ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ (Independence Day) ಇಡೀ ದೇಶ ಸಜ್ಜಾಗಿದ್ದು, ಈಗಾಗಲೇ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ಕಂಡು ಬರುತ್ತಿದೆ.
ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯ ಕೆಂಪುಕೋಟೆ (Red Fort) ಸಿದ್ದವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಲ್ಲಿ ಧ್ವಜಾರೋಹಣ ಮಾಡಲಿದ್ದು, ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನ ಭಾಗಿದಾರ್ ಥೀಮ್‍ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ NEP ರದ್ದು: ಸಿದ್ದರಾಮಯ್ಯ ಘೋಷಣೆ
Advertisement
Advertisement
1800 ವಿಶೇಷ ಆಹ್ವಾನಿತರು ಸೇರಿ ಒಟ್ಟು 20 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಭಯೋತ್ಪಾದಕ ದಾಳಿ ತಡೆಯಲು ಹದ್ದಿನಗಣ್ಣಿಡಲಾಗಿದೆ. ಆಂಟಿ ಡ್ರೋನ್ ಸಿಸ್ಟಂ ಅಳವಡಿಸಲಾಗಿದೆ.
Advertisement
ವಿಶೇಷ ಅತಿಥಿಗಳಲ್ಲಿ 600 ಕ್ಕೂ ಹೆಚ್ಚು ಗ್ರಾಮಗಳ 400 ಸರಪಂಚ್‌ಗಳು, ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250 ಅತಿಥಿಗಳು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ತಲಾ 50 ಮಂದಿ ಭಾಗವಹಿಸಲಿದ್ದಾರೆ. ಸೆಂಟ್ರಲ್ ವಿಸ್ತಾ ಕಟ್ಟಡ ಕಟ್ಟಿದ 50 ಮಂದಿ ಶ್ರಮ ಯೋಗಿ ಕಾರ್ಮಿಕರು, 50 ಖಾದಿ ಕಾರ್ಮಿಕರು, ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡಿದ 50 ಮಂದಿ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯಲ್ಲಿ ತೊಡಗಿದ 50 ಮಂದಿ, 50 ಪ್ರಾಥಮಿಕ ಶಾಲಾ ಶಿಕ್ಷಕರು, 50 ದಾದಿಯರು ಮತ್ತು 50 ಮೀನುಗಾರರನ್ನು ವಿಶೇಷವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
Advertisement
ದೇಶಾದ್ಯಂತ ಹರ್ ಘರ್ ತಿರಂಗಾ (Har Ghar Tiranga) ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ಅಮಿತ್ ಶಾ ದಂಪತಿ ತಮ್ಮ ನಿವಾಸದ ಮೇಲೆ ತಿರಂಗಾ ಹಾರಿಸಿದ್ದಾರೆ. ಪ್ರಧಾನಿ ಕರೆ ಮೇರೆಗೆ ಪ್ರಮುಖರು ತಮ್ಮ ಟ್ವಿಟ್ಟರ್ ಪ್ರೊಫೈಲ್‍ಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
Web Stories