ಮುಂಬೈ: ಮಹಾರಾಷ್ಟ್ರದ (Maharashtra) ಬದ್ಲಾಪುರದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಆರೋಪಿ ಅಕ್ಷಯ್ ಪಾಂಡೆಯ ಎನ್‍ಕೌಂಟರ್ (Badlapur encounter) ಮೇಲೆ ವಿಪಕ್ಷ ಕಾಂಗ್ರೆಸ್ (Congress) ಹಾಗೂ ಶಿವಸೇನೆ (Shiv Sena) ಅನುಮಾನ ವ್ಯಕ್ತಪಡಿಸಿವೆ.
ಇದು ನಕಲಿ ಎನ್‍ಕೌಂಟರ್ ಎಂದು ಹತ್ಯೆಗೀಡಾದ ಆರೋಪಿ ಅಕ್ಷಯ್ ತಾಯಿ ಕೂಡ ಆರೋಪಿಸಿದ್ದಾರೆ. ಇದೀಗ ವಿಪಕ್ಷಗಳು ಸಹ ಈ ಎನ್‍ಕೌಂಟರ್ ಬಗ್ಗೆ ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಿವೆ. ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು
ವಿಪಕ್ಷಗಳ ನಡೆಯನ್ನು ಬಿಜೆಪಿ (BJP) ತೀವ್ರವಾಗಿ ಖಂಡಿಸಿದೆ. ಆರೋಪಿ ಅಕ್ಷಯ್ ಸಾವಿನಿಂದ ಮಹಾರಾಷ್ಟ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇಂಡಿಯಾ ಒಕ್ಕೂಟ ಮಾತ್ರ ಶೋಕ ವ್ಯಕ್ತಪಡಿಸುತ್ತಿದೆ. ಅಲ್ಲದೇ ಇದು ಅತ್ಯಾಚಾರಿ ಬಚಾವೋ ಮೈತ್ರಿ ಎಂದು ಬಿಜೆಪಿ ಕಿಡಿಕಾರಿದೆ.
ಈ ಆರೋಪ ಪ್ರತ್ಯಾರೋಪಗಳ ನಡುವೆ ಮಹಾರಾಷ್ಟ್ರ ಸರ್ಕಾರ ಪ್ರಕರಣವನ್ನು ಎಸ್‍ಐಟಿಗೆ ವಹಿಸಿದೆ.
ಬದ್ಲಾಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಆರೋಪಿ ಅಕ್ಷಯ್ ಶಿಂಧೆ, ಪೊಲೀಸ್ ಅಧಿಕಾರಿಯೊಬ್ಬರ ಗನ್ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದು ಆರೋಪಿ ಸಾವನ್ನಪ್ಪಿದ್ದ.
ಅಕ್ಷಯ್ ಶಿಂಧೆ ಥಾಣೆಯ ಶಾಲೆಯಲ್ಲಿ ಅಟೆಂಡರ್ ಆಗಿದ್ದ. ಶಾಲೆಯ ಶೌಚಾಲಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ಆಗಸ್ಟ್ 17 ರಂದು ಆತನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು