ಡೆಹ್ರಾಡೂನ್: ಸ್ವತಂತ್ರ ಭಾರತದ ಮೊದಲ ಮತದಾರ (First Voter)ಶ್ಯಾಮ್ ಸರಣ್ ನೇಗಿ (Shyam Saran Negi) ಅವರು ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ ನಿಧನರಾದರು.
ಶ್ಯಾಮ್ ಸರಣ್ ನೇಗಿ ಅವರಿಗೆ 106 ವರ್ಷ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನೇಗಿ ಅವರು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಈ ತಿಂಗಳ 2ರಂದು ಅಂಚೆ ಮೂಲಕ ಮತ ಚಲಾಯಿಸಿ ಯುವ ಜನರಿಗೆ ಮಾದರಿಯಾಗಿದ್ದರು.
Advertisement
Advertisement
ನೇಗಿ ನಿಧನಕ್ಕೆ ಜಿಲ್ಲಾಧಿಕಾರಿ ಕಿನ್ನೌರ್ ಅಬಿದ್ ಹುಸೇನ್ ಸಂತಾಪ ಸೂಚಿಸಿ, ನೇಗಿ ಅವರ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಅವರನ್ನು ಗೌರವಯುತವಾಗಿ ವಿದಾಯ ಹೇಳಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಸ್ವತಂತ್ರ ಭಾರತದ ಮೊದಲ ಮತದಾರ: 1917ರ ಜುಲೈ 1ರಂದು ಜನಿಸಿದ್ದ ನೇಗಿ ಕಲ್ಪಾದಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ್ದರು. 1947ರಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ನಂತರ ಸ್ವತಂತ್ರ ಭಾರತದಲ್ಲಿ (India) ಸಾರ್ವತ್ರಿಕ ಚುನಾವಣೆ ನಡೆದಿತ್ತು. ಈ ವೇಳೆ ನೇಗಿ 1951ರ ಅ. 25ರಂದು ತಮ್ಮ ಮತ ಚಲಾಯಿಸುವ ಮೂಲಕ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದನ್ನೂ ಓದಿ: ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ
Advertisement
Not just first voter of Independent India,but a man with exceptional faith in #democracy.
ECI mourns the demise of Shri Shyam Saran Negi. We are eternally grateful for his service to the Nation. https://t.co/IdmJFXXhFf
— Election Commission of India #SVEEP (@ECISVEEP) November 5, 2022
ಏಕೆಂದರೆ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ 1952ರ ಫೆಬ್ರವರಿ ತಿಂಗಳಲ್ಲಿ ನಡೆದಿತ್ತು. ಆದರೆ ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ ಹಿಮಾಚಲ ಪ್ರದೇಶದಲ್ಲಿ ಹವಮಾನ ವೈಪರಿತ್ಯ ಉಂಟಾಗುತ್ತಿರುತ್ತದೆ. ಅಷ್ಟೇ ಅಲ್ಲದೇ ಆ ಅವಧಿಯಲ್ಲಿ ಭಾರೀ ಹಿಮಪಾತವಾಗುವುದರಿಂದ ನಾಗರಿಕರಿಗೆ ಮತದಾನ ಮಾಡಲು ಸ್ಥಳೀಯ ಕೇಂದ್ರಗಳನ್ನು ತಲುಪಲು ಅಸಾಧ್ಯವಾಗುತ್ತದೆ. ಇದೆಲ್ಲದರ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ 5 ತಿಂಗಳು ಮುಂಚಿತವಾಗಿಯೇ ಚುನಾವಣೆ ನಡೆದಿತ್ತು. ಶ್ಯಾಮ್ ಸರಣ್ ನೇಗಿ ಹಿಂದಿಯ ಸನಮ್ ರೇ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ವಿಚಾರವಾದಿ ಆಗದಿದ್ದರೆ ಮೂರ್ಖ ಜನ ಸುಮ್ಮನೆ ಬಿಡ್ತಿರ್ಲಿಲ್ಲ: ಸಾಹಿತಿ ಬಿ.ಟಿ.ಲಲಿತಾ ನಾಯಕ್