ಹೇಗ್: 18 ವರ್ಷಗಳ ಬಳಿಕ ನೆದರ್‍ಲೆಂಡ್‍ನ ಹೇಗ್‍ನಲ್ಲಿರು ಅಂತಾರಾಷ್ಟ್ರೀಯ ಕೋರ್ಟ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರೋ ಕುಲಭೂಷಣ್ ಜಾಧವ್ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ವಾದ ಪ್ರತಿವಾದ ಮಂಡಿಸಿವೆ.
ಭಾರತದ ಪರ ಹಿರಿಯ ವಕೀಲ ದೀಪಕ್ ಮಿತ್ತಲ್ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ವಾದ ಮಂಡಿಸಿದ್ರು. ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಅವರನ್ನು ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ ಅಂತಾ ಸಾಳ್ವೆ ವಾದ ಮಂಡಿಸಿದರು.
Advertisement
ಮೂಲಭೂತ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಜಾಧವ್ ಅವರನ್ನು ಬಿಡುಗಡೆ ಮಾಡಬೇಕು ಅಂತ ವಾದ ಮಂಡಿಸಿದ್ರು. ಆದರೆ ಪಾಕಿಸ್ತಾನ ಭಾರತದ ವಾದವನ್ನು ಒಪ್ಪದೇ ಮೊಂಡಾಟ ಮಾಡ್ತು. ಭಾರತ ಅಂತಾರಾಷ್ಟ್ರೀಯ ಕೋರ್ಟನ್ನ ರಾಜಕೀಯ ಥಿಯೇಟರ್ ಥರ ಬಳಸ್ತಿದೆ ಅಂತಾ ವಾದ ಮಂಡಿಸಿತು.
Advertisement
ಭಾರತದ ವಾದ ಏನಿತ್ತು?
– ಜಾಧವ್ ವಿಚಾರಣೆ ವೇಳೆ ಪಕ್ಷಪಾತ ನಡೆದಿದ್ದು, ಪಾಕಿಸ್ತಾನ ಜಾಧವ್‍ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸಿದೆ.
– ಅಕ್ರಮವಾಗಿ ಜಾಧವ್ ಬಂಧಿಸಿ ವಿಯೆನ್ನಾ ಒಪ್ಪಂದ ಮುರಿದಿದೆ.
– ಪಾಕಿಸ್ತಾನದಿಂದ ಸತ್ಯದ ಸಮಾಧಿ ಮಾಡೋ ಪ್ರಯತ್ನ ಮಾಡುತ್ತಿದೆ.
– ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ
– ಮೂಲಭೂತ ಹಕ್ಕಿಗಾಗಿ ನಾವು ಹೋರಾಡ್ತಿದ್ದೇವೆ, ಜಾಧವ್ ಬಿಡುಗಡೆ ಮಾಡಿ
Advertisement
ಪಾಕಿಸ್ತಾನದ ವಾದ ಏನು?
– ಜಾಧವ್ ನಮ್ಮ ಬಳಿ ತಪ್ಪೊಪ್ಪಿಕೊಂಡಿದ್ದಾರೆ
– ಜಾಧವ್ ಗಲ್ಲಿಗೇರಿಸಲು ನಮಗೆ ಆತುರ ಇಲ್ಲ
– ಭಾರತದ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ
– ಭಾರತ ನ್ಯಾಯಾಲಯವನ್ನು ರಾಜಕೀಯ ನ್ಯಾಯಾಲಯವನ್ನಾಗಿ ಬಳಕೆ ಮಾಡ್ತಿದೆ
– ರಾಜತಾಂತ್ರಿಕ ನೆರವಿಗೆ ಜಾಧವ್ ಅರ್ಹನಲ್ಲ
– ಪಾಸ್‍ಪೋರ್ಟ್‍ನಲ್ಲಿ ಜಾಧವ್ ಅಂತಾ ಹೆಸರಿಲ್ಲ, ಮುಸ್ಲಿಂ ವ್ಯಕ್ತಿಯ ಹೆಸರು ಇದೆ
Advertisement
ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಮುರಿದಿದ್ದು, ನೌಕಾಪಡೆಯಿಂದ ನಿವೃತ್ತರಾದ ಬಳಿಕ ಜಾಧವ್ ಅವರು ಇರಾನ್‍ನಲ್ಲಿ ಉದ್ಯಮ ನಡೆಸುತ್ತಿದ್ದರು. ಈ ವೇಳೆ ಪಾಕಿಸ್ತಾನ ಅಪಹರಿಸಿತ್ತು. ಆದರೆ, 2016ರ ಮಾರ್ಚ್ 3ರಂದು ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿದೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ ವಕೀಲರ ತಂಡವು ಮೇ 8ರಂದು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ಪರವಾಗಿ ಅರ್ಜಿ ಸಲ್ಲಿಸಿತ್ತು.
#WATCH Arguments by India before International Court of Justice in Kulbhushan Jadhav case, in The Hague, Netherlands https://t.co/1d4En7XlJU
— ANI (@ANI_news) May 15, 2017