ಬೆಂಗಳೂರು: ಇಂದು ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಮಹಿಳೆಯರ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.
ಸೆಮಿಫೈನಲ್‍ನಲ್ಲಿ ಪ್ರಬಲ ಎದುರಾಳಿ ಆಸ್ಟ್ರೇಲಿಯಾವನ್ನ ಸೋಲಿಸುವುದರೊಂದಿಗೆ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿರೋ ಭಾರತ ಮಿಥಾಲಿರಾಜ್ ಪಡೆ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿರೋ ಭಾರತ ಈಗಲೂ ಗೆಲ್ಲುವ ಫೇವರಿಟ್ ಆಗಿದೆ. ಈ ತಂಡದಲ್ಲಿ ಕನ್ನಡತಿಯರಾದ ರಾಜೇಶ್ವರಿ ಗಾಯಕವಾಡ್ ಮತ್ತು ವೇದಾ ಕೃಷ್ಣಮೂರ್ತಿ ಇದ್ದಾರೆ.
Advertisement
ಇನ್ನು 1983ರಲ್ಲಿ ಲಾರ್ಡ್ಸ್ ನಲ್ಲೇ ಕಪಿಲ್ ದೇವ್ ನ ಇತಿಹಾಸವನ್ನ ಮಿಥಾಲಿ ತಂಡ ಪುನರಾವರ್ತಿಸಲಿ ಅಂತ ಕೋಟ್ಯಂತರ ಭಾರತೀಯರು ಪ್ರಾರ್ಥಿಸಿದ್ದಾರೆ. ಈ ಮಧ್ಯೆ ಆಟಗಾರ್ತಿಯರಲ್ಲಿ ಹುಮ್ಮಸ್ಸು ತುಂಬಲು ಫೈನಲ್‍ಗೂ ಮುನ್ನವೇ ಬಿಸಿಸಿಐ ತಲಾ 50 ಲಕ್ಷ ರೂ. ಬಹುಮಾನ ಘೋಷಿಸಿದೆ.
Advertisement
Advertisement
ಟೀಂ ಇಂಡಿಯಾದ ಫೈನಲ್ ಹಾದಿ ಹೀಗಿತ್ತು:
* ಮ್ಯಾಚ್ 1 – ಜೂನ್ 24-ಇಂಗ್ಲೆಂಡ್ ವಿರುದ್ಧ 35 ರನ್ ಗೆಲುವು
* ಮ್ಯಾಚ್ 2 – ಜೂನ್ 29-ವೆಸ್ಟ್‍ಇಂಡೀಸ್ ವಿರುದ್ಧ 7 ವಿಕೆಟ್ ಗೆಲುವು
* ಮ್ಯಾಚ್ 3 – ಜುಲೈ 02-ಪಾಕಿಸ್ತಾನ ವಿರುದ್ಧ 95 ರನ್ ಗೆಲುವು
* ಮ್ಯಾಚ್ 4 – ಜುಲೈ 05-ಶ್ರೀಲಂಕಾ ವಿರುದ್ಧ 16 ರನ್ ಗೆಲುವು
* ಮ್ಯಾಚ್ 5 – ಜುಲೈ 08-ದಕ್ಷಿಣ ಆಫ್ರಿಕಾ ವಿರುದ್ಧ 115 ರನ್ ಸೋಲು
* ಮ್ಯಾಚ್ 6 – ಜುಲೈ 12-ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ ಸೋಲು
* ಮ್ಯಾಚ್ 7 – ಜುಲೈ 15-ನ್ಯೂಜಿಲೆಂಡ್ ವಿರುದ್ಧ 186 ರನ್ ಗೆಲುವು
* ಸೆಮಿಫೈನಲ್-ಜುಲೈ20-ಆಸ್ಟ್ರೇಲಿಯಾ ವಿರುದ್ಧ 36 ರನ್ ಗೆಲುವು
Advertisement
ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಸ್:
* ಮಿಥಾಲಿ ರಾಜ್, ಬ್ಯಾಟಿಂಗ್
* ಹರ್ಮನ್‍ಪ್ರೀತ್ ಕೌರ್, ಬ್ಯಾಟಿಂಗ್
* ಸ್ಮೃತಿ ಮಂಧನಾ, ಬ್ಯಾಟಿಂಗ್
* ರಾಜೇಶ್ವರಿ ಗಾಯಕ್ವಾಡ್, ಬೌಲರ್
* ದೀಪ್ತಿ ಶರ್ಮಾ, ಆಲ್‍ರೌಂಡರ್
* ಪೂನಂ ರೌತ್, ಬ್ಯಾಟಿಂಗ್
* ಎಕ್ತಾ ಬಿಸ್ತ್, ಬೌಲರ್
ಕ್ರಿಕೆಟ್‍ನಲ್ಲಿ ಕನ್ನಡತಿಯರ ಕಮಾಲ್: ಭಾರತ ಫೈನಲ್ ತಲುಪುವಲ್ಲಿ ಕನ್ನಡತಿಯರ ಪಾತ್ರವೂ ಮುಖ್ಯವಾಗಿದೆ. ಅದರಲ್ಲೂ ಸ್ಲೋ ಲೆಫ್ಟ್ ಆರ್ಮ್ ಬೌಲರ್ ವಿಜಯಪುರದ ರಾಜೇಶ್ವರಿ ಗಾಯಕ್‍ವಾಡ್ ಸಹ ಪ್ರಮುಖರು. ಆಸೀಸ್ ವಿರುದ್ಧದ ಸೆಮಿಫೈನಲ್‍ಗೂ ಮುನ್ನ ಲೀಗ್‍ನ ಕೊನೆ ಪಂದ್ಯದ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇ ಬೇಕಾದ ಮ್ಯಾಚ್‍ನಲ್ಲಿ ಕನ್ನಡತಿ ರಾಜೇಶ್ವರಿ ಮೋಡಿ ಮಾಡಿದ್ರು.
7.3 ಓವರ್ ಬೌಲ್ ಮಾಡಿ 15 ರನ್‍ಗೆ 5 ಪ್ರಮುಖ ವಿಕೆಟ್ ಪಡೆದಿದ್ದರು. ಆ ಪಂದ್ಯದಲ್ಲಿ ರಾಜೇಶ್ವರಿ ಪಂದ್ಯ ಶ್ರೇಷ್ಠರಾದ್ರು. ಈ ವೇಳೆ, ರಾಜೇಶ್ವರಿ ಅವರಿಗೆ ಕನ್ನಡದ ಮತ್ತೊಬ್ಬ ಆಟಗಾರ್ತಿ ವೇದಾಕೃಷ್ಣ ಮೂರ್ತಿ ಇಂಗ್ಲೀಷ್ ಅನ್ನ ಕನ್ನಡಕ್ಕೆ ಅನುವಾದ ಮಾಡಿದಾಗ, ರಾಜೇಶ್ವರಿ ಹಿಂದಿಯಲ್ಲಿ ಉತ್ತರಿಸಿದ್ದರು. ಇನ್ನು ರಾಜೇಶ್ವರಿ ಸಾಧನೆಗೆ ಕ್ರಿಕೆಟ್ ದೇವರು ಸಚಿನ್ ಟ್ವೀಟ್ ಮಾಡಿ ಭೇಷ್ ಅಂದಿದ್ದರು.