ಬೆಂಗಳೂರು: ಕೇವಲ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರ ಸಿಮೀತವಾಗಿದ್ದ ರಾಜಭವನ ಪ್ರವೇಶವನ್ನು ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರೋತ್ಸವದ ಗಿಫ್ಟ್ ನೀಡಲಾಗಿದ್ದು, ಈ ಮೂಲಕ ರಾಜಭವನ ಸಾಮಾನ್ಯ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಆಗಸ್ಟ್ 16 ರಿಂದ 31 ರವರೆಗೆ ಸಾರ್ವಜನಿಕರ ಪ್ರವೇಶ ಕಲ್ಪಿಸಿಕೊಟ್ಟಿದ್ದು, ರಾಜಭವನ ನಿರ್ಧರಿಸಿರುವಂತೆ ಸಂಜೆ 4 ರಿಂದ 6.30 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದಾಗಿದೆ.
Advertisement
Advertisement
ರಾಜಭವನದ ವಿಶೇಷತೆ ಏನು? ಒಳಗೆ ಏನೇನಿದೆ?
ಬ್ರಿಟಿಷ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ರಾಜಭವನದ ನಿರ್ಮಾಣ ಮಾಡಿದ್ದರು. ಈ ಕಟ್ಟಡವು ಸುಮಾರು 42,380 ಅಡಿ ವ್ಯಾಪ್ತಿಯನ್ನು ಹೊಂದಿದ್ದು, ಇಂಡೋ ಸಾರ್ಥಾನಿಕ್ ಶೈಲಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಕಟ್ಟಡದೊಳಗೆ 19ನೇ ಶತಮಾನದ ಕಲಾಕೃತಿಗಳಿದ್ದು, ಭಾರತೀಯ ಪರಂಪರೆಯನ್ನು ಬಿಂಬಿಸುವ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ.
Advertisement
ಪ್ರಮುಖವಾಗಿ ಗ್ಲಾಸ್ ಹೌಸ್ ಸೇರಿದಂತೆ ಸುಮಾರು 16 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಗುಲಾಬಿ ಉದ್ಯಾನವನ, ಮಲ್ಲಿಗೆ ಸೇರಿದಂತೆ ವಿವಿಧ ಹೂ ಗಿಡಗಳ ಉದ್ಯಾನವನಗಳನ್ನು ಕಾಣಬಹುದು. ಅಲ್ಲದೇ ಕೂಕ್‍ಪೈನ್ ಮರಗಳು ಆಕರ್ಷಣೀಯ ಕೇಂದ್ರಬಿಂದುವಾಗಿದೆ.
Advertisement
ರಾಜಭವನಕ್ಕೆ ಪ್ರವೇಶ ಹೇಗೆ?
ರಾಜಭವನದ ಭೇಟಿಗೆ ಸಾರ್ವಜನಿಕರನ್ನು ತಂಡಗಳಾಗಿ ವಿಂಗಡಿಸಿ ಪ್ರವೇಶ ಕಲ್ಪಿಸಿಕೊಡಲಾಗುತ್ತಿದ್ದು, ಒಂದು ತಂಡದಲ್ಲಿ 30 ಜನರು ಹೋಗಬಹುದಾಗಿದೆ. ಒಂದು ತಂಡ ಸುಮಾರು 20 ರಿಂದ 30 ನಿಮಿಷಗಳ ಕಾಲ ರಾಜಭವನದೊಳಗಿನ ಪರಿಸರ, ವಿಶೇಷತೆಯನ್ನು ವೀಕ್ಷಿಸಬಹುದಾಗಿದೆ.
ರಾಜಭವನಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಮಾಡಿದ ನಂತರ ರಾಜಭವನದಿಂದ ಅಧಿಕೃತವಾಗಿ ಈ-ಮೇಲ್ ಅಥವಾ ಮೊಬೈಲ್ ಎಸ್‍ಎಂಎಸ್ ಮೂಲಕ ಭೇಟಿಯ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುತ್ತದೆ.
ಸಾರ್ವಜನಿಕರ ಪ್ರವೇಶದ ವೇಳೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಹೊಣೆಯನ್ನು ರಾಜಭವನ ಈಗಾಗಲೇ ಬಿಬಿಎಂಪಿಗೆ ನೀಡಿದೆ. ಹೀಗಾಗಿ ರಾಜಭವನದ ಒಳಗಡೆ ಸಾರ್ವಜನಿಕರಿಗಾಗಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ತಂಗುದಾಣಗಳನ್ನು ಬಿಬಿಎಂಪಿ ನಿರ್ಮಿಸಲಿದೆ. ದೆಹಲಿಯಲ್ಲಿನ ರಾಷ್ಟ್ರಪತಿ ಭವನ ಮಾದರಿಯಲ್ಲಿ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ರಾಜಭನದ ಭೇಟಿಗೆ www.rajbhavan.kar.nic.in ವೆಬ್‌ಸೈಟ್ ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಾರ್ಜಜನಿಕರು ರಾಜಭವನದ ಪ್ರವೇಶಕ್ಕೂ ಮುನ್ನ ಕಡ್ಡಾಯವಾಗಿ ಯಾವುದಾದರೂ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews