ನವದೆಹಲಿ: 2021ರ ಶತಮಾನದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದ ಬೆನ್ನಲ್ಲೇ, ಹೊಸ ವರ್ಷದ ಮೊದಲ ದಿನದಂದು ಭಾರತದಲ್ಲಿ ಬರೋಬ್ಬರಿ 69,944 ಮಕ್ಕಳು ಜನಿಸಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ತಿಳಿಸಿದೆ.
ಹೊಸ ವರ್ಷದಂದು ಭಾರತದಲ್ಲಿ 69,944 ಮಗು ಜನಿಸಿದ್ದರೆ ಚೀನಾ 44,940 ಮಕ್ಕಳು ಜನಿಸಿವೆ. ನೈಜೀರಿಯಾ 25,685, ಪಾಕಿಸ್ತಾನ 15,112, ಇಂಡೋನೇಶಿಯಾ 13,256, ಅಮೆರಿಕ 1,086 ಹಾಗೂ ಬಾಂಗ್ಲಾದೇಶದಲ್ಲಿ 8,428 ಮಗು ಜನಿಸಿದೆ.
Advertisement
Advertisement
ವಿಶ್ವಸಂಸ್ಥೆ ಮಾಹಿತಿ ಪ್ರಕಾರ ಪ್ರತಿದಿನ ವಿಶ್ವದಲ್ಲಿ ಅಂದಾಜು 3,95,072 ಮಕ್ಕಳ ಜನನವಾಗುತ್ತಿದ್ದು, ಈ ಪೈಕಿ ಅತಿ ಹೆಚ್ಚು ಶೇ.18 ರಷ್ಟು ಮಕ್ಕಳು ಭಾರತದಲ್ಲೇ ಜನಿಸುತ್ತಿವೆ ಎಂದು ಹೇಳಿದೆ.
Advertisement
ಆರೋಗ್ಯದ ಸಮಸ್ಯೆಯಿಂದ ಕೆಲವು ಶಿಶುಗಳು ಒಂದು ವರ್ಷ ಕೂಡ ಬದುಕಲ್ಲ. ಕೆಲವು ಶಿಶುಗಳು ಒಂದು ದಿನದಲ್ಲೇ ಸಾವನ್ನಪ್ಪುತ್ತದೆ. ಹಾಗಾಗಿ ಡೆಲಿವರಿ ಸಮಯದಲ್ಲಿ ಪ್ರತಿ ಗಂಡು ಹಾಗೂ ಹೆಣ್ಣು ಮಗುವನ್ನು ಉಳಿಸಬೇಕೆಂದು ನಾವು ಈ ವರ್ಷ ರೆಸಲ್ಯೂಶನ್ ತೆಗೆದುಕೊಳ್ಳಬೇಕು ಎಂದು ಭಾರತದ ಯೂನಿಸೆಫ್ ಪ್ರತಿನಿಧಿ ಡಾ. ಯಾಸ್ಮಿನ್ ಅಲಿ ಹಕ್ ಹೇಳಿದ್ದಾರೆ.
Advertisement
2017ರಲ್ಲಿ ಹುಟ್ಟಿದ ದಿನವೇ 10 ಲಕ್ಷ ಮಗು ಮೃತಪಟ್ಟಿತ್ತು. ಇನ್ನೂ ಹುಟ್ಟಿದ 1 ತಿಂಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮಗು ಸಾವನ್ನಪ್ಪಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಶಿಶು ಮರಣದ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸಿದೆ. ಶಿಶುಗಳ ಮರಣದ ಪ್ರಮಾಣವನ್ನು ಕಡಿಮೆ ಮಾಡುವುದು ಒಂದು ಸವಾಲಾಗಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv