ್ತಾನ, ಇರಾನ್) ಆಮದು ಮಾಡಿಕೊಳ್ಳಬಹುದು. ಆದರೆ ಇದರಿಂದ ಸಾಗಣೆ ವೆಚ್ಚ ಮತ್ತು ಬೆಲೆ ಹೆಚ್ಚಾಗಬಹುದು. ಇದನ್ನೂ ಓದಿ: ಲವ್ವರ್ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ
ಕಲ್ಲು ಉಪ್ಪು, ಸಿಮೆಂಟ್ ಕಲ್ಲು, ಮತ್ತು ಚರ್ಮದ ವಸ್ತುಗಳಂತಹ ಉತ್ಪನ್ನಗಳ ಆಮದು ನಿಂತರೆ, ಕೆಲವು ಕೈಗಾರಿಕೆಗಳಿಗೆ ಕಚ್ಚಾ ವಸ್ತು ಕೊರತೆಯಾಗಬಹುದು. ಆದರೆ ಭಾರತ ಈ ಉತ್ಪನ್ನಗಳಿಗೆ ದೇಶೀಯ ಅಥವಾ ಇತರ ಮೂಲಗಳನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇದನ್ನೂ ಓದಿ: ಎಲ್ಲಾ ಹಿಂದೂಗಳನ್ನು ಸಾಲಾಗಿ ನಿಲ್ಲುವಂತೆ ಹೇಳಿದ್ರು: ಪಹಲ್ಗಾಮ್ ಭೀಕರತೆ ಬಿಚ್ಚಿಟ್ಟ ಸುಬೋಧ್
ಭಾರತದ ನಿರ್ಧಾರದಿಂದ ಪಾಕಿಸ್ತಾನದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಪಾಕಿಸ್ತಾನದ ರಫ್ತು ಆದಾಯದ ಗಣನೀಯ ಭಾಗವು ಭಾರತಕ್ಕೆ ಸಂಬಂಧಿಸಿದೆ. ಈ ಆಮದುಗಳನ್ನು ತಡೆಯುವುದರಿಂದ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಹೊಡೆತವಾಗುತ್ತದೆ. ವಿಶೇಷವಾಗಿ ಕೃಷಿ ಮತ್ತು ಖನಿಜ ಉತ್ಪನ್ನಗಳ ರಫ್ತುದಾರರಿಗೆ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಅಶ್ರಫ್ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್ – ಟೇಬಲ್ ಬಡಿದು ಆಕ್ರೋಶ
ಭಾರತಕ್ಕೆ ರಫ್ತು ಕಡಿಮೆಯಾದರೆ, ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಕಡಿಮೆಯಾಗುತ್ತದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮತ್ತಷ್ಟು ತೊಂದರೆಯನ್ನುಂಟುಮಾಡುತ್ತದೆ. ಪಾಕಿಸ್ತಾನ ತನ್ನ ಉತ್ಪನ್ನಗಳಿಗೆ ಇತರ ಮಾರುಕಟ್ಟೆಗಳನ್ನು (ಉದಾ: ಮಧ್ಯಪ್ರಾಚ್ಯ, ಚೀನಾ) ಹುಡುಕಬೇಕಾಗುತ್ತದೆ. ಆದರೆ ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ವೆಚ್ಚದಾಯಕ ಪ್ರಕ್ರಿಯೆಯಾಗಲಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು