ಹರಾರೆ: ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ಸಂದರ್ಭ ಮೈದಾನದಲ್ಲಿದ್ದ ಟೀಂ ಇಂಡಿಯಾದ ಆಟಗಾರ ಇಶನ್ ಕಿಶನ್‍ಗೆ ಜೇನುನೊಣವೊಂದು ಕಚ್ಚಿದೆ.
ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಎರಡೂ ತಂಡದ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಆಗಮಿಸಿದ್ದರು. ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಕುಲ್‍ದೀಪ್ ಯಾದವ್ ಜೊತೆ ನಿಂತು ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಜೇನುನೊಣವೊಂದು ಹಾರಿ ಬಂದು ಕಚ್ಚಿದೆ. ಕೂಡಲೇ ಇಶನ್ ಕಿಶನ್ ಎಚ್ಚೆತ್ತುಕೊಂಡು ಜೇನುನೊಣದಿಂದ ಪಾರಾಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೌಲರ್, ಬ್ಯಾಟ್ಸ್‌ಮ್ಯಾನ್‌ಗಳ ಆಟಕ್ಕೆ ಥಂಡಾ ಹೊಡೆದ ಜಿಂಬಾಬ್ವೆ – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ
ಇಶನ್ ಕಿಶನ್ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೂ, ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?
Ishan Kishan during National Anthem, got annoyed by a Bee.#INDvZIM pic.twitter.com/e1RNct2xj1
— Shubham ???????? (@LoyalCTFan) August 18, 2022
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ತ್ರಿವಳಿ ಬೌಲರ್‌ಗಳಾದ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್ ಘಾತಕ ದಾಳಿ ಮತ್ತು ಶಿಖರ್ ಧವನ್, ಶುಭಮನ್ ಗಿಲ್ ಜೋಡಿಯ ಬೊಂಬಾಟ್ ಬ್ಯಾಟಿಂಗ್‍ನಿಂದಾಗಿ ಭಾರತ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಎರಡನೇ ಏಕದಿನ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ.
Live Tv
[brid partner=56869869 player=32851 video=960834 autoplay=true]