ತುಮಕೂರು: ಭಾರತದಾದ್ಯಂತ 72ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಮಸೀದಿ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದೆ.
ತುಮಕೂರು ನಗರದ ಗೂಡ್ ಶೆಡ್ ಕಾಲೋನಿಯ ಮಸೀದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಮುಸ್ಲಿಂ ಬಾಂಧವರಿಂದ ಧ್ವಜಾರೋಹಣ ಆಗಿದ್ದು, ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಗೀತೆಯನ್ನು ಮಕ್ಕಳು ಹಾಡಿದ್ದಾರೆ. ಬಳಿಕ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ಮಾನವೀಯತೆ ಮೆರೆದ ಬೆಂಗ್ಳೂರಿನ ಟೆಕ್ಕಿ-ನಗರದ ಹಲವೆಡೆ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ
Advertisement
Advertisement
ರಾಯಚೂರಿನಲ್ಲಿ 72ನೇ ಸ್ವಾತಂತ್ರ್ಯೋತ್ಸವವನ್ನ ಮಧ್ಯರಾತ್ರಿ ಆಚರಿಸಿದ್ದು, ನಗರದ ಭಗತ್ ಸಿಂಗ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಯುವಕರು ಮಧ್ಯ ರಾತ್ರಿ ಧ್ವಜಾರೋಹಣ ಮಾಡಿದ್ದಾರೆ. ರಾಯಚೂರು ಜಿಲ್ಲಾ ಮತ್ತು ತಾಲೂಕಿನ ಫೋಟೋಗ್ರಾಫರ್ ಅಸೋಶಿಯೇಷನ್ ವತಿಯಿಂದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಮಹಾತ್ಮಾ ಗಾಂಧಿ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಆಚರಿಸಲಾಗಿದೆ.
Advertisement
ಕೋಲಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ಮಧ್ಯರಾತ್ರಿ ದ್ವಜಾರೋಹಣ ಮಾಡಿ ಸ್ವಾತಂತ್ರ್ಯದಿನಾಚರಣೆ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv