ಪುಣೆ: ಟೀಂ ಇಂಡಿಯಾದ ಸತತ 10 ಗೆಲುವಿನ ನಾಗಾಲೋಟಕ್ಕೆ ವಿಂಡೀಸ್ ತಂಡ ಬ್ರೇಕ್ ಹಾಕಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದ್ದು, ಈ ಮೂಲಕ ವೆಸ್ಟ್ ಇಂಡೀಸ್ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ 1-1 ಸಮಬಲ ಸಾಧಿಸಿದೆ.
ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಶತಕ ವ್ಯರ್ಥವಾಗಿದ್ದು, ಅಂತಿಮ 5 ವಿಕೆಟ್ ಗಳನ್ನು ಕೇವಲ 22 ರನ್ ಅಂತರದಲ್ಲಿ ಕಳೆದು ಕೊಂಡ ಟೀಂ ಇಂಡಿಯಾ 47.4 ಓವರ್ ಗಳಲ್ಲಿ 240 ರನ್ ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ ಟೀಂ ಇಂಡಿಯಾ ಸರಣಿ ಗೆಲುವು ಪಡೆಯಲು ಮುಂದಿನ 2 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಕ್ಕೆ ಸಿಲುಕಿದೆ.
Advertisement
ವಿರಾಟ್ ಕೊಹ್ಲಿ ಅಪರೂಪದ ರೆಕಾರ್ಡ್: ಸತತ ಮೂರು ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ನಾಯಕ ವಿರಾಟ್ ಕೊಹ್ಲಿ ಭಾಜನರಾದರು. ಅಲ್ಲದೇ ತವರು ನೆಲದಲ್ಲಿ ಬಾರಿಸಿದ ಸತತ 4ನೇ ಶತಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಲ್ಲದೇ ಈ ಪಂದ್ಯದಲ್ಲಿ ಬಾರಿಸಿದ ಶತಕ ಕೊಹ್ಲಿ ವೃತ್ತಿ ಜೀವನದ 38ನೇ ಶತಕವಾಗಿತ್ತು. ಏಕದಿನ ಪಂದ್ಯಗಳಲ್ಲಿ ಸತತ 4 ಶತಕ ಬಾರಿಸಿರುವ ರೆಕಾರ್ಡ್ ಸದ್ಯ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ಹೆಸರಲ್ಲಿದೆ. ಸಂಗಕ್ಕಾರ 2015ರಲ್ಲಿ ಈ ಸಾಧನೆ ಮಾಡಿದ್ದರು.
Advertisement
Virat Kohli completes 6000 ODI runs in Asia. He is the fastest to the milestone taking 117 innings.
Previous: Sachin Tendulkar in 142 innings. #INDvWI
— Sampath Bandarupalli (@SampathStats) October 27, 2018
Advertisement
ಈ ಸರಣಿಯ 4ನೇ ಏಕದಿನ ಪಂದ್ಯ ಸೋಮವಾರ ಮುಂಬೈಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಕೊಹ್ಲಿ ಶತಕ ಬಾರಿಸಿದರೆ ಸಂಗಕ್ಕಾರ ಸಾಧನೆಗೆ ಸರಿಸಮಾನರಾಗುತ್ತಾರೆ.
Advertisement
ವಿಂಡೀಸ್ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಎಡವಿತು. ಆರಂಭಿಕ ರೋಹಿತ್ ಶರ್ಮಾ 8 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಶಿಖರ್ ಧವನ್ ರನ್ನು ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ಈ ಜೋಡಿ 2ನೇ ವಿಕೆಟ್‍ಗೆ 79 ರನ್ ಜೊತೆಯಾಟ ನೀಡಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಶಿಖರ್ ಧವನ್ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಾಯುಡು 22 ರನ್ ಗಳಿಸಿ ಔಟಾಗುವ ಮೂಲಕ ನಿರೀಕ್ಷೆ ಹುಸಿಗೊಳಿಸಿದರು. ಈ ವೇಳೆಗೆ 25 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಟೀಂ ಇಂಡಿಯಾ 135 ರನ್ ಗಳಿಸಿತ್ತು.
Virat Kohli – first Indian to register 3 100s in successive innings in ODIs
Also his 4th 100 in successive innings at home#IndvWI
— Mohandas Menon (@mohanstatsman) October 27, 2018
ಈ ಹಂತದಲ್ಲಿ ಯುವ ಆಟಗಾರ ರಿಷಭ್ ಪಂತ್ ಉತ್ತಮ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದರೂ 18 ಎಸೆತಗಳಲ್ಲಿ 24 ರನ್ ಗಳಿಸಿ ಹೋಪ್ ಗೆ ವಿಕೆಟ್ ಒಪ್ಪಿಸಿದರು, ಬಳಿಕ ಬಂದ ಧೋನಿ ಕೇವಲ 7 ರನ್ ಗಳಿಸಿ ಔಟಾದರು. ಈ ವೇಳೆಗೆ ಟೀಂ ಇಂಡಿಯಾ 35.5 ಓವರ್ ಗಳಲ್ಲಿ 194 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡ ಸತತ ವಿಕೆಟ್ ಕಳೆದು ಕೊಳ್ಳುತ್ತಿದ್ದರೂ ತಮ್ಮ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ 119 ಎಸೆತ ಎದುರಿಸಿ 10 ಬೌಂಡರಿ 1 ಸಿಕ್ಸರ್ ನೆರವಿನಿಂದ 38ನೇ ಶತಕ ಸಿಡಿಸಿದರು. ಸರಣಿಯಲ್ಲಿ ಕೊಹ್ಲಿ ಸಿಡಿಸಿದ ಸತತ ಮೂರನೇ ಹಾಗೂ ವೆಸ್ಟ್‍ಇಂಡೀಸ್ ವಿರುದ್ಧ ಸತತ ನಾಲ್ಕನೇ ಶತಕ ಇದಾಗಿದೆ. ಬಳಿಕ ಕೇವಲ 22 ರನ್ ಗಳಿಗೆ ಟೀಂ ಇಂಡಿಯಾ 5 ವಿಕೆಟ್ ಕಳೆದು ಕೊಂಡು ಸೋಲುಂಡಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡದ ಪರ ಶಾಯ್ ಹೋಪ್ 95 ರನ್, ಆಶ್ಲೆ ನರ್ಸ್ 40 ರನ್ ಗಳ ನೆರವಿನಿಂದ ವೆಸ್ಟ್ ಇಂಡೀಸ್ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿತ್ತು.
Virat Kohli with his third ODI hundred in a row!
What a player he is, he's scored 397 runs this series and has only been dismissed once.
India are 202/5 and need another 82 to win.#INDvWI 3rd ODI live ⬇️https://t.co/zMzPdFrPWN pic.twitter.com/q38zQe2Wgk
— ICC (@ICC) October 27, 2018
ಇನ್ನಿಂಗ್ಸ್ ಆರಂಭದಲ್ಲೇ ಬೂಮ್ರಾ ಬೌಲಿಂಗ್ ದಾಳಿಗೆ ಸಿಲುಕಿದ ವಿಂಡೀಸ್ ಆರಂಭಿಕರಾದ ಪೊವೆಲ್ 21 ರನ್, ಹೇಮರಾಜ್ 15 ರನ್ ಗಳಿಸಿ ಔಟಾದರು. ಈ ವೇಳೆ ತಮ್ಮ ಕೀಪಿಂಗ್ ಮೂಲಕ ಗಮನ ಸೆಳೆದ ಧೋನಿ ಅದ್ಭುತ ಕ್ಯಾಚ್ ಪಡೆದು ಹೇಮ್‍ರಾಜ್ ಔಟಾಗಲು ಕಾರಣರಾದರು. ಬಳಿಕ ಬಂದ ಅನುಭವಿ ಆಟಗಾರ ಸ್ಯಾಮುವೆಲ್ಸ್ 9 ರನ್ ಗಳಿಸಿ ಖಲೀಲ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.
ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಹೋಪ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಟೀಂ ಇಂಡಿಯಾ ಬೌಲರ್ ಗಳನ್ನು ಕೆಲ ಕಾಲ ಕಾಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಹೆಟ್ಮೆಯರ್ 37 ರನ್ ಗಳಿಸಿದ್ದ ವೇಳೆ ಧೋನಿ ಸ್ಟಂಪಿಂಗ್ ಗೆ ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತಕ್ಕೆ ಆತಂಕ ಮೂಡಿಸಿದ್ದ ಜೋಡಿಯನ್ನು ಬೇರ್ಪಡಿಸಲು ಕುಲದೀಪ್ ಯಾದವ್ ಯಶಸ್ವಿಯಾದರು. ಅಲ್ಲದೇ ಬಳಿಕ ಬಂದ ರೋವ್ಮನ್ ಪೊವೆಲ್ (4 ರನ್) ಪಡೆದು ಮಿಂಚಿದರು. ಈ ವೇಳೆಗೆ 121 ರನ್ ಗಳಿಸಿದ್ದ ವಿಂಡೀಸ್ 5 ವಿಕೆಟ್ ಕಳೆದುಕೊಂಡಿತ್ತು.
Virat Kohli now averages over 60 in ODIs.
He has also gone past MS Dhoni's career runs.#IndvWI
— Bharath Seervi (@SeerviBharath) October 27, 2018
ಇತ್ತ ಹೋಪ್ ಹಾಗೂ ನಾಯಕ ಜಾಸನ್ ಹೋಲ್ಡರ್ ಜೋಡಿ 6ನೇ ವಿಕೆಟ್ ಗೆ 76 ರನ್ ಗಳ ಮಹತ್ವದ ಜೊತೆಯಾಟ ನೀಡಿತು. ಉತ್ತಮವಾಗಿ ಆಡುತ್ತಿದ್ದ ನಾಯಕ ಹೋಲ್ಡರ್ 32 ಗಳಿಸಿ ಔಟಾದರು, ಬಿರುಸಿನ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನಡೆದಿದ್ದ ಹೋಪ್ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ಗಳಲ್ಲಿ ಬಿರುಸಿನ ಆಟವಾಡಿದ ಆಶ್ಲೆ ನರ್ಸ್ 22 ಎಸೆತಗಳಲ್ಲಿ 40 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಕೆಮರ್ 15 ರನ್ ಗಳಿಸಿ ಔಟಾಗದೇ ಉಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Jasprit Bumrah has just bowled the first maiden of this series #IndvWI
— Mohandas Menon (@mohanstatsman) October 27, 2018