ಹರಾರೆ: ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದಿದೆ. ಈ ನಡುವೆ ಎರಡು ದೇಶಗಳ ಕ್ರಿಕೆಟಿಗರು 10 ವರ್ಷಗಳ ಬಳಿಕ ಎದುರುಬದುರಾಗಿ ತಮ್ಮ ದೇಶಗಳ ಪರವಾಗಿ ಆಡಿದ ಸಂತಸವನ್ನು ಜೊತೆಯಾಗಿ ಹಂಚಿಕೊಂಡಿದ್ದಾರೆ.
Advertisement
ಟೀಂ ಇಂಡಿಯಾದ ಸ್ಪಿನ್ನರ್ ಕುಲ್‍ದೀಪ್ ಯಾದವ್ ಮತ್ತು ಜಿಂಬಾಬ್ವೆ ತಂಡದ ಆಟಗಾರ ರಯಾನ್ ಬರ್ಲ್ ಪಂದ್ಯದ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಸಂಭ್ರಮಕ್ಕೆ ಕಾರಣವಿದೆ. ಇವರಿಬ್ಬರೂ ಕೂಡ 10 ವರ್ಷಗಳ ಬಳಿಕ ತಮ್ಮ, ತಮ್ಮ ದೇಶದ ಪರ ಮತ್ತೊಮ್ಮೆ ಎದುರುಬದುರಾಗಿ ಆಡಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‍ಗೆ ದಿನಗಣನೆ – ಇಂಡೋ-ಪಾಕ್ ಕದನದಲ್ಲಿ ಇರಲ್ಲ ಇಬ್ಬರು ಬೆಂಕಿ ಬೌಲರ್ಸ್
Advertisement
I last played against this guy 10 years ago at the under 19 World Cup! Awesome to cross paths again @imkuldeep18 pic.twitter.com/JT30xVzDOK
— Ryan Burl (@ryanburl3) August 20, 2022
Advertisement
ಕುಲ್‍ದೀಪ್ ಯಾದವ್ ಮತ್ತು ರಯಾನ್ ಬರ್ಲ್ 10 ವರ್ಷಗಳ ಹಿಂದೆ ಅಂಡರ್-19 ತಂಡದಲ್ಲಿ ಕಾಣಿಕೊಂಡಿದ್ದರು. ಕುಲ್‌ದೀಪ್ ಯಾದವ್ ಭಾರತ ತಂಡದಲ್ಲಿ ಆಡಿದರೆ, ರಯಾನ್ ಬರ್ಲ್ ಜಿಂಬಾಬ್ವೆ ಪರ ಎದುರುಬದುರಾಗಿ ಆಡಿದ್ದರು. ಆ ಬಳಿಕ ಇದೀಗ ಮತ್ತೊಮ್ಮೆ ಎದುರಾಳಿಗಳಾಗಿ ಆಡಿದ್ದಾರೆ. ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಯಾನ್ ಬರ್ಲ್ ಅಜೇಯ 39 ರನ್ (47 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದ್ದರು. ಇತ್ತ ಕುಲ್‍ದೀಪ್ ಯಾದವ್ ಒಂದು ವಿಕೆಟ್ ಕಿತ್ತು ಸಂಭ್ರಮಿಸಿದ್ದರು. ಇದನ್ನೂ ಓದಿ: ಡಲ್ ಹೊಡೆದ ಜಿಂಬಾಬ್ವೆ, ತವರಿನಲ್ಲಿ ಸತತ ಸೋಲು – ಸರಣಿ ಭಾರತದ ಪಾಲು