ಬೆಂಗಳೂರು: ಆರಂಭದಲ್ಲಿ ಟೀ ಮಾರಾಟ ಮಾಡಿ ನಂತರ ವಿವಿಧ ಉದ್ಯಮಗಳನ್ನು ನಡೆಸಿ ಈಗ ಕೋಟಿ ರೂ. ಒಡೆಯನಾಗಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಹಳೆ ಕಸುಬಿನ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.
ಹೌದು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಶ್ರೀಮಂತನಾಗಿರುವ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಪಿ.ಅನಿಲ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದರು. ಆದರೆ ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ನಿಂತಿದ್ದಾರೆ. ಇದನ್ನೂ ಓದಿ: 3ನೇ ಕ್ಲಾಸ್ ಓದಿ ಟೀ ಮಾರಾಟ ಮಾಡುತ್ತಿದ್ದವನ ಆಸ್ತಿ 339 ಕೋಟಿ ರೂ- ಪಕ್ಷೇತರ ಅಭ್ಯರ್ಥಿಯಿಂದ ಆಸ್ತಿ ಘೋಷಣೆ
Advertisement
ಚುನಾವಣಾ ಆಯೋಗಕ್ಕೆ 339 ಕೋಟಿ ರೂ. ಆಸ್ತಿ ಘೋಷಣೆ ಮಾಡಿರುವ ಅನಿಲ್ ಕುಮಾರ್, ವಿಭಿನ್ನವಾಗಿ ಮತದಾರರ ಮತಗೆಲ್ಲಲು ತಮ್ಮ ಹಳೆಯ ವೃತ್ತಿಯಾದ ಟೀ ವ್ಯಾಪಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Advertisement
ಬೊಮ್ಮನಹಳ್ಳಿಯ ಪ್ರಮುಖ ಪ್ರದೇಶಗಳಲ್ಲಿ ಸೈಕಲ್ ನಲ್ಲಿ ಟೀ ಪಾತ್ರೆ ಇಟ್ಟುಕೊಂಡು ಮತದಾರರಿಗೆ ಟೀ ನೀಡಿ ತನಗೆ ಮತವನ್ನು ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದು, ಈ ಮೂಲಕ ಬೊಮ್ಮನಹಳ್ಳಿಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ.