ಚೆನ್ನೈ: ಸೆ.19ರಂದು ಪ್ರಾರಂಭವಾಗಲಿರುವ ಬಾಂಗ್ಲಾ-ಭಾರತ ನಡುವಿನ ಟೆಸ್ಟ್ ಚಾಂಪಿಯನ್‌ಶಿಪ್‌ನ (Test Championship) ಎರಡು ಪಂದ್ಯಗಳಲ್ಲಿ ಅದೃಷ್ಟ ಇದ್ದರೆ ವಿಶ್ವದ ನಂ.1 ಟೆಸ್ಟ್ ಬೌಲರ್ ಆರ್.ಅಶ್ವಿನ್ (R.Ashwin) 5 ದಾಖಲೆ ನಿರ್ಮಿಸಬಹುದು.
ಮೊದಲ ಪಂದ್ಯ ಅಶ್ವಿನ್ ತವರೂರಾದ ಚೆನ್ನೈನ ಎಮ್‌ಎ ಚಿದಂಬರಂ ಕ್ರೀಡಾಂಗಣದಲ್ಲಿ (MA Chidambaram Stadium) ನಡೆಯಲಿದ್ದರೆ, ಎರಡನೇ ಪಂದ್ಯ ಸೆ.27ರಂದು ಉತ್ತರಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ (Green Park Stadium) ನಡೆಯಲಿದೆ.
Advertisement
ಸೆ.17ರಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಅಶ್ವಿನ್, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ಅಶ್ವಿನ್ ಅತೀ ಹೆಚ್ಚು ವಿಕೆಟ್ ಪಡೆದುಕೊಂಡಿದ್ದರು.ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ
Advertisement
Advertisement
ಆ ಐದು ದಾಖಲೆಗಳೇನು?
1. ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್:
ಸದ್ಯ ಅಶ್ವಿನ್ ತಮ್ಮ ಹೆಸರಲ್ಲಿ 174 ವಿಕೆಟ್‌ಗಳನ್ನು ಹೊಂದಿದ್ದಾರೆ. ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ನಥಾನ್ ಲಿಯಾನ್‌ರವರ (Nathan Lyon) ಹೆಸರಿನಲ್ಲಿ 187 ವಿಕೆಟ್‌ಗಳಿವೆ. ಅಶ್ವಿನ್ 14 ವಿಕೆಟ್‌ಗಳನ್ನು ಈ ಎರಡು ಪಂದ್ಯಗಳಲ್ಲಿ ಪಡೆದರೆ ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ.
Advertisement
2. 2023-25ರವರೆಗೆ ನಡೆಯಲಿರುವ ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್
ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ (Josh Hazlewood) 51 ವಿಕೆಟ್‌ಗಳನ್ನು ಪಡೆದಿದ್ದು ಅಶ್ವಿನ್ 42 ವಿಕೆಟ್‌ಗಳನ್ನು ಹೊಂದಿದ್ದಾರೆ. ಈ ಎರಡು ಪಂದ್ಯದಲ್ಲಿ 10 ವಿಕೆಟ್ ತಮ್ಮದಾಗಿಸಿಕೊಂಡರೆ ಅಗ್ರ ಸ್ಥಾನಕ್ಕೇರಲಿದ್ದಾರೆ.
3. ಅತಿಹೆಚ್ಚು ಬಾರಿ 5 ವಿಕೆಟ್ ದಾಖಲೆಗೆ ಒಂದೇ ಹೆಜ್ಜೆ:
ಅಶ್ವಿನ್ ಈವರೆಗೆ ಆಡಿರುವ 34 ಪಂದ್ಯಗಳಲ್ಲಿ 10 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೇ ಆಸೀಸ್ ಕ್ರಿಕೆಟಿಗ ನಥಾನ್ ಲಿಯಾನ್ ಸಹ ಇದೇ ಸಾಧನೆ ಮಾಡಿದ್ದು, ಜಂಟಿಯಾಗಿ ಇಬ್ಬರೂ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳ ಪೈಕಿ ಕನಿಷ್ಠ 1 ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದರೆ, ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಆಟಗಾರನಾಗಿ ಹೊರಹೊಮ್ಮಲಿದ್ದಾರೆ.
4.ಭಾರತ-ಬಾಂಗ್ಲಾ ನಡುವೆ ಅತಿ ಹೆಚ್ಚು ವಿಕೆಟ್:
ಇಲ್ಲಿಯವರೆಗೂ ಬಾಂಗ್ಲಾ ವಿರುದ್ಧದ 6 ವಿಶ್ಚ ಟೆಸ್ಟ್ ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್, 31 ವಿಕೆಟ್ ಪಡೆದಿರುವ ಜಹೀರ್ ಖಾನ್ ಅವರ ದಾಖಲೆ ಮುರಿಯಲು 9 ವಿಕೆಟ್‌ಗಳ ಅಗತ್ಯವಿದೆ.ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ
5. ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಆಟಗಾರ:
126 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿಯವಗೂ ಅಶ್ವಿನ್ ಒಟ್ಟು 455 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 476 ವಿಕೆಟ್ ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿರುವ ಅನಿಲ್ ಕುಂಬ್ಳೆ (Anil Kumble) ಅವರ ದಾಖಲೆ ಮುರಿಯಲು ಅಶ್ವಿನ್ 22 ವಿಕೆಟ್ ಅಗತ್ಯವಿದೆ.