ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು (Russia Ukraine War) ಇನ್ನಷ್ಟು ತೀವ್ರಗೊಳಿಸಿದ್ದು, ಇದೀಗ ಭಾರತ (India) ಭಾರೀ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಭಾರತ, ತುರ್ತಾಗಿ ಉಕ್ರೇನ್ ಅನ್ನು ತೊರೆಯುವಂತೆ ಬುಧವಾರ ಕೇಳಿಕೊಂಡಿದೆ.
ಉಕ್ರೇನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಉಕ್ರೇನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಭಾರತ ತನ್ನ ಎಲ್ಲಾ ನಾಗರಿಕರಿಗೆ ಬುಧವಾರ ಸಲಹೆ ನೀಡಿದೆ. ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ಅಲ್ಲಿಂದ ಆದಷ್ಟು ಬೇಗ ಹೊರಡುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Embassy) ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.
In view of the deteriorating security situation & recent escalation of hostilities across Ukraine, Indian nationals are advised against travelling to Ukraine. Indian citizens, including students, in Ukraine advised to leave Ukraine at earliest: Embassy of India in Ukraine pic.twitter.com/QwOmCJitQH
— ANI (@ANI) October 19, 2022
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಉಕ್ರೇನ್‌ನ 4 ಪ್ರದೇಶಗಳಲ್ಲಿ ಸಮರ ಕಾನೂನನ್ನು ಜಾರಿಗೊಳಿಸಿದ್ದಾರೆ. ಇದರ ಹಿನ್ನೆಲೆ ಯುದ್ಧ ತೀವ್ರಗೊಳ್ಳುವ ಭೀತಿ ಉಂಟಾಗಿದ್ದು, ಭಾರತ ತನ್ನ ನಾಗರಿಕರಿಗೆ ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ
ಇದೇ ವೇಳೆ ಆಕ್ರಮಿತ ನಗರ ಖರ್ಸನ್‌ನ ಕೆಲವು ನಿವಾಸಿಗಳು ದೋಣಿಗಳ ಮೂಲಕ ಸ್ಥಳವನ್ನು ತೊರೆದಿದ್ದಾರೆ. ಈ ಪ್ರದೇಶ ಯುದ್ಧ ವಲಯವಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ ನಾಗರಿಕರನ್ನು ಅಲ್ಲಿಂದ ತೆರವುಗೊಳಿಸಲಾಗುತ್ತಿದೆ. ಖರ್ಸನ್‌ನಿಂದ ಜನರು ಪಲಾಯನವಾಗುತ್ತಿರುವ ಚಿತ್ರಗಳನ್ನು ರಷ್ಯಾ ತನ್ನ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ. ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ