ಸಂವಾದದ ವೇಳೆ ಸುಮಲತಾರದಿಂದ ಎಚ್‍ಡಿಕೆಯ ಸಾಲ ಮನ್ನಾ ಸೀಕ್ರೆಟ್ ರೀವಿಲ್

Public TV
4 Min Read
SUMALATHA BNG b

– ನಾಯಕರ ಮೈತ್ರಿ ವಿನಃ, ಕಾರ್ಯಕರ್ತರ ಮೈತ್ರಿಯಲ್ಲ
– ಮಂಡ್ಯ ಕಾಂಗ್ರೆಸ್ ಸ್ವಾಭಿಮಾನದ, ಉಳಿವಿನ ಪ್ರಶ್ನೆ

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಅಂಬರೀಶ್ ಅವರು ಮೊದಲ ಬಾರಿಗೆ ಪತ್ರಕರ್ತರ ಜೊತೆ ಸಂವಾದ ನಡೆಸಿ ಚುನಾವಣೆಯ ಸ್ಪರ್ಧೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶ ಹಾಗೂ ಸ್ಪರ್ಧೆಯ ಹಿಂದಿನ ಕುರಿತ ಕುತೂಹಲಕಾರಿ ಅಂಶಗಳನ್ನು ತಿಳಿಸಿದ್ದಾರೆ.

ಮೊದಲ ಬಾರಿಗೆ ಪ್ರೆಸ್ ಕ್ಲಬ್‍ಗೆ ಬಂದಿದ್ದೇನೆ. ನಾನು 10ನೇ ತರಗತಿಗೆ ವಿದ್ಯಾಭ್ಯಾಸ ಮುಗಿದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬಂದೆ. ಜೀವನದಲ್ಲಿ ಸಾಕಷ್ಟು ಕಲಿತ್ತಿದ್ದು, ಏಳು ವರ್ಷ ಇದ್ದಾಗ ತಂದೆ ತೀರಿಕೊಂಡರು. ಅಮ್ಮನಿಗೆ ಐವರು ಮಕ್ಕಳು. ನನಗೆ ನನ್ನ ತಾಯಿಯೇ ಆದರ್ಶ. ಅಮ್ಮ ಹೇಗೆ ಕಷ್ಟಪಟ್ಟು ಐವರು ಮಕ್ಕಳ ಪೋಷಣೆ ಮಾಡಿದ್ದಾರೆ ಅದುವೇ ನನ್ನ ಜೀವನಕ್ಕೆ ಸ್ಫೂರ್ತಿ ಎಂದರು.

SUMALATHA BNG

ಸಾಲಮನ್ನಾ ಸುಳ್ಳು ಆಶ್ವಾಸನೆ ಎಚ್ಚರಿಕೆ: ಕೇಂದ್ರ ಮಂತ್ರಿಯಾಗಿ ಅಂಬರೀಶ್ ಎರಡು ತಿಂಗಳು ಮಾತ್ರ ಇದ್ದರೂ ಉತ್ತಮ ಸಾಧನೆ ಮಾಡಿದ್ದಾರೆ. ಇದನ್ನು ಮಂಡ್ಯದಲ್ಲಿ ಬಹಳ ಜನ ಹೇಳುತ್ತಾರೆ. ರೈತರ ಸಾಲಮನ್ನಾ ಮಾಡೋಕೆ ಆಗಲ್ಲ ಎಂದು ಅಂಬರೀಶ್ ಅವರಿಗೆ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೇಳಿದ್ದರು. ಅಲ್ಲದೇ ರಾಜ್ಯ ಬೊಕ್ಕಸದಲ್ಲಿ ಅಷ್ಟು ದುಡ್ಡಿಲ್ಲ, ರಾಜ್ಯದ ನೌಕರರ ಸಂಬಳ ಕೊಡಲು ಹಣ ಇಲ್ಲ, ಸಾಲ ತೀರಿಸಲು ಹಣ ಎಲ್ಲಿ ತರುತ್ತಾರೆ ಎಂದು ನಿಮ್ಮ ಸ್ನೇಹಿತರಿಗ ತಿಳಿಸಿ. ಇದು ಇದು ಸುಳ್ಳು ಆಶ್ವಾಸನೆ ಆಗುತ್ತೆ ಎಂದು ಹೇಳಿದ್ದರು ಎಂದು ಸುಮಲತಾ ವಿವರಿಸಿದರು. ಆದರೆ ದೇವೇಗೌಡರು ಹಿರಿಯರು, ತಂದೆ ಸಮಾನ. ಅಂಬರೀಶ್ ಸ್ಪರ್ಧೆ ಮಾಡಿದಾಗ ದೇವೇಗೌಡ್ರು ಅವರ ವಿರುದ್ಧ ಪ್ರಚಾರ ಮಾಡಿದ್ದಾರೆ. ಆದರೆ ಅಂದು ಅವರು ಎಂದು ವಿರುದ್ಧ ಮಾತನಾಡಿಲ್ಲ. ಈಗಲೂ ದೇವೇಗೌಡರು ನಮ್ಮ ವಿರುದ್ಧ ಮಾತನಾಡಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ನಾಯಕರ ಟೀಕೆಗೆ ಉತ್ತರಿಸಲ್ಲ ಎಂದರು.

SUMALATHA BNG a

ಅಂಬಿ ನನಗೆ ರಾಜಕೀಯ ಸ್ಫೂರ್ತಿ: ಸಿನಿಮಾ ಹಾಗೂ ರಾಜಕೀಯ ಪ್ರವೇಶ ಎರಡು ನನ್ನ ಜೀವನದಲ್ಲಿ ಅನಿರೀಕ್ಷಿತ. ಅಂಬರೀಶ್ ಅವರಿದ್ದಾಗಲೂ ನಾನು ರಾಜಕೀಯದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಅವರು ಇಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅಲ್ಲದೇ ಮನಸ್ಸು ಮಾಡಿದ್ದರೆ ಸಿಎಂ ಕೂಡ ಆಗುತ್ತಿದ್ದರು. ಅಂಬರೀಶ್ ನನಗೆ ರಾಜಕೀಯದಲ್ಲಿ ಸ್ಫೂರ್ತಿ. ಅವರು ಯಾವುದನ್ನು ಪ್ಲಾನ್ ಮಾಡಿ ಮಾಡದೇ ನೇರ ಮಾತಿನ ಮೂಲಕ ನಡೆದುಕೊಳ್ಳುತ್ತಿದ್ದರು. ರಾಜಕೀಯ ಪ್ರವೇಶ ಮಾಡಲು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ನನಗೆ ಧೈರ್ಯ ತುಂಬಿದ್ದಾರೆ. ಇದು ಒಂದು ಭಾಗ್ಯ ಎಂದು ಭಾವಿಸುತ್ತೇನೆ. ಅಂಬರೀಶ್ ಅವರಿಗೆ ಮಂಡ್ಯದ ಬಗ್ಗೆ ಬಹಳ ಒಲವು ಇತ್ತು, ಕನಸುಗಳಿತ್ತು. ಮಂಡ್ಯದ ಅಭಿವೃದ್ಧಿ ನನ್ನ ಗುರಿ. ಮಂಡ್ಯವನ್ನು ಸಿಂಗಾಪುರ ಮಾಡುತ್ತೇನೆ ಎಂದು ನಾನು ಹೇಳಲ್ಲ. ಆದರೆ ಆದರೆ ಅಭಿವೃದ್ಧಿ ಹಾದಿಯಲ್ಲಿ ಸಾಗಲು ನನ್ನ ವ್ಯಾಪ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.

ಸ್ವಾಭಿಮಾನದ ಪ್ರಶ್ನೆ: ಚುನಾವಣೆ ಸ್ಪರ್ಧೆ ಮಾಡಿದ ಬಳಿಕ ಮೊದಲು ನನಗೆ ರೈತ ಸಂಘ ಬೆಂಬಲ ನೀಡಿತು. ಆದರೆ ಆ ನಂತರ ಬೆಂಬಲ ಕೊಟ್ಟ ಬಿಜೆಪಿ ಬಗ್ಗೆ ಮಾತ್ರ ಪ್ರಶ್ನೆ ಮೂಡಿದೆ. ರೈತರ ಸಂಘದ ಬಗ್ಗೆ ಏಕೆ ಪ್ರಶ್ನೆ ಮಾಡಲ್ಲ. ನನ್ನ ಪ್ರಚಾರ ವೇಳೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಭಾವುಟ ಹಿಡಿದು ಬರುತ್ತಿದ್ದಾರೆ ಅವರಿಗೆ ಇದು ಸ್ವಾಭಿಮಾನದ, ಉಳಿವಿನ ಪ್ರಶ್ನೆ. ಹಾಗಾಗಿ ನನ್ನ ಪರ ಪ್ರಚಾರಕ್ಕೆ ಬರುತ್ತಿದ್ದಾರೆ. ಇಲ್ಲಿ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ ವಿನಃ ಕಾರ್ಯಕರ್ತರಲ್ಲಿ ಮೈತ್ರಿ ಆಗಿಲ್ಲ ಎಂದು ತಿಳಿಸಿದರು.

SUMALATHA BNG b

ದಬ್ಬಾಳಿಕೆ, ದೌರ್ಜನ್ಯ: ಒಂದು ಪಕ್ಷ ತೀರ್ಮಾನ ತೆಗೆದುಕೊಂಡಾಗ, ಅಲ್ಲಿನ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕು. ನನ್ನ ಸಂಬಂಧಿಕರು, ಸ್ನೇಹಿತರು ಆ ಪಕ್ಷದಲ್ಲೆ ಇದ್ದಾರೆ. ನಾನು ಅವರನ್ನೆಲ್ಲ ಎದುರು ಹಾಕಿಕೊಂಡು ಸ್ಪರ್ಧೆ ಮಾಡುವುದು ಸರಿನಾ ಎಂಬ ಪ್ರಶ್ನೆ ನಾಮಪತ್ರ ಸಲ್ಲಿಸುವವರೆಗೂ ನನ್ನನ್ನ ಕಾಡುತ್ತಿತ್ತು. ಒಂದೊಮ್ಮೆ ಅದನ್ನೆಲ್ಲಾ ನೆನೆಸಿಕೊಂಡು ಅತ್ತಿದ್ದೀನಿ. ಆದರೆ ಅಂಬರೀಶ್ ಕೆಲಸವನ್ನ ಮುಂದುವರಿಸಲು ಆ ದೇವರೇ ನನಗೆ ಶಕ್ತಿ ತುಂಬಿದ್ದಾನೆ. ಮಂಡ್ಯದಲ್ಲಿ ಕಾಂಗ್ರೆಸ್‍ಗೆ ಲೀಡ್ ಬಂದಿರುವ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಿಲ್ಲ. ಕೆಲವೆಡೆ ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಅದನ್ನ ನಾನು ಪ್ರಚಾರಕ್ಕೆ ಹೋದಾಗ ಹಲವರು ನನ್ನ ಮುಂದೆ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆ ನೋಡಿ ನಾನು ಮಾಡಿದ್ದು ಸರಿ ಅನಿಸಿತ್ತು ಎಂದರು.

ಹಾದಿ ಕಠಿಣ: ನಾನು ಪಕ್ಷೇತರ ಆಗಿ ಸ್ಪರ್ಧಿಸಿರುವುದಿರಿಂದ ನನ್ನ ಹೋರಾಟ ಕಠಿಣವಾಗಿದೆ. ಇದು ಕಷ್ಟದ ಹಾದಿ, ಜನರನ್ನ ಕೇಳಿ ಈ ಹಾದಿ ಹಿಡಿದಿದ್ದೇನೆ. ಕಾಂಗ್ರೆಸ್ ನಿಂದ ಅವಕಾಶ ಸಿಗಲಿಲ್ಲ. ಆ ವೇಳೆ ಪಕ್ಷೇತರ ಬದಲು ಒಂದು ಪಕ್ಷ ಸೇರಿ ಯಾವುದಾದರೂ ಸ್ಥಾನ ಪಡೆಯಬಹುದಿತ್ತು. ಆದರೆ ನಾನು ಹಾಗೆ ಮಾಡದೇ ಪಕ್ಷೇತರಳಾಗಿ ನಿಂತೆ. ಮನೆ ಮಕ್ಕಳಾಗಿ ದರ್ಶನ್, ಯಶ್ ಪ್ರಚಾರಕ್ಕೆ ಬಂದಿದ್ದಾರೆ ವಿನಃ ಸ್ಟಾರ್ ಗಳಾಗಿ ಅಲ್ಲ. ಚಿರಂಜೀವಿ, ರಜನಿಕಾಂತ್ ಬರುತ್ತಾರೆ ಎಂಬ ನಿರೀಕ್ಷೆ ಇಲ್ಲ. ಏಕೆಂದರೆ ಮಂಡ್ಯದ ಸನ್ನಿವೇಶ ಬೇರೆ. ನನ್ನ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಗಿಲ್ಲ, ಆಗುವುದಿಲ್ಲ. ನಾವು ಪಕ್ಷಗಳನ್ನು ಕಟ್ಟಿಕೊಂಡಿಲ್ಲ. ನನ್ನ ತಾಳ್ಮೆಯೇ ನನ್ನ ಶಕ್ತಿ ಎಂದರು. ಇದೇ ವೇಳೆ ತಮ್ಮ ಬದಲು ಅಭಿಷೇಕ್ ಅವರಿಗೆ ಅವಕಾಶ ಕೊಡಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಆದರೆ ಅಭಿಷೇಕ್ ಇನ್ನೂ ಚಿತ್ರರಂಗದಲ್ಲಿ ನಿಂತಿಲ್ಲ. ಅಂಬರೀಶ್ ಸಹ ಚಿತ್ರರಂಗದಲ್ಲಿ ವೇದಿಕೆ ನಿರ್ಮಿಸಿಕೊಂಡು ಬರಲಿಲ್ಲ. ಅಭಿಷೇಕ್ ಚಿತ್ರರಂಗದಲ್ಲೇ ಬೆಳೆಯಲಿ ಎಂದರು.

SUMALATHA BNG c

ಮಂಡ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ದಶಕಗಳಿಂದ ಇದ್ದು, ಅಂಬರೀಶ್ ಕೂಡ ಕೇಂದ್ರ ಸಚಿವ ಸ್ಥಾನ ತೆರೆದು ಸಮಸ್ಯೆ ವಿರುದ್ಧ ಹೋರಾಡಿದ್ದಾರೆ. ಮಂಡ್ಯದಲ್ಲಿ ಕಬ್ಬು ಬೆಳೆಗಾರರ ಸಾಕಷ್ಟು ಸಮಸ್ಯೆಗಳಿವೆ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಇದುವರೆಗೆ ರಾಜಕೀಯ ಇಚ್ಛಾಶಕ್ತಿ ಸಿಗಲೇ ಇಲ್ಲ. ಕಬ್ಬು ಬೆಳೆಗಾರರ ಸಮಸ್ಯೆಗೂ ನಾನು ಧ್ವನಿಯಾಗ್ತೇನೆ. ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಸಾರಿಗೆ ವ್ಯವಸ್ಥೆ ದೃಢ ಆಗಬೇಕು. ಕಾರ್ಖಾನೆಗಳಿಗೆ ತೆರಳುವ ಮಹಿಳಾ ಉದ್ಯೋಗಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಎನ್ ಜಿ ಒ ಗಳ ನೆರವಿನಿಂದ ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಜೊತೆಗೆ ಮಂಡ್ಯದ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *