– ಪೆಟ್ರೋಲ್, ಡೀಸೆಲ್ ಪೂರೈಕೆಯೂ ಸ್ಥಗಿತ
ಬೆಂಗಳೂರು: ಡಿಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ (State Lorry Owner’s Association) ಕರೆ ನೀಡಿದೆ.
ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ಸೇವೆ ಬಂದ್ ಮಾಡಲಿದ್ದು, ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೆ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ. ಇದನ್ನೂ ಓದಿ: ಜಾತಿ ಸಮೀಕ್ಷೆ | 1 ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? – ಅಶೋಕ್ ಕಿಡಿ
ಮುಷ್ಕರದ (Lorry Strike) ಪರಿಣಾಮವಾಗಿ ಮಂಗಳವಾರದಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ಲಾರಿ ಮುಷ್ಕರದ ಕಾರಣ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಆಚರಿಸಲಿವೆ. ಇದನ್ನೂ ಓದಿ: ಪೀಣ್ಯಾದ ಚಿತಾಗಾರದಲ್ಲಿ ನೆರವೇರಿದ ಬ್ಯಾಂಕ್ ಜನಾರ್ಧನ್ ಅಂತ್ಯಕ್ರಿಯೆ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಮತ್ತು ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ, 5 ಪ್ರಮುಖ ಬೇಡಿಕೆಯನ್ನ ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡುತ್ತಿದ್ದೇವೆ. ಸರ್ಕಾರದಿಂದ ಇದುವರೆಗೂ ಯಾವುದೇ ಮಾತುಕತೆಯಾಗಿಲ್ಲ. ಕರ್ನಾಟಕಕ್ಕೆ ಮಾತ್ರ ಯಾಕೆ ಆರ್‌ಟಿಒ ಚೆಕ್ ಪೋಸ್ಟ್ ಬೇಕು? ಕಳೆದ ಆರು ವರ್ಷದಿಂದ ನಾವು ಪ್ರತಿಭಟನೆ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಪ್ರತಿಭಟಿಸಿಲ್ಲ. ಎಲ್‌ಪಿಜಿ ಟ್ಯಾಂಕರ್‌ಗಳು ರಾತ್ರಿಯಿಂದ ಭರ್ತಿಯಾಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಇಂದಿನಿಂದ ವಾರಪೂರ್ತಿ ಹಲವು ಕಡೆ ಬೀಳಲಿದೆ ಮಳೆ
ಏ.27 ಮತ್ತು 28 ರಂದು ಮಾತುಕತೆ ನಡೆಸಿ ದೇಶಾದ್ಯಂತ ಲಾರಿ ಮುಷ್ಕರ ಮಾಡುತ್ತೇವೆ. ಇಂದು ರಾತ್ರಿಯಿಂದಲೇ ಆರು ಲಕ್ಷ ಲಾರಿಗಳು ರಾಜ್ಯಾದ್ಯಂತ ನಿಲ್ಲಲಿವೆ. ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ ಆರಂಭವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೊಡ್ಡಗೌಡ್ರು, ಕುಮಾರಣ್ಣನ ಮನೆಗೂ ಬಂದಿಲ್ಲ,ಸಿದ್ದರಾಮಯ್ಯನವರಿಗಾಗಿಯೇ ಮಾಡಿದ ವರದಿ: ನಿಖಿಲ್ ಕಿಡಿ
ಲಾರಿ ಮಾಲೀಕರ ಬೇಡಿಕೆ ಏನು?
*ಡೀಸೆಲ್ ದರ ಇಳಿಕೆ ಮಾಡಬೇಕು.
*ಟೋಲ್ ಸಂಗ್ರಹ ಕೈ ಬಿಡಬೇಕು.
*ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್ ತೆಗೆಯಬೇಕು.
*ಎಫ್‌ಸಿ ಶುಲ್ಕ ಕಡಿಮೆ ಮಾಡಬೇಕು.
*ಸರಕು ಸಾಗಣೆ ವಾಹನ ನಿರ್ಬಂಧ ಹಿಂಪಡೆಯಬೇಕು.
ಲಾರಿ ಮುಷ್ಕರದಿಂದ ಏನೇನು ಎಫೆಕ್ಟ್?
*ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ.
*ಏರ್‌ಪೋರ್ಟ್ ಟ್ಯಾಕ್ಸಿ ಸಿಗೋದು ಡೌಟ್.
*ಟೂರಿಸ್ಟ್ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.
*ಜಲ್ಲಿ ಕಲ್ಲು, ಮರಳು ಲಾರಿ ಓಡಾಡಲ್ಲ.
*ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆಯಿಲ್ಲ.
*ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಾಧ್ಯತೆ ಅನುಮಾನ.
*ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ವ್ಯತ್ಯಯ ಸಾಧ್ಯತೆ.
ಯಾವ ಸಂಘಟನೆಗಳ ಬೆಂಬಲ?
– ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ದೆಹಲಿ
– ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್
– ಕರ್ನಾಟಕ ಗೂಡ್ಸ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್
– ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್
– ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್
– ಜಲ್ಲಿ ಕಲ್ಲು, ಮರಳು ಲಾರಿ ಅಸೋಸಿಯೇಷನ್
– ರಾಜ್ಯ ಪಡಿತರ ಆಹಾರ ಧಾನ್ಯಗಳ ಸಾಗಾಣಿಕೆದಾರರ ಸಂಘ
– ಸೌಥ್ ಜೋನ್ ಎಲ್‌ಪಿಜಿ ಅಸೋಸಿಯೇಷನ್