Independence Day | ರಾಜಸ್ಥಾನಿ ಲೆಹರಿಯಾ ಪೇಟ ಧರಿಸಿ ಗಮನ ಸೆಳೆದ ಮೋದಿ

Public TV
2 Min Read
PM Modi 1

ನವದೆಹಲಿ: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ (78th Independence Day) ಸಂಭ್ರಮ ಮನೆಮಾಡಿದೆ. ಇದರ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಳಗ್ಗೆ 7:30ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಗೆ ಸ್ವಾತಂತ್ರೋತ್ಸವದ ಶುಭಕೋರಿದರು.

PM Modi 2

ಬಳಿಕ ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಮಾತನಾಡಿದ ಮೋದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಈ ವೇಳೆ ಗಮನ ಸೆಳೆದಿದ್ದು ಅವರ ಪೇಟ. ಪ್ರತಿ ವರ್ಷವೂ ವೇಷಭೂಷಣಗಳಿಂದಲೇ ಗಮನ ಸೆಳೆಯುವ ನಮೋ, ಗುರುವಾರ ಕೆಂಪು ಕೋಟೆಯಲ್ಲಿ ರಾಜಸ್ಥಾನಿ ಲೆಹರಿಯಾ ಪ್ರಿಂಟ್‌ ಪೇಟಾ (Leheriya Print Turban) ಧರಿಸಿ ಗಮನ ಸೆಳೆದರು. ಶಿರಸ್ತ್ರಾಣವು ಉದ್ದವಾದ ಬಾಲದೊಂದಿಗೆ ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳ ಮಿಶ್ರಣದಿಂದ ಕೂಡಿದ ಪೇಟ ಧರಿಸಿದ್ದರು. ಇದರೊಂದಿಗೆ ಬಿಳಿ ಕುರ್ತಾ, ತಿಳಿ ನೀಲಿ ಬಣ್ಣದ ಬಂಧಗಾಲಾ ಜಾಕೆಟ್ ಹೆಚ್ಚು ಗಮನ ಸೆಳೆಯಿತು. ಇದನ್ನೂ ಓದಿ: ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ

PM Narendra Modi Independence Day speech

ಲೆಹರಿಯಾ, ಜವಳಿ ಟೈಡೈ ವಿನ್ಯಾಸವು ರಾಜಸ್ಥಾನದ ಸಾಂಪ್ರದಾಯಿಕ ವೈಭವಕ್ಕೆ ಮತ್ತೊಂದು ಹೆಸರಾಗಿದೆ. ಥಾರ್‌ ಮರುಭೂಮಿಯಲ್ಲಿ ನೆಲೆಸಿರುವ ಜನರು ಹೆಚ್ಚಾಗಿ ಇದನ್ನು ಧರಿಸುತ್ತಾರೆ. ಇದನ್ನೂ ಓದಿ: Independence Day: ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ – ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

PM Modi 78th Independence Day Red Fort

ವೇಷಭೂಷಣವೇ ನಮೋ ಆಕರ್ಷಣೆ:
2014ರಲ್ಲಿ ಕ್ಲಾಸಿಕ್ ರಾಜಸ್ಥಾನಿ ಶೈಲಿ, 2015ರಲ್ಲಿ ಕ್ರಿಸ್-ಕ್ರಾಸ್ ರಾಜಸ್ಥಾನಿ, 2016ರಲ್ಲಿ ರೋಮಾಂಚಕ ಟೈ-ಡೈ ಟರ್ಬನ್, 2017ರಲ್ಲಿ ಜ್ಯಾಮಿತೀಯ ಹಳದಿ ಪೇಟ, 2018ರಲ್ಲಿ ಜ್ಯಾಮಿತೀ ಕೇರಸಿ ಪೇಟ, 2019ರಲ್ಲಿ ಓಡ್ ಟು ಇಂಡಿಯನ್ ಹೆರಿಟೇಜ್ ಪೇಟ, 2020ರಲ್ಲಿ ಸ್ಟ್ರೈಕಿಂಗ್ ಕೇಸರಿ ಮತ್ತು ಕೆನೆ ಪೇಟ, 2021ರಲ್ಲಿ ರಾಜಸ್ಥಾನದ ಸಂಪ್ರದಾಯ ಮತ್ತು ಸ್ಥಿತಿಸ್ಥಾಪಕತ್ವದ ಪೇಟ ಹಾಗೂ ವಸ್ತ್ರ ಧರಿಸಿದರು. 2022ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆಂಪು, ಕೇಸರಿ ಮಿಶ್ರಿತ ಪೇಟ ಧರಿಸಿದ್ದ ನಮೋ, 2023ರಲ್ಲಿ ಹಳದಿ, ಹಸಿರು ಮತ್ತು ಕೆಂಪು ಮಿಶ್ರಿತ ರಾಜಸ್ಥಾನಿ ಬಂಧನಿ ಮುದ್ರಣ ಪೇಟ ಧರಿಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇದನ್ನೂ ಓದಿ: Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು

Share This Article