ಭಾರತವು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ 76 ವರ್ಷ ಕಳೆದು 77ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಇವತ್ತು ನಾವು ಮಾತನಾಡುವ, ಸ್ವಂತ ವಿಚಾರಧಾರೆಗಳನ್ನ ಹಂಚಿಕೊಳ್ಳುವ, ಅಪೇಕ್ಷೆಯಂತೆ ಬದುಕುವ ಸ್ವಾತಂತ್ರ್ಯನ್ನ ಯಥೇಚ್ಛವಾಗಿ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಸೇನಾನಿಗಳು, ನೇತಾರರ ತ್ಯಾಗ, ನೋವು, ಸಂಘರ್ಷ, ರಕ್ತ, ಬೆವರ ಹನಿ ಇದಕ್ಕೆ ಕಾರಣ. ಈ ಸುದೀರ್ಘ ಹೋರಾಟದ ಚಿತ್ರಣ ಕಟ್ಟಿಕೊಡುವುದು ಸುಲಭವಲ್ಲ. ಕೆಲ ಪ್ರಮುಖ ಘಟನಾವಳಿಗಳನ್ನ ಇಲ್ಲಿ ದಾಖಲಿಸಲಾಗಿದೆ.
Advertisement
ಸ್ವಾತಂತ್ರ್ಯ ಹೋರಾಟದ ಹಾದಿ
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನ ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಬ್ರಿಟಿಷರ ಆಡಳಿತದ ಬಗ್ಗೆಯೂ ಜನರಲ್ಲಿ ಅಸಮಾಧಾನವಿತ್ತು. ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಗೊಂಡಿತು. ಇದನ್ನ ಕೆಲವು ಭಾರತೀಯ ಇತಿಹಾಸಕಾರರು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದರು. ಆದ್ರೆ ಇತಿಹಾಸಕಾರರು ಈ ದಂಗೆಯಲ್ಲಿ ಕೇವಲ ಸಿಪಾಯಿಗಳು ಮಾತ್ರ ಪಾಲ್ಗೊಂಡಿದ್ದರಿಂದ ʻಸಿಪಾಯಿ ದಂಗೆʼ ಎಂದು ಕರೆದರು. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಿದ್ದ- ಮೋದಿ ಭಾಷಣ ಕೇಳಲಿದ್ದಾರೆ 1800 ವಿಶೇಷ ಆಹ್ವಾನಿತರು
Advertisement
Advertisement
ಸ್ವಾತಂತ್ರ್ಯ ಹೋರಾಟ:
ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯನ್ನು ವಿರೋಧಿಸುವ ಹಲವು ಹೋರಾಟಗಳು ನಡೆದವು. ಅನೇಕ ರಾಜಪ್ರಭುತ್ವಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದು, ಅವರ ಸ್ವಹಿತಾಸಕ್ತಿಯಾಗಿತ್ತು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹಲವಾರು ಬದಲಾವಣೆಗಳು ಹಾಗೂ ಪರಿಣಾಮಕಾರಿ ಸುಧಾರಣೆಗಳು ಕಂಡುಬಂದವು. ಸಾರಿಗೆ ಮತ್ತು ಸಂಪರ್ಕ, ಪತ್ರಿಕೋದ್ಯಮ, ಸಂಘಗಳ ಸ್ಥಾಪನೆ ಮೊದಲಾದ ಆಡಳಿತಗಳಲ್ಲಿ ಸುಧಾರಣೆಗಳು ಕಂಡುಬಂದವು. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ, ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳಿವೆ: ದ್ರೌಪದಿ ಮುರ್ಮು
Advertisement
ಜನರು ಅಲ್ಲಲ್ಲಿ ಸಂಘಟಿತರಾಗಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಸಂಸ್ಥೆಗಳನ್ನು ಅನೇಕ ಪ್ರಾಂತ್ಯಗಳಲ್ಲಿ ಹುಟ್ಟುಹಾಕಿದರು. ಲಾರ್ಡ್ ಲಿಟ್ಟನ್ ಪತ್ರಿಕೋದ್ಯಮದಲ್ಲಿ ಜನರನ್ನು ನಿಯಂತ್ರಿಸಲು 1878ರಲ್ಲಿ ‘ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ’ ಒಂದೆಡೆ ಜಾರಿಗೆ ತಂದರೆ, ಮತ್ತೊಂದೆಡೆ ಲಾರ್ಡ್ ರಿಪ್ಪನ್ ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದು, ಏಕರೂಪ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಟ್ಟನು. ಈ ಮಸೂದೆಯನ್ನು ವಿರೋಧಿಸಿ ಭಾರತದಲ್ಲಿನ ಬ್ರಿಟಿಷರು ಸಂಘಟಿತ ಪ್ರಯತ್ನ ನಡೆಸಿ ಜಯಶೀಲರಾದರು.
ದೇಶಾದ್ಯಂತ ಹಲವಾರು ರೀತಿಯ ಹೋರಾಟಗಳ ಫಲವಾಗಿ ಸ್ವಾತಂತ್ರ್ಯ ಹೋರಾಟವು ಒಂದು ಸ್ವರೂಪ ಪಡೆಯಲು ಸಾಧ್ಯವಾಯಿತು. ಇನ್ಮುಂದೆ ಸಶಸ್ತ್ರ ಹೋರಾಟಗಳು ಉದ್ಭವವಾಗಬಾರದೆಂದು ಬ್ರಿಟಿಷರು ಕಾರ್ಯತಂತ್ರ ರೂಪಿಸಿದರು. ಪರಿಣಾಮವಾಗಿ 1858ರ ರಾಣಿ ಮಹಾಸನ್ನದನ್ನು ಬ್ರಿಟಿಷ್ ಸರ್ಕಾರವು ಘೋಷಿಸಿ ಭಾರತೀಯರನ್ನ ಬ್ರಿಟನ್ನಿನ ಪ್ರಜೆಗಳೆಂದು ಪರಿಗಣಿಸಿತು. ಆ ಮೂಲಕ ಭಾರತೀಯರಿಗೆ ಅನೇಕ ಬಗೆಯ ಸವಲತ್ತುಗಳನ್ನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಣೆ ಮಾಡಿತು. ನಂತರದ ಬೆಳವಣಿಗೆಯಲ್ಲಿ ಉನ್ನತ ವರ್ಗದ ಇಂಗ್ಲಿಷ್ ವಿದ್ಯಾಭ್ಯಾಸವನ್ನ ಕಲಿತ ಹೊಸ ಪೀಳಿಗೆಯ ಭಾರತೀಯರು ಸಂವಿಧಾನಾತ್ಮಕವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಆರಂಭಿಸಿದರು. ಇವರ ಒಟ್ಟಾರೆ ಪ್ರಯತ್ನಗಳ ಪ್ರತಿಫಲವೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ನಾಂದಿಯಾಯಿತು. ಅಂದುಕೊಂಡಂತೆ 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಮುಂದಾಯಿತು. ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಚರ್ಚೆಗಳನ್ನು ಕಾಲನಂತರದಲ್ಲಿ ಕಾಂಗ್ರೆಸ್ ಸಹ ಇಬ್ಬಾಗವಾಯಿತು.
ಬಂಗಾಳ ವಿಭಜನೆ:
ಬಂಗಾಳವು ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನ ಹತ್ತಿಕ್ಕಲು ವೈಸ್‌ರಾಯ್ ಲಾರ್ಡ್ ಕರ್ಜನ್ ಆಡಳಿತಾತ್ಮಕ ನೆಪ ಮುಂದಿಟ್ಟುಕೊಂಡು ಬಂಗಾಳ ವಿಭಜನೆಯ ಯೋಜನೆ ರೂಪಿಸಿದನು. ಪೂರ್ವ ಮತ್ತು ಪಶ್ಚಿಮ ಬಂಗಾಳವನ್ನು ಹಿಂದೂ ಮತ್ತು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗಿ ವಿಂಗಡಿಸಿದನು. ಹೀಗೆ ಸಮುದಾಯಗಳ ನಡುವೆ ಕಂದಕವನ್ನುಂಟುಮಾಡಿ ಸ್ವಾತಂತ್ರ್ಯ ಹೋರಾಟದ ತೀವ್ರತೆ ಕುಗ್ಗಿಸುವ ಸಂಚು ರೂಪಿಸಿದನು.
ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1905ರ ಬಂಗಾಳ ವಿಭಜನೆಯನ್ನು ಅಂದಿನ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು. ಆದ್ರೆ 1906ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ಬಂಗಾಳ ವಿಭಜನೆಯನ್ನ ಬೆಂಬಲಿಸಿತು. ಬಂಗಾಳದ ವಿಭಜನೆಯ ವಿರುದ್ಧ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಯಿತು. ಪ್ರತಿರೋಧ ಒಂದು ಬಗೆಯಾಗಿ ಸ್ವದೇಶಿ ಚಳವಳಿಯನ್ನು ಪ್ರಾರಂಭಿಸಲಾಯಿತು. ತೀವ್ರವಾದಿಗಳು ಇದನ್ನ ದೇಶಾದ್ಯಂತ ಕೊಂಡೊಯ್ದರು. ಈ ನಡುವೆ ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನ ಬಹಿಷ್ಕರಿಸಲು ಸ್ವದೇಶಿ ಆಂದೋಲನ ಕರೆ ನೀಡಿತು. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನ ಪ್ರೇರೇಪಿಸಿದರು. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ 1911ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳ ವಿಭಜನೆಯನ್ನು ಹಿಂಪಡೆಯಿತು.
Web Stories