ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸ್ಪಷ್ಟಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಅವರು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಎಎಪಿ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿಯ ಫೋಟೋವನ್ನು ಅರವಿಂದ್ ಕೇಜ್ರೀವಾಲ್ ಹಾಗೂ ಪ್ರಕಾಶ್ ರೈ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಈ ನಾಯಕರು ಚರ್ಚೆ ನಡೆಸಿ, ಬಿಜೆಪಿ ವಿರುದ್ಧ ಮತ್ತೊಂದು ಅಲೆಯನ್ನು ಹುಟ್ಟು ಹಾಕಲಿದ್ದಾರೆ ಎಂದು ರಾಷ್ಟ್ರ ರಾಜಕಾರಣದಲ್ಲಿ ಇದೀಗ ತೀವ್ರ ಚರ್ಚೆಯಾಗುತ್ತಿದೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರನ್ನು ಭೇಟಿ ಮಾಡಿದೆ. ರಾಜಕೀಯ ಮೊದಲ ಬಾರಿಗೆ ಪಾದಾರ್ಪನೆ ಮಾಡಿದ ನನಗೆ ಬೆಂಬಲ ನೀಡಲು ಮುಂದಾದ ಆಮ್ ಆದ್ಮಿ ಪಾರ್ಟಿಗೆ (ಎಎಪಿ) ಧನ್ಯವಾದಗಳು. ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದೇವೆ. ಸಮಸ್ಯೆಗಳ ಬಗ್ಗೆ ಅವರ ತಂಡ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಕೋರಿದ್ದೇನೆ. ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಸಿಟಿಜನ್ಸ್ ವಾಯ್ಸ್ ಪಾರ್ಲಿಮೆಂಟ್‍ನಲ್ಲಿ ಸದ್ದು ಮಾಡಲಿದೆ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
Advertisement
Met delhi CM @ArvindKejriwal thanked him and @AamAadmiParty for the support in my political journey. Discussed and requested to share various ways to address issues which his team has commendably done.. #bengalurucentral #citizensvoice in parliament #justasking in parliament too pic.twitter.com/FJu4OirGWW
— Prakash Raj (@prakashraaj) January 10, 2019
Advertisement
ಪ್ರಕಾಶ್ ರೈ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ, ಪ್ರಕಾಶ್ ರೈ ಅವರಂತಹ ವ್ಯಕ್ತಿಗಳು ಸಂಸತ್ತಿಗೆ ಬರಬೇಕು. ನಿಮ್ಮ ಭೇಟಿ ಸಂತಸ ತಂದಿದ್ದು, ಎಎಪಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಜೊತೆಗೆ ನೀನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುತ್ತಿರುವುದನ್ನು ಒಪ್ಪುತ್ತೇನೆ ಹಾಗೂ ಬೆಂಬಲಿಸುತ್ತೇನೆ. ಸಂಸತ್ತಿಗೆ ಸ್ವತಂತ್ರ ಅಭ್ಯರ್ಥಿಗಳು ಹಾಗೂ ನಿಸ್ಪಕ್ಷಪಾತವಾಗಿ ಹೋರಾಡುವವರು ಬೇಕಾಗಿದ್ದಾರೆ ಎಂದು ರೀಟ್ವೀಟ್ ಮಾಡಿದ್ದಾರೆ.
We need people like Prakash Raj to enter Parliament.
Prakash ji, it was great meeting u today. AAP fully supports u and we agree wid ur decision to fight as an independent candidate. We need independent and non-partisan voices too in Parliament. https://t.co/M0LO376dG7
— Arvind Kejriwal (@ArvindKejriwal) January 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv