ಲಿಸ್ಬೆನ್: ಪೋರ್ಚುಗಲ್ (Portugal) ಕ್ಯಾಥೋಲಿಕ್ ಚರ್ಚ್‌ಗಳ ಪಾದ್ರಿಗಳಿಂದ (Catholic Church) 1950ರಿಂದ ಇಲ್ಲಿಯವರೆಗೆ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದಿದೆ ಎಂದು ಸ್ವತಂತ್ರ ತನಿಖಾ ಆಯೋಗ ತಿಳಿಸಿದೆ.
ಚರ್ಚ್‌ಗಳ 500 ಪಾದ್ರಿಗಳ (Priests) ಲೈಂಗಿಕ ದೌರ್ಜನ್ಯದ ಬಗ್ಗೆ ಪೋರ್ಚುಗಲ್‌ನ ಕ್ಯಾಥೋಲಿಕ್ ಚರ್ಚ್ ಒಕ್ಕೂಟವು ಸ್ವತಂತ್ರ ತನಿಖಾ ಆಯೋಗವನ್ನು ನೇಮಿಸಿತ್ತು. ಈ ಸಂಬಂಧ ಆಯೋಗವು ತನಿಖಾ ವರದಿಯನ್ನು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. ಇದನ್ನೂ ಓದಿ: ಬಸ್-ಟ್ರಕ್ ನಡುವೆ ಭೀಕರ ಅಪಘಾತ; 20 ಸಾವು, 60 ಮಂದಿಗೆ ಗಾಯ
ಆಯೋಗವು ಜನವರಿ 2022 ರಲ್ಲಿ ತನಿಖೆಯನ್ನು ಪ್ರಾರಂಭಿಸಿತ್ತು. ದೇಶದ ಎಲ್ಲಾ ಕ್ಯಾಥೋಲಿಕ್ ಸಂಸ್ಥೆಗಳು, ಡಯಾಸಿಸ್ ಮತ್ತು ಧಾರ್ಮಿಕ ಆದೇಶಗಳ ಬಗ್ಗೆ ಸಮೀಕ್ಷೆ ಮಾಡಿತ್ತು. ಸುಮಾರು 500 ಪುಟಗಳ ವರದಿಯನ್ನು ಆಯೋಗವು ರೂಪಿಸಿದೆ.
ಆಯೋಗವು 2022ರ ಜನವರಿಯಿಂದ ಅಕ್ಟೋಬರ್ 31ರ ವರೆಗೆ 500ಕ್ಕೂ ಹೆಚ್ಚು ಸಂತ್ರಸ್ತರನ್ನು ಪತ್ತೆಹಚ್ಚಿ ಹೇಳಿಕೆ ದಾಖಲಿಸಿದೆ. ಚರ್ಚ್ ಪಾದ್ರಿಗಳಿಂದ 1950ರಿಂದ ಈವರೆಗೆ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ
ಲೈಂಗಿಕ ಕಿರುಕುಳ ಅನುಭವಿಸಿರುವ ಸಂತ್ರಸ್ತರು ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪಾದ್ರಿಗಳು ನಮ್ಮ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷ ಪೆಡ್ರೊ ಸ್ಟ್ರೆಚ್ಟ್ ಅವರು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ ನಿರ್ಲಕ್ಷಿಸುವ ಆಘಾತವು ಪೂರ್ಚುಗಲ್‌ಗೆ ಈಗ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k