ಡಲ್ ಹೊಡೆದ ಜಿಂಬಾಬ್ವೆ, ತವರಿನಲ್ಲಿ ಸತತ ಸೋಲು – ಸರಣಿ ಭಾರತದ ಪಾಲು

Public TV
2 Min Read
IND VS ZIM 2

ಹರಾರೆ: ಬಲಿಷ್ಠ ಭಾರತದ ಎದುರು ಜಿಂಬಾಬ್ವೆ ಡಲ್ ಹೊಡೆದಿದೆ. ಎರಡನೇ ಏಕದಿನ ಪಂದ್ಯದಲ್ಲೂ ಹೀನಾಯ ಪ್ರದರ್ಶನ ತೋರಿ ಸೋತಿದೆ. ಭಾರತ 5 ವಿಕೆಟ್‍ಗಳ ಅಂತರದ ಜಯದೊಂದಿಗೆ 2-0 ಅಂತರದಲ್ಲಿ ಸರಣಿ ಕೈವಶಮಾಡಿಕೊಂಡಿದೆ.

TEAM INDIA 10

ಜಿಂಬಾಬ್ವೆ,  ಭಾರತಕ್ಕೆ 162 ರನ್‍ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು 25.4 ಓವರ್‌ಗಳ ಅಂತ್ಯಕ್ಕೆ 167 ರನ್ ಸಿಡಿಸಿ 5 ವಿಕೆಟ್‍ಗಳ ಅಂತರದಿಂದ ಗೆದ್ದು ಜಿಂಬಾಬ್ವೆಗೆ ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಣಿಸಿತು.

sanju samson

ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆ.ಎಲ್ ರಾಹುಲ್ 1 ರನ್‍ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಶಿಖರ್ ಧವನ್ 33 ರನ್ (21 ಎಸೆತ, 4 ಬೌಂಡರಿ) ಮತ್ತು ಶುಭಮನ್ ಗಿಲ್ 33 ರನ್ (34 ಎಸೆತ, 6 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಒಂದಾದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ 5ನೇ ವಿಕೆಟ್‍ಗೆ 56 ರನ್ (58 ಎಸೆತ) ಜೊತೆಯಾಟವಾಡಿ ಗೆಲುವನ್ನು ಸುಲಭವಾಗಿಸಿದರು. ಇನ್ನೇನು ಗೆಲುವಿನ ಹೊಸ್ತಿಲಲ್ಲಿ ದೀಪಕ್ ಹೂಡಾ 25 ರನ್ (36 ಎಸೆತ, 3 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

ಅಂತಿಮವಾಗಿ ಸಂಜು ಸ್ಯಾಮ್ಸನ್ ಸಿಕ್ಸರ್ ಸಿಡಿಸಿ ಅಜೇಯ 43 ರನ್ (39 ಎಸೆತ, 3 ಬೌಂಡರಿ, 4 ಸಿಕ್ಸ್) ರನ್ ಚಚ್ಚಿ ಗೆಲುವು ತಂದುಕೊಟ್ಟರು. ಭಾರತ 25.4 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 167 ಸಿಡಿಸಿ ಇನ್ನೂ 146 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಈಗಾಗಲೇ 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

TEAM INDIA 3 1

ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿಂಬಾಬ್ವೆ ಮೊದಲ ಏಕದಿನ ಪಂದ್ಯದಂತೆ ಅದೇ ರಾಗ ಅದೇ ಹಾಡು ಎಂಬಂತೆ ಪೆವಿಲಿಯನ್ ಪರೇಡ್ ಆರಂಭಿಸಿತು. ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನಮ್ಮ ಹೃದಯದಲ್ಲಿ ಅಲ್ಲ: ಫ್ಯಾನ್ಸ್ ಪೋಸ್ಟರ್ ವೈರಲ್

TEAM INDIA 2 2

ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆಯಲು ಭಾರತದ ಬೌಲರ್‌ಗಳ ಬಿಗಿ ದಾಳಿ ಕಾರಣವಾಯಿತು. ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಮುಂದೆ ಜಿಂಬಾಬ್ವೆಯ ಸೀನ್ ವಿಲಿಯಮ್ಸ್ 42 ರನ್ (42 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಯಾನ್ ಬರ್ಲ್ ಅಜೇಯ 39 ರನ್ (47 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ರನ್ ಪೇರಿಸಲು ಪರದಾಡಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

TEAM INDIA 1 4

ಮಿಂಚಿದ ಠಾಕೂರ್:
ಭಾರತದ ಬೌಲರ್‌ಗಳು ಒಬ್ಬರಾದ ಬಳಿಕ ಇನ್ನೊಬ್ಬರು ವಿಕೆಟ್ ಬೇಟೆಯಾಡುತ್ತ ಮಿಂಚಿದರು. ಅಂತಿಮವಾಗಿ ಜಿಂಬಾಬ್ವೆ 38.1 ಓವರ್‌ಗಳಲ್ಲಿ 161 ರನ್ ಸಿಡಿಸಿ ಸರ್ವಪತನ ಕಂಡಿತು. ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತು ಸಂಭ್ರಮಿಸಿದರು. ಉಳಿದಂತೆ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲ್‍ದೀಪ್ ಯಾದವ್, ದೀಪಕ್ ಹೂಡಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *